|ರುದ್ರಣ್ಣ ಹರ್ತಿಕೋಟೆಬೆಂಗಳೂರು
ರಾಜ್ಯಗಳಲ್ಲಿ ಸಾಲದ ಪ್ರಮಾಣ ಕಡಿಮೆ ಮಾಡಿಕೊಂಡು ಆದಾಯ ಹೆಚ್ಚಿಸಿಕೊಳ್ಳಲು ಕೇಂದ್ರ ಸರ್ಕಾರ ನೀಡಿರುವ ನಿರ್ದೇಶನ ಜಾರಿ ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಅಡಕತ್ತರಿ ಯಲ್ಲಿ ಸಿಲುಕಿದೆ. ಜಿಎಸ್​ಟಿ ಪರಿಹಾರ ವಿಸ್ತರಿಸುವ ವಿಷಯ ಇನ್ನೂ ಡೋಲಾಯಮಾನವಾಗಿರುವ ಸಂದರ್ಭ ದಲ್ಲಿ ಕೇಂದ್ರ ಸರ್ಕಾರ ನೀಡಿರುವ ಸಲಹೆಗಳನ್ನು ಜಾರಿಗೊಳಿಸಲು ಸಾಧ್ಯವೇ ಎಂಬ ಪ್ರಶ್ನೆ ಉದ್ಭವವಾಗಿದೆ.
ಮಾರುಕಟ್ಟೆ ಸಾಲ ಜಾಸ್ತಿಯಾಗಿ, ರಾಜಸ್ವ ಕೊರತೆ ಹೆಚ್ಚಾಗುತ್ತಿದೆ ಎಂಬ ಕಾರಣಕ್ಕೆ ಆದಾಯ ಮೂಲಗಳನ್ನು ಹೆಚ್ಚಿಸಿಕೊಳ್ಳಲು ಕೇಂದ್ರ ಸಲಹೆ ನೀಡಿದೆ. ಆದಾಯವನ್ನು ಎಲ್ಲೆಲ್ಲಿ ಹೆಚ್ಚು ಮಾಡಿಕೊಳ್ಳಬಹುದು ಎಂಬುದನ್ನು ಹೇಳಿದೆ. ರಾಜ್ಯದಲ್ಲಿಯೂ ಸಹ ಸಾಲ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಸಭೆ ನಡೆಸಿ ಯಾವ ರೀತಿಯಲ್ಲಿ ಆರ್ಥಿಕ ಶಿಸ್ತು ಕಾಪಾಡಬೇಕೆಂದು ಪಾಠ ಮಾಡಿದೆ. ಜಿಎಸ್​ಟಿ ಜಾರಿಯಲ್ಲಿರುವ ಕಾರಣ ದಿಂದ ಆದಾಯ ಸಂಗ್ರಹಣೆಗೆ ಪರ್ಯಾಯ ಮಾರ್ಗಗಳನ್ನೇ ಹುಡುಕಬೇಕಾಗಿದೆ. ಸಾಲ ಇದೇ ರೀತಿಯಲ್ಲಿ ಸಾಗಿದರೆ ಆರ್ಥಿಕ ಕುಸಿತವಾಗ ಬಹುದೆಂಬ ಎಚ್ಚರಿಕೆಯನ್ನು ಕೇಂದ್ರ ನೀಡಿದೆ. ತೆರಿಗೆ ಆದಾಯದ ಹೆಚ್ಚಳಕ್ಕೆ ಇರುವುದು ಸೀಮಿತ ಅವಕಾಶ. ಆದ್ದ ರಿಂದ ತೆರಿಗೆಯೇತರ ಆದಾಯವನ್ನೇ ಹೆಚ್ಚು ಮಾಡಿಕೊಳ್ಳಬೇಕೆಂದು ಕೇಂದ್ರ ಹೇಳಿದೆ. ಆದರೆ, ಚುನಾವಣಾ ವರ್ಷದಲ್ಲಿ ಯಾವುದನ್ನೂ ಜಾರಿಗೆ ತರುವ ಸ್ಥಿತಿಯಲ್ಲಿ ಸರ್ಕಾರ ಇಲ್ಲ. ಸರ್ಕಾರದಿಂದ ಪಡೆಯುವ ಪ್ರಮಾಣಪತ್ರಗಳಿಗೂ ಈಗ ಇರುವ ಶುಲ್ಕವನ್ನು ದುಪ್ಪಟ್ಟು ಮಾಡಬೇಕೆಂದು ಕೇಂದ್ರ ಹೇಳುತ್ತದೆ.
