ಬೆಂಗಳೂರು:ಇಸ್ರೇಲ್​ನಲ್ಲಿ ಮೊನ್ನೆ ಬೆಳ್ಳಂಬೆಳಗ್ಗೆ ಹಮಾಸ್ ಉಗ್ರರಿಂದ ನಡೆದ ರಣಭೀಕರ ದಾಳಿಗೆ ಯುದ್ಧೋನ್ಮಾದ ಪರಿಸ್ಥಿತಿ ಉಂಟಾಗಿದೆ. ಎರಡೂ ಕಡೆಯವರು ಸೇರಿ ಸಾವಿರಾರು ಮಂದಿ ಬಲಿಯಾಗಿದ್ದರೂ ರಣರಂಗವಾಗಿರುವ ಇಸ್ರೇಲ್ ಶಾಂತವಾಗಿಲ್ಲ. ಯುದ್ಧ ಪರಿಸ್ಥಿತಿ ಇನ್ನೂ ಮುಂದುವರಿದಿದೆ.
ಹೀಗೆ ರಣಗಂಭೀರ ಪರಿಸ್ಥಿತಿಯಲ್ಲಿರುವ ಇಸ್ರೇಲ್​ನಲ್ಲಿ ಕನ್ನಡಿಗರನೇಕರು ಸಿಲುಕಿದ್ದಾರೆ ಎನ್ನಲಾಗಿದ್ದು, ಅವರ ನೆರವಿಗಾಗಿ ಕರ್ನಾಟಕ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಅಲ್ಲದೆ ಸರ್ಕಾರದಿಂದ ಹೆಲ್ಪ್​ಲೈನ್ ಆರಂಭಿಸಿದ್ದಾಗಿಯೂ ತಿಳಿಸಿದ್ದಾರೆ.
ಯುದ್ಧಪೀಡಿತ ಇಸ್ರೇಲ್‌ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ನಾವು ಸಹಾಯವಾಣಿಯನ್ನು ತೆರೆದಿದ್ದೇವೆ. ಇಸ್ರೇಲ್‌ನಲ್ಲಿರುವ ಕುಟುಂಬ ಸದಸ್ಯರು ನಿಮ್ಮ ಸಂಪರ್ಕಕ್ಕೆ ಸಿಗದಿದ್ದಲ್ಲಿ ಅಥವಾ ಯುದ್ಧದಿಂದಾಗಿ ಸಂಕಷ್ಟದಲ್ಲಿರುವ ನಿಮ್ಮವರಿಗೆ ತಕ್ಷಣದ ನೆರವಿನ ಅಗತ್ಯವಿದ್ದಲ್ಲಿ ಕೂಡಲೇ ಈ ಕೆಳಗಿನ ದೂರವಾಣಿ ಸಂಖ್ಯೆಗೆ ಕರೆಮಾಡಿ, ಅಗತ್ಯ ನೆರವು ಪಡೆಯಬಹುದಾಗಿದೆ ಎಂದು ಸಿಎಂ ಹೇಳಿದ್ದಾರೆ.
ಅಲ್ಲದೆ ಜಗತ್ತಿನ ಯಾವುದೇ ಮೂಲೆಯಲ್ಲಿರುವ ಪ್ರತಿಯೊಬ್ಬ ಕನ್ನಡಿಗನ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂಬ ಭರವಸೆಯನ್ನೂ ನೀಡಿದ್ದು, ಸಹಾಯವಾಣಿಯ ಮಾಹಿತಿಯನ್ನು ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ.

ಖಿನ್ನತೆ ತಲೆಯ ಸಮಸ್ಯೆ, ಅದಾಗ್ಯೂ ಪರಿಹಾರ ಕಾಲುಗಳಲ್ಲಿದೆ!; ಅಧ್ಯಯನದಲ್ಲಿ ಬಹಿರಂಗ

ಇವರೆಲ್ಲ ದುಡಿಯದೇ ಕೋಟ್ಯಧಿಪತಿಗಳು; ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿದ್ರೆ ಕೋಟಿಗಟ್ಟಲೆ ಹಣ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + one =
Remember me
