ಬೆಂಗಳೂರು:ಕರೊನಾದಿಂದ ನೆಲಕಚ್ಚಿದ ಚಿನ್ನಾಭರಣಗಳ ಮಾರಾಟ ಕ್ಷೇತ್ರ ಚೇತರಿಕೆ ಕಾಣುತ್ತಿದೆ. ಈಗ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಖರೀದಿಗೆ ಜನರು ಉತ್ಸುಕರಾಗಿದ್ದಾರೆ. ರಾಜ್ಯದ ಬಹುತೇಕ ಜ್ಯುವೆಲರಿ ಮಳಿಗೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಚಿನ್ನಾಭರಣ ಖರೀದಿಸಲು ಮುಂದಾಗಿರುವುದು ಕಂಡುಬಂದಿದೆ. ಇದಲ್ಲದೆ, ಸಾವಿರಾರು ಗ್ರಾಹಕರು ಯುಗಾದಿ ದಿನ ಚಿನ್ನ ಖರೀದಿಸಲು ಮುಂಗಡವಾಗಿ ನೋಂದಣಿ ಮಾಡಿಕೊಂಡಿದ್ದಾರೆ ಎನ್ನುತ್ತಾರೆ ಮಳಿಗೆಯವರು. ಪ್ರತಿ ಚಿನ್ನಾಭರಣ ಮಳಿಗೆಗೂ ಶೇ.80 ಪರಿಚಿತ ಗ್ರಾಹಕರಿರುತ್ತಾರೆ.
ಭವಿಷ್ಯದಲ್ಲಿ ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಸಣ್ಣ ಪ್ರಮಾಣದ ಅಭರಣಗಳ ಖರೀದಿಗೆ ಜನರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಈ ಬಾರಿಯ ಯುಗಾದಿ ವೇಳೆ ರಾಜ್ಯದಲ್ಲಿ ಸಾವಿರ ಕೋಟಿ ರೂ.ಗಳಿಗೂ ಅಧಿಕ ವಹಿವಾಟು ನಡೆಯುವ ನಿರೀಕ್ಷೆ ಇದೆ. ಕಳೆದ ಬಾರಿ ಯುಗಾದಿಗೆ ಹೋಲಿಸಿದರೆ ಶೇ.25 ಹೆಚ್ಚಿನ ವಹಿವಾಟು ನಡೆಯಲಿವೆ ಎಂದು ಚಿನ್ನಾಭರಣ ಮಳಿಗೆ ಮಾಲೀಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೆಲೆ ಶೇ.15 ಹೆಚ್ಚಳ:ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಅಧಿಕವಾಗಿರುವ ಹಿನ್ನೆಲೆಯಲ್ಲಿ ಕಳೆದ ವರ್ಷದ ಯುಗಾದಿಗೆ ಹೋಲಿಸಿದರೆ ಈ ಬಾರಿ ಚಿನ್ನದ ಬೆಲೆ ಶೇ.15 ಹೆಚ್ಚಳವಾಗಿದೆ. ಟೆಂಪಲ್ ಜ್ಯುವೆಲರ್ಸ್, ವೆಡ್ಡಿಂಗ್ ಕಲೆಕ್ಷನ್, ವಜ್ರದ ಆಭರಣಗಳು, ವಿವಿಧ ಶೈಲಿಯ ನೆಕ್​ಪೀಸ್, ಓಲೆಗಳು, ಹೊಸ ಬಗೆಯ ಉಂಗುರಗಳು, ಅಂದ ಚೆಂದದ ಬಳೆಗಳು, ತೋಳಬಂದಿ, ಡಾಬು, ಕಿವಿಯೋಲೆಗಳು ಹಾಗೂ ಲಕ್ಷ್ಮೀ ಚಿತ್ರ ಇರುವ ಚಿನ್ನದ ಕಾಯಿನ್​ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಗ್ರಾಮೀಣ ಹಾಗೂ ಸಣ್ಣಪುಟ್ಟ ನಗರಗಳಲ್ಲೂ ಯುಗಾದಿ ಸಮಯದಲ್ಲಿ ಚಿನ್ನಾಭರಣಗಳ ವ್ಯಾಪಾರ ತುಸು ಹೆಚ್ಚಿರುತ್ತದೆ. ಚಿನ್ನದ ಪರಿಶುದ್ಧತೆ ಹಾಗೂ ಗುಣಮಟ್ಟವನ್ನು ದೃಢೀಕರಿಸಲು ಈಗಾಗಲೇ ಹಾಲ್​ವಾರ್ಕ್ ನಿಯಮ ಜಾರಿಗೆ ಬಂದಿರುವುದರಿಂದ ಮಳಿಗೆಗಳಲ್ಲಿ ಗ್ರಾಹಕರಿಗೆ ಮೋಸವಾಗುವುದಿಲ್ಲ ಎಂಬುದು ಚಿನ್ನದ ವ್ಯಾಪಾರಿಗಳ ಭರವಸೆ.