ಕೆಲವು ರಾಜ್ಯಗಳಲ್ಲಿ ಸರ್ಕಾರಿ ಕಚೇರಿಗಳು, ನ್ಯಾಯಾಲಯ ಕಟ್ಟಡಗಳು, ಪಾರ್ಕ್​ಗಳನ್ನು ಅಡವಿಟ್ಟು ಸಾಲ ಮಾಡಲಾಗಿದೆ. ಕರ್ನಾಟಕ ಸೇರಿ ಯಾವುದೇ ರಾಜ್ಯಗಳು ಇಂತಹ ಪರಿಸ್ಥಿತಿ ತಂದುಕೊಳ್ಳಬಾರದೆಂದು ಸಲಹೆ ನೀಡಿದೆ. ಅದಕ್ಕಾಗಿಯೇ ಪರ್ಯಾಯಗಳನ್ನು ಸೂಚಿಸಿದೆ. ರೂಪಾಯಿ ಮೌಲ್ಯದ ಕುಸಿತ ಇನ್ನೂ ಕೆಲವು ಕಾಲ ಇದೇ ರೀತಿಯಲ್ಲಿ ಮುಂದುವರಿಯಲಿದೆ ಎಂಬುದು ಅರ್ಥಶಾಸ್ತ್ರಜ್ಞರ ಎಚ್ಚರಿಕೆಯಾಗಿದೆ. ಆದ್ದರಿಂದಲೇ ಕೇಂದ್ರ ಸರ್ಕಾರ ಪರ್ಯಾಯ ಮೂಲಗಳಿಗೆ ಸಿದ್ಧವಾಗಿರುವಂತೆ ಸೂಚನೆ ನೀಡಿದೆ.
ರಾಜ್ಯದಲ್ಲಿ ಜಾರಿ ಸುಲಭವಲ್ಲ:ಕೇಂದ್ರ ಸರ್ಕಾರ ಸೂಚಿಸಿದ್ದರೂ ರಾಜ್ಯ ಯಾವುದೇ ಶುಲ್ಕ ಹೆಚ್ಚಿಸದ ಹಾಗೂ ಸಬ್ಸಿಡಿ ಕಡಿತ ಮಾಡಲಾಗದ ಒತ್ತಡಲ್ಲಿದೆ. ಚುನಾವಣೆ ವರ್ಷದಲ್ಲಿ ಕೇಂದ್ರದ ಸಲಹೆಗಳನ್ನು ಜಾರಿ ಮಾಡಲು ಮುಂದಾದರೆ ಸಾರ್ವಜನಿಕರಿಂದ ವಿರೋಧಕ್ಕೆ ಒಳಗಾಗಬೇಕಾಗುತ್ತದೆ. ವಿದ್ಯುತ್ ದರ ಏರಿಕೆಗೊಂಡಿದ್ದು, ಆಸ್ತಿ ತೆರಿಗೆ ಶೇ.30ರಷ್ಟು ಹೆಚ್ಚಳವಾಗಿದೆ. ಆದ್ದರಿಂದ ಮತ್ತಷ್ಟು ಹೊರೆ ಹಾಕಿದರೆ ಜನಾಭಿಪ್ರಾಯ ವಿರುದ್ಧವಾಗುತ್ತದೆ ಎಂಬ ಆತಂಕ ಎದುರಾಗಿದೆ.
ಹೆಚ್ಚಾಗುತ್ತಿರುವ ರಾಜಸ್ವ ಕೊರತೆ:ರಾಜ್ಯದಲ್ಲಿ ರಾಜಸ್ವ ಕೊರತೆ ಹೆಚ್ಚಾಗುತ್ತಿದೆ. ಇದು ಆತಂಕದ ಬೆಳವಣಿಗೆಯೇ ಆಗಿದೆ. 14,699 ಕೋಟಿ ರೂ.ಗಳಿಗೆ ತಲುಪಿದ್ದು, ಇದು ಜಿಎಸ್​ಡಿಪಿಯ ಶೇ.0.78ರಷ್ಟು ಇದೆ. 2021-22 ರಲ್ಲಿ ಈ ಪ್ರಮಾಣ ಶೇ.0.36 ರಷ್ಟು ಇತ್ತು.
ವಸೂಲಾಗಬೇಕಾದ ಸರ್ಕಾರಿ ಸಾಲ:ವಿವಿಧ ವಲಯಗಳಲ್ಲಿ ಸರ್ಕಾರ ನೀಡಿರುವ ಸಾಲದ ಮೊತ್ತ 24,980.58 ಕೋಟಿ ರೂ.ಗಳಾಗಿವೆ. ಇದಲ್ಲದೆ ವಿವಿಧ ವರ್ಗಗಳಿಗೆ ಸಾಲ, ಶಿಕ್ಷಣ, ಆರೋಗ್ಯ, ನೀರು ಸರಬರಾಜು, ಸಮಾಜ ಕಲ್ಯಾಣ, ಕೃಷಿ, ಗ್ರಾಮೀಣಾಭಿವೃದ್ಧಿ, ವಸತಿ, ಇಂಧನ, ಉದ್ದಿಮೆ, ಸಾರಿಗೆ, ಸಹಕಾರ ವಲಯ, ಸರ್ಕಾರಿ ನೌಕರರಿಗೆ ನೀಡಿರುವ ಸಾಲ ಬಾಕಿಯಾಗಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
