ಬೆಂಗಳೂರು/ಪಣಜಿ:ರಾಜ್ಯ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಪ್ರಜಾಪ್ರಭುತ್ವದ ಹಬ್ಬಕ್ಕೆ ನಾಳೆ ಮಹತ್ವದ ದಿನವಾಗಿದ್ದು, ನಾಳೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಮತದಾರರು ಕರ್ನಾಟಕದ ಭವಿಷ್ಯಕ್ಕೆ ಮುನ್ನುಡಿ ಬರೆಯಲಿದ್ದಾರೆ. ಈ ಬಾರಿ ರಾಜ್ಯದಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಬೇಕೆಂದು ಚುನಾವಣಾ ಅಧಿಕಾರಿಗಳು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಈ ಪ್ರಯತ್ನಕ್ಕೆ ಗೋವಾ ಸರ್ಕಾರವು ಸಹ ಸಾಥ್​ ನೀಡಿದೆ.
ಹೌದು, ನಾಳೆ ರಾಜ್ಯದಲ್ಲಿ ನಡೆಯುವ ಮತದಾನಕ್ಕೆ ಗೋವಾ ಸರ್ಕಾರ ಸಹ ಸಾರ್ವತ್ರಿಕ ರಜೆಯನ್ನು ಘೋಷಣೆ ಮಾಡಿದೆ. ಬುಧವಾರ (ಮೆ.10) ಖಾಸಗಿ ಮತ್ತು ಸರ್ಕಾರಿ ನೌಕರರಿಗೆ ರಜೆ ಘೋಷಿಸಿ ಗೋವಾ ಸರ್ಕಾರ ಆದೇಶ ಹೊರಡಿಸಿದೆ.
ಇದನ್ನೂ ಓದಿ:ಗುರು-ಶಿಷ್ಯರ ಶ್ರಮ, ಕೋಟೆನಾಡು ಪ್ರಥಮ: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಚಿತ್ರದುರ್ಗ ಶೈಕ್ಷಣಿಕ ದಾಖಲೆ
ನೌಕರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ರಾಜ್ಯ ಸರ್ಕಾರ ರಜೆ ಘೋಷಣೆ ಮಾಡಿದೆ. ಗೋವಾದಲ್ಲಿ ಸಾಕಷ್ಟು ಕನ್ನಡಿಗರು ಕೆಲಸ ಮಾಡುತ್ತಿದ್ದಾರೆ. ಈ ದೃಷ್ಟಿಯಿಂದ ಮತದಾನಕ್ಕೆ ಅನುಕೂಲವಾಗುವಂತೆ ರಜೆ ಘೋಷಿಸಲಾಗಿದೆ. ಆದರೆ, ಸರ್ಕಾರದ ಈ ನಿರ್ಧಾರಕ್ಕೆ ಗೋವಾ ಕೈಗಾರಿಕೆಗಳ ಒಕ್ಕೂಟದ ಅಧ್ಯಕ್ಷ ದಾಮೋದರ್ ಕೋಚ‌ ಅಸಮಾಧಾನ ಹೊರಹಾಕಿದ್ದು, ಇದು ಅಸಂಬದ್ಧ ಹಾಗೂ ಮೂರ್ಖತನದ ನಿರ್ಧಾರ ಎಂದು ಟೀಕೆ ಮಾಡಿದ್ದಾರೆ.
ನಾಳೆ (ಮೇ.10) ಮತದಾನ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ರಾಜ್ಯ ವಿಧಾನಸಭೆಯು ಒಟ್ಟು 224 ಸದಸ್ಯ ಬಲವನ್ನು ಹೊಂದಿದ್ದು, ಅಧಿಕಾರ ರಚನೆಗೆ 113 ಸದಸ್ಯರನ್ನು ಒಳಗೊಂಡ ಸ್ಪಷ್ಟ ಬಹುಮತವನ್ನು ಯಾವುದಾದರೊಂದು ಪಕ್ಷ ಪಡೆಯಬೇಕಿದೆ. ಒಂದು ವೇಳೆ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೇ ಹೋದಲ್ಲಿ ಮತ್ತೊಮ್ಮೆ ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದ್ದು, ಮೈತ್ರಿ ಸರ್ಕಾರ ರಚನೆಯಾಗುವ ಸಾಧ್ಯತೆ ಇದೆ.(ದಿಗ್ವಿಜಯ ನ್ಯೂಸ್​)
ಡೀಸೆಲ್ ವಾಹನ ನಿಷೇಧಕ್ಕೆ ಕೇಂದ್ರ ಇಂಧನ ಸಚಿವಾಲಯದ ಸಮಿತಿ ಶಿಫಾರಸು

ರಾಜಸ್ಥಾನದ ಬಿಕಾನೇರ್​ನಲ್ಲಿ ಬೃಹತ್ ಲೀಥಿಯಂ ನಿಕ್ಷೇಪ ಪತ್ತೆ: ಈಡೇರಲಿದೆ ದೇಶದ ಶೇ.80ರಷ್ಟು ಬೇಡಿಕೆ

3 ದಿನ 35 ಕೋಟಿ ರೂ.; ಬಾಯ್ಕಾಟ್​ಗೆ ಬಗ್ಗದ, ಬ್ಯಾನ್​ಗೆ ಜಗ್ಗದ ‘ದಿ ಕೇರಳ ಸ್ಟೋರಿ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 6 =
Remember me
