ಬೆಂಗಳೂರು:ವಿಧಾನಸಭೆಯಲ್ಲಿ ಬುಧವಾರ ಅಂಗೀಕಾರವಾದ ಗೋಹತ್ಯೆ ನಿಷೇಧ ವಿಧೇಯಕದಲ್ಲಿ ಕಠಿಣಾತಿಕಠಿಣ ನಿಯಮಗಳನ್ನು ಅಡಕ ಮಾಡಲಾಗಿದೆ. ವಿಧಾನಪರಿಷತ್ತಿನಲ್ಲಿಯೂ ಅಂಗೀಕಾರಗೊಂಡ ನಂತರ ಇದು ರಾಜ್ಯಪಾಲರ ಒಪ್ಪಿಗೆ ಬಳಿಕ ಕಾಯ್ದೆಯಾಗಿ ಜಾರಿಯಾಗಲಿದೆ. ಪ್ರಸ್ತಾವಿತ ಕಾಯ್ದೆಯಲ್ಲಿರುವ ಅಂಶಗಳು ಇಂತಿವೆ.
ಇದನ್ನೂ ಓದಿ:80 ಸಾವಿರ ಚೇಳು ಸಾಕಿದ ಭೂಪ! ಒಂದು ಗ್ರಾಂ ಚೇಳಿನ ವಿಷಕ್ಕೆ 7.4 ಲಕ್ಷ ರೂಪಾಯಿ!
1. ಗೋ ಹತ್ಯೆ ಮಾಡಿದರೆ 3 ವರ್ಷಗಳಿಂದ 7 ವರ್ಷಗಳವರೆಗೆ ಕಾರಾಗೃಹವಾಸ2. ಮೊದಲ ಬಾರಿ ಜಾನುವಾರು ಹತ್ಯೆ ಮಾಡಿದರೆ 50 ಸಾವಿರ ರೂ.ಗಳಿಂದ 5 ಲಕ್ಷ ರೂ.ವರೆಗೆ ದಂಡ3. ಎರಡು ಅಥವಾ ಹೆಚ್ಚಿನ ಬಾರಿಯ ಅಪರಾಧಕ್ಕೆ 1 ಲಕ್ಷದಿಂದ 10 ಲಕ್ಷ ರೂ.ದಂಡ ಮತ್ತು ಏಳು ವರ್ಷ ಕಾರಾಗೃಹ ಶಿಕ್ಷೆ4. ಹಸುಗಳ ಸಾಗಣೆ ಮತ್ತು ಶುಲ್ಕ ವಿಧಿಸಲು, ನಿಯಮ ರಚಿಸಲು, ಅನುಮತಿ ನೀಡಲು ಅಧಿಕಾರ5. ಉಪವಿಧಿ 2 ಮತ್ತು ನಿಯಮ 18ರ ಪ್ರಕಾರ ಗೋ ವಧಾಗಾರಗಳಲ್ಲಿ ವಿಲೇವಾರಿ ಮಾಡಲು ನಿಯಮ6. ಸ್ಥಳೀಯ ಆಡಳಿತಕ್ಕೆ ಗೋ ಶಾಲೆ ನಿರ್ವಹಣೆ ಮಾಡುವ ವಿಧಾನಕ್ಕೆ ಸಂಬಂಧಿಸಿದಂತೆ ನಿಯಮ ರೂಪಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ7. ರಕ್ಷಣೆಗೆ ಸಂಬಂಧಪಟ್ಟಂತೆ ಲೆವಿ ಸಂಗ್ರಹಿಸಲು ಸ್ಥಳೀಯ ಸಂಸ್ಥೆಗಳು ಮತ್ತು ಸರ್ಕಾರಕ್ಕೆ ಅವಕಾಶ8. ಸಬ್ ಇನ್‌ಸ್ಪೆಕ್ಟರ್ ಅಧಿಕಾರಿಗಳಿಗೆ ಸಕ್ಷಮ ಪ್ರಾಧಿಕಾರದ ಅಧಿಕಾರ9. ದಾಳಿ ಮಾಡುವುದು, ಪರಿಶೀಲನೆ ಮತ್ತು ವಶಕ್ಕೆ ಪಡೆವ ಅಧಿಕಾರ ಸಬ್ ಇನ್‌ಸ್ಪೆಕ್ಟರ್‌ಗಳಿಗೆ10. ಗೋವನ್ನು ಅನುಮಾನಾಸ್ಪದವಾಗಿ ಕಟ್ಟಿಕೊಂಡಿದ್ದರೆ ಅಥವಾ ಸಾಗಣೆ ಮಾಡುತ್ತಿದ್ದಾಗ ತನಿಖಾಧಿಕಾರಿಗೆ ಸಹಕಾರ ನೀಡಬೇಕು11. ವಶಕ್ಕೆ ಪಡೆದ ವಿಚಾರವನ್ನು ತಕ್ಷಣ ಸಬ್ ಡಿವಿಜನ್ ಮ್ಯಾಜಿಸ್ಟ್ರೇಟರ್‌ಗಳಿಗೆ ತಿಳಿಸಿ ಅಲ್ಲಿಂದ ಮುಟ್ಟುಗೋಲು ಹಾಕಿಕೊಳ್ಳುವುದು12. ಗೋ ಮಾಂಸ ವಶಕ್ಕೆ ಪಡೆದಿದ್ದರೆ ಮನುಷ್ಯನ ಉಪ ಭೋಗಕ್ಕೆ ಉಪಯೋಗವಲ್ಲ ಎಂದು ಪರಿಗಣಿಸಿ ನಾಶಪಡಿಸಬಹುದು13. ವಶಪಡಿಸಿಕೊಂಡ ಹಸುಗಳನ್ನು ಸಾರ್ವಜನಿಕ ಹರಾಜು ಮಾಡಲು ಅವಕಾಶ14. ಸೆಕ್ಷನ್ 19ರ ಪ್ರಕಾರ ಯಾವುದೇ ಸಂದರ್ಭದಲ್ಲಿ ವಶಕ್ಕೆ ಪಡೆದ ಹಸುಗಳನ್ನು ಆರೋಪಿತರಿಗೆ ಹಿಂದಿರುಗಿಸುವಂತಿಲ್ಲ15. ಗೋ ಹತ್ಯೆ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಜಿಲ್ಲೆಗಳಲ್ಲಿ ವಿಶೇಷ ನ್ಯಾಯಾಲಯ ಸ್ಥಾಪನೆ16. ಆರೋಪಿತರನ್ನು ವಶಕ್ಕೆ ಪಡೆಯುವುದು, ಪ್ರಕರಣ ವಿಲೇವಾರಿ ಸೆಷನ್ ಜಡ್ಜ್ ಹಂತದಲ್ಲೇ ನಡೆಯಬೇಕು17. ಪ್ರಕರಣ ಮುಗಿದ ಬಳಿಕ ಆರೋಪ ಸಾಬೀತಾದಲ್ಲಿ ಹಸು, ಸಾಗಣೆ, ವಾಹನ, ಸ್ಥಳ ಮುಟ್ಟುಗೋಲು ಹಾಕಿಕೊಳ್ಳಬಹುದು.18. ಗೋ ರಕ್ಷಣೆಗೆ ಶ್ರಮಿಸುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ19. ಯಾವುದೇ ಲಸಿಕೆ, ಪ್ರಯೋಗಕ್ಕಾಗಿ ಸರ್ಕಾರ ಸ್ಥಾಪನೆ ಮಾಡಿರುವ ಪ್ರಯೋಗಾಲಯಕ್ಕೆ ಈ ನಿಯಮ ಅನ್ವಯವಾಗಲ್ಲ20. ಸಾರ್ವಜನಿಕ ಹಿತಕ್ಕಾಗಿ ಪ್ರಾಣಿಯನ್ನು ಕೊಲ್ಲಲೇಬೇಕೆಂದು ಸರ್ಕಾರದಿಂದ ಪ್ರಮಾಣಿತವಾಗಿದ್ದರೆ ಅನ್ವಯವಾಗಲ್ಲ21. ಸಾಂಕ್ರಾಮಿಕ ರೋಗಗಳ ಜಾನುವಾರುಗಳನ್ನು ಕೊಲ್ಲುವುದಕ್ಕೆ ತೊಂದರೆ ಇಲ್ಲ, ಆದರೆ, ಪಶುವೈದ್ಯಾಧಿಕಾರಿ ಪ್ರಮಾಣಪತ್ರ ಅಗತ್ಯ22. ಗುಣವಾಗದ ಕಾಯಿಲೆ ಹೊಂದಿದ ಹಸು ಕೊಲ್ಲಲು ಅವಕಾಶವಿದೆ, ಆದರೆ, ಪ್ರಮಾಣ ಪತ್ರ ಅಗತ್ಯ23. ಹದಿಮೂರು ವರ್ಷ ಮೇಲ್ಪಟ್ಟ ಎಮ್ಮೆ ಮತ್ತು ಕೋಣ ಸೂಕ್ತ ಪ್ರಾಧಿಕಾರದ ಪರವಾನಗಿಯೊಂದಿಗೆ ವಧಿಸಬಹುದು24. ವಧೆಗೆ ಪಶು ವೈದ್ಯಾಧಿಕಾರಿಯಿಂದ ಪ್ರಮಾಣ ಪತ್ರ ಕಡ್ಡಾಯ25. ಕರ್ನಾಟಕ ಸೊಸೈಟಿ ಆಕ್ಟ್ ಪ್ರಕಾರ ನೊಂದಾಯಿತ ಸಂಸ್ಥೆಗಳಿಗೆ ಮಾತ್ರ ಗೋ ಶಾಲೆ ನಡೆಸಲು ಅಧಿಕಾರ
ನಟಿ ದಿವ್ಯಾ ಸಾವಿಗೂ ಮುನ್ನ ಬರೆದಿಟ್ಟಿದ್ದ ಪತ್ರದಿಂದ ಬಯಲಾಯ್ತು ಪತಿಯ ನಿಜ ಬಣ್ಣ! ಅಪ್ತ ಸ್ನೇಹಿತೆ ಬಿಚ್ಚಿಟ್ಟ ರಹಸ್ಯ

ಮದುವೆಗೆ ಮೂರು ದಿನವಿದ್ದಾಗ ಮರ್ಮಾಂಗವೇ ಕಟ್! 1 ಲಕ್ಷಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಂಡ ಯುವಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + twelve =
Remember me
