ಬೆಂಗಳೂರು:ಸ್ಟಾರ್ಟಪ್​ ಆರಂಭಿಸಿ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲೇ ಉದ್ಯಮ ನಡೆಸುತ್ತಿರುವ ವ್ಯಕ್ತಿಯೊಬ್ಬ, ಬೆಂಗಳೂರಿನ ಬಗ್ಗೆ ತೀರಾ ಕಳಪೆ ನಗರ ಎನ್ನುವ ರೀತಿಯಲ್ಲಿ ಮಾತನಾಡಿದ್ದು, ಅದಕ್ಕೆ ತೆಲಂಗಾಣದ ಸಚಿವರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮಾತ್ರವಲ್ಲ, ಬೆಂಗಳೂರು ಬಿಟ್ಟು ಹೈದರಾಬಾದ್​ಗೆ ಬನ್ನಿ ಎಂದೂ ಕರೆ ನೀಡಿದ್ದಾರೆ. ಇದನ್ನು ಗಮನಿಸಿದ ಸಚಿವ ಡಾ.ಕೆ. ಸುಧಾಕರ್ ಆ ಸಚಿವರಿಗೆ ದಿಟ್ಟ ಉತ್ತರವನ್ನೇ ನೀಡಿದ್ದಾರೆ.
ಭಾರತದ ಸಿಲಿಕಾನ್ ವ್ಯಾಲಿ ಎನಿಸಿಕೊಂಡಿರುವ ಬೆಂಗಳೂರಿನ ಎಚ್​ಎಸ್​ಆರ್​/ಕೋರಮಂಗಲದಲ್ಲಿ ಸ್ಟಾರ್ಟಪ್​ಗಳಿಂದ ಭಾರಿ ತೆರಿಗೆ ಸಂಗ್ರಹವಾಗುತ್ತಿದ್ದರೂ ಕೆಟ್ಟ ರಸ್ತೆಗಳು, ದಿನಾ ವಿದ್ಯುತ್ ಕಡಿತ, ಅಸಮರ್ಪಕ ನೀರು ಪೂರೈಕೆ, ಬಳಸಲು ಯೋಗ್ಯವಲ್ಲದ ಪಾದಚಾರಿ ರಸ್ತೆಗಳಿವೆ. ಎಷ್ಟೋ ಗ್ರಾಮೀಣ ಪ್ರದೇಶಗಳು ಭಾರತದ ಸಿಲಿಕಾನ್ ವ್ಯಾಲಿಗಿಂತ ಉತ್ತಮ ಮೂಲಸೌಕರ್ಯಗಳನ್ನು ಹೊಂದಿವೆ ಎಂದು ಸ್ಟಾರ್ಟಪ್​ ಒಂದರ ಮಾಲೀಕ ತನ್ನ ಅನಿಸಿಕೆ ಹಂಚಿಕೊಂಡಿದ್ದರು.
ಉದ್ಯಮಿಯ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ತೆಲಂಗಾಣದ ನಗರಾಭಿವೃದ್ಧಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಕೆ.ಟಿ.ರಾಮರಾವ್, ಗಂಟುಮೂಟೆ ಕಟ್ಟಿಕೊಂಡು ಹೈದರಾಬಾದ್​ಗೆ ಬನ್ನಿ. ನಮ್ಮಲ್ಲಿ ಉತ್ತಮ ಮೂಲಸೌಕರ್ಯ ಹಾಗೂ ಸಾಮಾಜಿಕ ಸೌಕರ್ಯವಿದೆ. ನಮ್ಮ ವಿಮಾನನಿಲ್ದಾಣ ಅತ್ಯುತ್ತಮವಾದವುಗಳಲ್ಲಿ ಒಂದು, ಸಿಟಿಯಿಂದ ಹೊರಗೆ ಹೋಗಿ ಬರುವುದು ಗಾಳಿಯಲ್ಲಿ ತೇಲಿದಂತೆ. ಎಲ್ಲಕ್ಕಿಂತ ಹೆಚ್ಚು ನಮ್ಮ ಸರ್ಕಾರ ಇನ್ನೋವೇಷನ್, ಇನ್​ಫ್ರಾಸ್ಟ್ರಕ್ಚರ್​, ಇನ್​ಕ್ಲೂಸಿವ್ ಗ್ರೋಥ್ ಎಂಬ ಮೂರು ಐ ಮಂತ್ರಗಳ ಮೇಲೆ ಕೇಂದ್ರಿತವಾಗಿದೆ ಎಂದು ಹೇಳಿದ್ದಾರೆ.
ಕೆಟಿಆರ್​ ಹೇಳಿಕೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಕ್ಕ ಉತ್ತರ ನೀಡಿದ್ದು, ಕೆಟಿಆರ್ ಅವರೇ, ನಮ್ಮ ಬೆಂಗಳೂರಿನ ಸ್ಪರ್ಧೆ ಭಾರತದ ಯಾವುದೇ ರಾಜ್ಯ ಅಥವಾ ನಗರಗಳ ಜೊತೆಯಲ್ಲ, ನಮ್ಮ ಸ್ಪರ್ಧೆ ಏನಿದ್ದರೂ ಸಿಲಿಕಾನ್ ವ್ಯಾಲಿಗಳಾದ ಸಿಂಗಾಪುರ, ಟೆಲ್ ಅವೈವ್​ಗಳ ಜೊತೆ. ಬಹಳಷ್ಟು ದೇಶ-ರಾಜ್ಯಗಳ ಜನರಿಗೆ ಬೆಂಗಳೂರು ಆಶ್ರಯ-ಆತಿಥ್ಯ ನೀಡಿದೆ ಎಂಬ ಹೆಮ್ಮೆ ನಮಗಿದೆ ಎಂದು ಹೇಳಿದ್ದಾರೆ. ಬೆಂಗಳೂರನ್ನು ಟೀಕಿಸಿರುವ ಕನ್ನಡಿಗರು ಕೂಡ ಕಾಲೆಳೆಯುವ ಉತ್ತರವನ್ನು ನೀಡಿ ಎದಿರೇಟು ನೀಡಿದ್ದಾರೆ.
@ktrtrsgaru – you should know that Bengaluru's competition has never been with other Indian cities or states. Our competition is with the likes of Silicon Valley, Singapore, and Tel Aviv. We in Bangalore are proud hosts to people from multiple states and countries.@BSBommaihttps://t.co/m7cKqUUipg— Dr Sudhakar K (@mla_sudhakar)April 4, 2022
@ktrtrsgaru – you should know that Bengaluru's competition has never been with other Indian cities or states. Our competition is with the likes of Silicon Valley, Singapore, and Tel Aviv. We in Bangalore are proud hosts to people from multiple states and countries.@BSBommaihttps://t.co/m7cKqUUipg
ಇನ್ನು ಮ್ಯಾಂಗೋ ವಾರ್!?: ಹಲಾಲ್​-ಜಟ್ಕಾ ಬಳಿಕ ಮಾವಿಗೂ ಬಂತು ಧರ್ಮಸಂಘರ್ಷ..
ಮಸೀದಿಗಳಲ್ಲಿನ ಮೈಕ್​ ವಿರುದ್ಧ ಶ್ರೀರಾಮಸೇನೆ ಗುಡುಗು; ನಿರ್ಬಂಧಿಸದಿದ್ದರೆ ದೇವಸ್ಥಾನಗಳಲ್ಲಿ ಮೈಕ್​ ಹಾಕಿ ಭಜನೆ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + one =
Remember me