ಚಿನ್ನದ ಬೆಲೆ ಹೆಚ್ಚಳವಾದರೂ ಮಳಿಗೆಗಳತ್ತ ಧಾವಿಸುತ್ತಿರುವ ಗ್ರಾಹಕರ ಸಂಖ್ಯೆ ಹೆಚ್ಚಿದೆ. ಯುಗಾದಿ ಸಂದರ್ಭದಲ್ಲಿ ಸಹಜವಾಗಿ ಸಾಮಾನ್ಯ ದಿನಗಳಿಗಿಂತ ಶೇ.25 ರಿಂದ 30 ವ್ಯಾಪಾರ ಜಾಸ್ತಿಯಾಗುವ ನಿರೀಕ್ಷೆಯಿದೆ.
|ಡಾ.ಬಿ. ರಾಮಾಚಾರಿಜ್ಯುವೆಲರ್ಸ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ
ಅಪರಂಜಿ ಚಿನ್ನ ಗ್ರಾಂಗೆ 5,190 ರೂ.:ಪ್ರಸ್ತುತ 22 ಕ್ಯಾರೆಟ್ ಚಿನ್ನದ ಪ್ರತಿ ಗ್ರಾಮ್ೆ 4,775 ರೂ., 24 ಕ್ಯಾರೆಟ್ ಅಪರಂಜಿ ಚಿನ್ನದ ಪ್ರತಿ ಗ್ರಾಂಗೆ 5,190 ರೂ. ಹಾಗೂ ಪ್ರತಿ ಕೆಜಿ ಬೆಳ್ಳಿಗೆ 69,000 ರೂ. ಇದೆ. ರಾಜ್ಯದಲ್ಲಿ ಸಣ್ಣ ಮತ್ತು ಕಾಪೋರೇಟ್ ವಲಯ ಸೇರಿ ಅಂದಾಜು 90 ಸಾವಿರಕ್ಕೂ ಅಧಿಕ ಚಿನ್ನಾಭರಣ ಅಂಗಡಿಗಳಿವೆ. ಶೇ.30 ಕಾಪೋರೇಟ್ ಅಥವಾ ಬೃಹತ್ ಆಭರಣ ಮಳಿಗೆಗಳು ಇದ್ದರೆ ಶೇ.70 ಸಣ್ಣ ಮಳಿಗೆಗಳಿವೆ
ವಿಶೇಷ ಕೊಡುಗೆ ಘೋಷಣೆ:ಕಳೆದ ಬಾರಿ ಕರೊನಾ ಹಿನ್ನೆಲೆಯಲ್ಲಿ ಕಾಪೋರೇಟ್ ವಲಯದ ಜ್ಯುವೆಲರಿಗಳು ಶೇ.20 ಆನ್​ಲೈನ್​ನಲ್ಲೇ ವಹಿವಾಟು ನಡೆಸಿದ್ದವು. ಗ್ರಾಹಕರು ಮಳಿಗೆಗಳತ್ತ ಸುಳಿಯದಿದ್ದರಿಂದ ಮಾಲೀಕರಿಗೆ ನೂರಾರು ಕೋಟಿ ರೂ. ನಷ್ಟವಾಗಿತ್ತು. ಸದ್ಯ ಎಲ್ಲ ಉದ್ಯಮಗಳು ಸಾಮಾನ್ಯ ಸ್ಥಿತಿಗೆ ಮರಳಿರುವ ಹಿನ್ನೆಲೆಯಲ್ಲಿ ಯುಗಾದಿ ಹಬ್ಬಕ್ಕಾಗಿ ಬಹುತೇಕ ಚಿನ್ನಾಭರಣ ಮಳಿಗೆಗಳು ಆಭರಣಗಳ ಖರೀದಿ ಮೇಲೆ ವಿಶೇಷ ಕೊಡುಗೆಗಳನ್ನು ಘೋಷಿಸಿವೆ. ವಿಶೇಷ ರಿಯಾಯಿತಿ, ಜ್ಯುವೆಲರಿಗಳಲ್ಲೇ ವಿಶೇಷ ಪೂಜಾ ಕಾರ್ಯಕ್ರಮ, ಚಿನ್ನಾಭರಣ ಮಾರಾಟ ಮೇಳ ಮತ್ತು ಪ್ರದರ್ಶನಗಳನ್ನು ಏರ್ಪಡಿಸಿವೆ. ಇದಕ್ಕಾಗಿಯೇ ಹತ್ತಾರು ಕೋಟಿ ರೂ.ಗಳನ್ನು ವ್ಯಯಿಸುತ್ತಿವೆ.
ಪ್ರಧಾನಿ ಮೋದಿಯ ಫೋಟೋ ಇಟ್ಟರೆ ನಿನ್ನನ್ನೇ ಮನೆಯಿಂದ ಹೊರಹಾಕುವೆ ಎಂದ ಮಾಲೀಕ!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:eighteen − six =
Remember me
