ಮೈಸೂರು:ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿರುವ ಜೆಡಿಎಸ್ ಪಂಚರತ್ನ ಯಾತ್ರೆಯ ಬೃಹತ್ ಸಮಾರೋಪ ಸಮಾವೇಶ ದಳಪತಿಗಳ ಶಕ್ತಿಪ್ರದರ್ಶನದ ಅನಾವರಣದಂತಿದ್ದು, ಇದರಲ್ಲಿ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರು ಅನಾರೋಗ್ಯದ ನಡುವೆಯೂ ಭಾಗಿಯಾಗಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.
ಸಮಾರೋಪ ಸಮಾರಂಭದ ಬೃಹತ್ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ದೇವೇಗೌಡರು, ನಾನು ಜೀವನದಲ್ಲಿ ಉಳಿದಿದ್ದು, ರಾಜಕೀಯದಲ್ಲಿ ಬೆಳೆದಿದ್ದು, ನಿಮ್ಮಿಂದ ಮತ್ತು ದೇವರ ಕೃಪೆಯಿಂದ ಎಂದು ಹೇಳಿದರು.
ಇದನ್ನೂ ಓದಿ:ಚುನಾವಣೆಗೆ ನಿಲ್ಲುವವರಿಗೂ ಇಲ್ಲಿ 5 ಲಕ್ಷ ರೂ. ಕೊಡ್ತಾರೆ!; ಷರತ್ತುಗಳೇನು?
ನನ್ನ ಈ ಸುದೀರ್ಘ ರಾಜಕೀಯ ಜೀವನದಲ್ಲಿ ನಾನು ಧೃತಿಗೆಡದೆ ನಡೆಯಲು ಎರಡು ದೊಡ್ಡ ಶಕ್ತಿ ಎಂದರೆ ದೇವರು ಮತ್ತು ನಮ್ಮ ಕಾರ್ಯಕರ್ತರು. ನನಗೆ ತುಂಬಾ ಆರೋಗ್ಯ ಹದಗೆಟ್ಟಿತ್ತು. ನಿಮ್ಮನ್ನು ನೋಡುತ್ತೇನೋ ಇಲ್ಲವೋ ಎಂದು ಕೊಂಡಿದ್ದೆ. ಸದ್ಯ ಸ್ವಲ್ಪ ಚೇತರಿಕೆ ಕಂಡಿದ್ದೇನೆ. ಈ ಬಾರಿ ದೇವರ ಶಕ್ತಿ, ಕಾರ್ಯಕರ್ತರ ಶ್ರಮದಿಂದ ಈ ಬಾರಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಈ ಸಲ ಪ್ರಾದೇಶಿಕ ಪಕ್ಷಕ್ಕೇ ಸ್ಪಷ್ಟ ಬಹುಮತ: ಪಂಚರತ್ನ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಎಚ್​​ಡಿಕೆ ವಿಶ್ವಾಸ
ನಾನು ಒಬ್ಬ ರೈತನ ಮಗ, ನೀವು ರೈತರ ಮಕ್ಕಳು. ಬಣ್ಣದ ನಾಟಕದ ಮಾತುಗಳಿಂದ ಯಾವುದೇ ಅಧಿಕಾರಕ್ಕೆ ಬಂದವರಲ್ಲ. ಕಾರ್ಯಕರ್ತ, ಮುಖಂಡರ ಶ್ರಮ, ದೇವರ ಶಕ್ತಿಯಿಂದ ಅಧಿಕಾರಕ್ಕೆ ಬರುತ್ತೇವೆ ಎಂದು ಅವರು ಹೇಳಿದರು.
ಪ್ಯಾನ್-ಆಧಾರ್ ಲಿಂಕ್​, ಮಾ. 31 ಕಡೇ ದಿನ: ಸ್ಟೇಟಸ್​ ಚೆಕ್ ಮಾಡಿಕೊಳ್ಳುವುದು ಹೇಗೆ?

ಆನ್​ಲೈನ್​ನಲ್ಲಿ ಐಫೋನ್​ ಬುಕ್​ ಮಾಡಿದ್ರೆ ಬಂದಿದ್ದು ನಿರ್ಮಾ ಸೋಪ್​!; ಮುಂದೇನಾಯ್ತು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eight + 18 =
Remember me
