ಬೆಂಗಳೂರು:ಮಹಿಳೆಯರಿಗೆ ಮೀಸಲಾತಿ ನೀಡಬೇಕೆಂಬ ಪ್ರಾಮಾಣಿಕತೆ ಬಿಜೆಪಿಯಲ್ಲಿ ಕಾಣುತ್ತಿಲ್ಲ. ವೋಟ್​ ಬ್ಯಾಂಕ್​ ರಾಜಕಾರಣಕ್ಕಾಗಿ ತರಾತುರಿಯಲ್ಲಿ ಮಸೂದೆಯನ್ನು ಮಂಡಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಮ ಮನೋಹರ ಲೋಹಿಯಾ ಸಮತಾ ವಿದ್ಯಾಲಯ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ, ಕರ್ನಾಟಕ ಶೋಷಿತ ಸಮುದಾಯಗಳ ಮಹಾಒಕ್ಕೂಟ ಶನಿವಾರ ಹಮ್ಮಿಕೊಂಡಿದ್ದ ಮಹಿಳಾ ಮೀಸಲಾತಿ ವಿಚಾರ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಕೇಂದ್ರ ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ.
ಮಹಿಳೆಯರಿಗೆ ಮೀಸಲಾತಿ ನೀಡಲು ದೇವರೇ ನನ್ನನ್ನು ಕಳುಹಿಸಿದ್ದಾನೆ ಎಂದು ಹೆಳಿಕೊಂಡಿರುವ ದೇವಮಾನವ. ಮಸೂದೆಯಲ್ಲಿ ಮಾತ್ರ ಹಲವು ಷರತ್ತುಗಳನ್ನು ಹಾಕಿ ಮಹಿಳೆಯರಿಗೆ ಟೋಪಿ ಹಾಕಿದ್ದಾರೆ ಎಂದು ಕಿಡಿಕಾರಿದ್ದಾರೆ.
ಮುಖ್ಯಮಂತ್ರಿ@siddaramaiahಅವರು ಡಾ.ರಾಮ ಮನೋಹರ ಲೋಹಿಯಾ ಸಮತಾ ವಿದ್ಯಾಲಯ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮತ್ತು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ "ಮಹಿಳಾ ಮೀಸಲಾತಿ" ವಿಚಾರ ಸಂಕಿರಣವನ್ನು ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞರು, ರಾಜಕೀಯ ವಿಶ್ಲೇಷಕರಾದ…pic.twitter.com/ASuyP4RZcQ
ಇದನ್ನೂ ಓದಿ:ಮಹಿಳಾ ಮೀಸಲಾತಿ ಮಸೂದೆ ಬಿಜೆಪಿಯ ಚುನಾವಣೆ ಗಿಮಿಕ್: ಮಲ್ಲಿಕಾರ್ಜುನ ಖರ್ಗೆ
ಮಹಿಳಾ ಮೀಸಲಾತಿ ಮಸೂದೆಗೆ 15 ವರ್ಷಗಳ ಕಾಲಮಿತಿ ನಿಗದಿ ಪಡಿಸಿರುವುದು ಯಾಕೆ. ಮಸೂದೆ ಅಂಗೀಕಾರವಾದರೆ ಜಾರಿಯಾಗಬೇಕಲ್ಲವೇ. ಮಸೂದೆ ಜಾರಿಯಾಗಲು ಕ್ಷೇತ್ರ ಪುನರ್​ವಿಂಗಡಣೆ, ಜನಗಣತಿ ನಡೆದ ಮೇಲೆ ಕೇಂದ್ರ ಸರ್ಕಾರ ಸುಚಿಸಿದ ದಿನಾಂಕದ ಬಳಿಕ ಜಾರಿಯಾಗಬೇಕೆಂದು ಮಸೂದೆಯಲ್ಲಿ ಹಲವು ಕೊಕ್ಕೆಗಳನ್ನು ಇಟ್ಟಿರುವುದು ಯಾಕೆ. ಇದು ಜಾರಿಯಾಗುವುದಕ್ಕೆ ಮುಂದಿನ 15 ವರ್ಗಷಳು ಮುಗಿದಿರುತ್ತದೆ.
ಒಂದು ವೇಳೆ ಮಹಿಳಾ ಮೀಸಲಾತಿ ತರುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದ್ದಿದ್ದರೆ ನಾನು ಇಷ್ಟೊತ್ತಿಗಾಗಲೇ ಮಸೂದೆಯನ್ನು ಜಾರಿ ಮಾಡುತ್ತಿದ್ದೆ. ಇವತ್ತಿಗೂ ಸಹ ಮಹಿಳೆಯರಿಗೆ ಟಿಕೆಟ್​ ನೀಡುವ ವಿಚಾರಕ್ಕೆ ಬಂದರೆ ಮನಸ್ಸಿದ್ದರೂ ಸೀಟು ಕೊಡಲಾಗುತ್ತಿಲ್ಲ. ಕ್ಷೇತ್ರಗಳಿಂದ ಬರುವ ವರದಿಗಳು ಮಹಿಳಾ ಆಕಾಂಕ್ಷಿಗಲ ಪರ ಇರುವುದಿಲ್ಲ. ಅದಕ್ಕೆ ಮಹಿಳಾ ಮೀಸಲಾತಿ ಜಾರಿಯಾದರೆ ಪ್ರಾತಿನಿಧಯ ನೀಡಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 10 =
Remember me
