|ರುದ್ರಣ್ಣ ಹರ್ತಿಕೋಟೆಬೆಂಗಳೂರು
ಕೇಂದ್ರ ಸರ್ಕಾರ ತಂದಿರುವ ಕೃಷಿ ಕಾನೂನುಗಳ ಅನುಷ್ಠಾನಕ್ಕೆ ಅನುಕೂಲ ಮಾಡಿಕೊಡುವ ಜತೆಯಲ್ಲೇ ರೈತರ ಆದಾಯ ದ್ವಿಗುಣಗೊಳಿಸುವ, ಎರಡನೇ ಹಂತದ ಕೃಷಿಗೆ ಪೂರಕವಾಗಿ ನೂತನ ಕೃಷಿ ನೀತಿ ತರಲು ರಾಜ್ಯ ಸರ್ಕಾರ ಸಜ್ಜಾಗುತ್ತಿದೆ. ಕೃಷಿ ಮತ್ತು ತೋಟ ಗಾರಿಕೆಗೆ ಉದ್ದಿಮೆ ಸ್ವರೂಪ ನೀಡುವ ಮೂಲಕ ಕೃಷಿ ಹಾಗೂ ಪೂರಕ ಕ್ಷೇತ್ರಗಳನ್ನು ಲಾಭದಾಯಕವಾಗಿಸುವುದು, ಉದ್ಯೋಗಾವಕಾಶ ಹೆಚ್ಚಿಸುವುದು ಸರ್ಕಾರದ ಆಶಯ. ಕೃಷಿ ಹಾಗೂ ಪೂರಕವಾದ ವಲಯ ಗಳ ನಡುವೆ ಸಮನ್ವಯವಿಲ್ಲದ್ದರಿಂದಾಗಿ ಈ ವಲಯದಲ್ಲಿನ ಸವಾಲುಗಳನ್ನು ಎದುರಿಸ ಲಾಗುತ್ತಿಲ್ಲ. ಇಂದಿನ ಬೆಳವಣಿಗೆಗಳಿಗೆ ತಕ್ಕಂತೆ ಕೃಷಿ ವಲಯವನ್ನು ಸಜ್ಜುಗೊಳಿಸುವ ಉದ್ದೇಶ ಸರ್ಕಾರದ್ದಾಗಿದೆ.
ಯುವಕರ ಆಕರ್ಷಣೆ:ರಾಜ್ಯದಲ್ಲಿ 120 ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ 86.80 ಲಕ್ಷ ರೈತರಿದ್ದಾರೆ. ಈ ಕುಟುಂಬಗಳಿಗೆ ಕೃಷಿ ವಿವಿಗಳ ಸಂಶೋಧನೆ ಲಾಭ ದೊರಕಿಸಿಕೊಡುವುದು, ವಿದ್ಯಾವಂತ ಯುವಕರನ್ನು ಆಕರ್ಷಿಸಿ ರೈತೋದ್ಯಮಿಗಳನ್ನಾಗಿ ಮಾಡುವ ಮಹತ್ವಕಾಂಕ್ಷೆ ಹೊಸ ನೀತಿಯ ಹಿಂದಿದೆ.
ಉತ್ಪಾದನೆ ಹೆಚ್ಚಳ ಗುರಿ:ರಾಜ್ಯದಲ್ಲಿ 300 ಮೆಟ್ರಿಕ್ ಟನ್ ತೋಟಗಾರಿಕೆ ಉತ್ಪನ್ನ ಉತ್ಪಾದನೆಯಾದರೆ, ಕೃಷಿ ಉತ್ಪನ್ನ ಪ್ರಮಾಣ 285 ಮೆಟ್ರಿಕ್ ಟನ್ ಮಾತ್ರ. ಹೀಗಾಗಿ ಕೃಷಿ ಉತ್ಪಾದನೆ ಹೆಚ್ಚಿಸುವುದು ಸರ್ಕಾರದ ಆಶಯ. ಪಾಲಿಹೌಸ್​ಗಳಂತಹ ಸಂರಕ್ಷಿತ ಕೃಷಿ ಮಾಡಿದರೆ ಈ ಉದ್ದೇಶ ಈಡೇರುತ್ತದೆ. ರಾಜ್ಯದಲ್ಲಿರುವ 10 ಸಾವಿರ ಪಾಲಿಹೌಸ್​ಗಳ ಸಂಖ್ಯೆ ಹೆಚ್ಚಿಸುವುದು ಅನಿವಾರ್ಯವಾಗಿದೆ.
ಕೃಷಿಕರ ಬದುಕಿನಲ್ಲಿ ಭರವಸೆ ಮೂಡಿಸುವ ಉದ್ದೇಶದಿಂದ ಸಿಎಂ ಹೊಸ ನೀತಿ ಪ್ರಕಟಿಸಿದ್ದಾರೆ. ಅದಕ್ಕೆ ತಕ್ಕಂತೆ ನೀತಿ ಸಿದ್ಧಪಡಿಸಲು ಸಮಿತಿ ರಚಿಸಲಾಗಿದೆ. ಸಾಕಷ್ಟು ಬದಲಾವಣೆ ಗಳೊಂದಿಗೆ ನೀತಿ ತರುತ್ತೇವೆ. ಅದರ ಅನುಷ್ಠಾನಕ್ಕೂ ಸರ್ಕಾರ ಬದ್ಧ.
|ಬಿ.ಸಿ. ಪಾಟೀಲ್ಕೃಷಿ ಸಚಿವ
ನಷ್ಟ ತಪ್ಪಿಸುವ ತಂತ್ರ:ಎಲ್ಲ ಬೆಳೆಗಳ ಕೊಯ್ಲೋತ್ತರ ನಷ್ಟ ಹೆಚ್ಚಾಗಿದೆ. ಅದನ್ನು ತಪ್ಪಿಸಲು ಸಂಸ್ಕರಣೆಯ ಅವಲಂಬನೆ ಹೆಚ್ಚಿಸಲಾಗುತ್ತದೆ. ತೋಟಗಾರಿಕೆ ಬೆಳೆಗಳಾದ ಹಣ್ಣುಗಳಲ್ಲಿ ಶೇ. 20 ರಿಂದ 30 ಕೊಯ್ಲೋತ್ತರ ನಷ್ಟವಾಗುತ್ತದೆ. ಕೃಷಿ ಉತ್ಪನ್ನ ಶೇ. 8 ರಿಂದ 10 ನಷ್ಟವಾಗುತ್ತಿದೆ. ಹೈನೋದ್ಯಮದಲ್ಲಿ ಶೇ. 1 ನಷ್ಟವಿದೆ.
1995-ಮೊದಲ ಕೃಷಿ ನೀತಿ
2006- ಕೃಷಿ ನೀತಿ
2014- ಕೃಷಿ ಬಿಜಿನೆಸ್ ನೀತಿ
2015-ಸೂಕ್ಷ್ಮ ನೀರಾವರಿ ನೀತಿ
2017-ಸಾವಯವ ಕೃಷಿ ನೀತಿ
2018- ಕೃಷಿ ದೂರದೃಷ್ಟಿ 2025
2020-ಕೃಷಿ ನವೋದ್ಯಮ ನೀತಿ
ಬಜೆಟ್​ನಲ್ಲಿ ಘೋಷಿಸಿದ ರೀತಿಯಲ್ಲಿಯೇ ಹೊಸ ಕೃಷಿ ನೀತಿ ರೂಪಿಸಲು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಕೃಷಿ, ಯೋಜನೆ, ಅರಣ್ಯ, ಪಶು ಸಂಗೋಪನೆ, ಗ್ರಾಮೀಣಾಭಿವೃದ್ಧಿ, ಕೈಗಾರಿಕೆ, ಸಹಕಾರ, ಕಂದಾಯ, ತೋಟಗಾರಿಕೆ, ರೇಷ್ಮೆ, ಕೃಷಿ ಸಂಸ್ಕರಣೆ, ನಬಾರ್ಡ್ ಅಧಿಕಾರಿಗಳು, ಕೃಷಿಗೆ ಸಂಬಂಧಿಸಿದ ವಿಶ್ವವಿದ್ಯಾಲಯಗಳ ಕುಲಪತಿಗಳು, ತಜ್ಞರಾದ ವಿಶ್ರಾಂತ ಕುಲಪತಿ ಡಾ. ಆರ್.ಆರ್. ಹಂಚಿನಾಳ್, ಬೆಂಗಳೂರು ಕೃಷಿ ವಿವಿ ವಿಶ್ರಾಂತ ಕುಲಸಚಿವ ಡಾ.ಎ.ಬಿ. ಪಾಟೀಲ್, ಕೃಷಿ ವಿವಿ ವಿಶ್ರಾಂತ ಸಂಶೋಧನಾ ನಿರ್ದೇಶಕ ಡಾ. ಟಿ.ಕೆ. ಪ್ರಭಾಕರ ಶೆಟ್ಟಿ, ರೈತರಾದ ಕೋಲಾರದ ಕೆ.ಎಂ. ರಾಜಣ್ಣ, ಬಳ್ಳಾರಿಯ ಪ್ರಶಾಂತ್ ಸಿಂಗ್, ಬೀದರ್​ನ ಅಭಿಮನ್ಯು ನೀರ್​ಗುಡೆ ಸದಸ್ಯರಾಗಿದ್ದಾರೆ. ಕೃಷಿ ಆಯುಕ್ತರು ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − eleven =
Remember me
