ಬೆಂಗಳೂರು:ತವರು ಮನೆಗೆ ನನ್ನ ಪತ್ನಿ ಮತ್ತು ಪುತ್ರ ಹೋಗಿದ್ದಾರೆ. ಬರೋದು ಸ್ವಲ್ಪ ದಿನವಾಗುತ್ತೆ, ನಾನೊಬ್ಬನೇ ಒಂಟಿಯಾಗಿರುವೆ ಎಂದು ಯುವತಿಯೊಬ್ಬಳನ್ನ ಮನೆಗೆ ಕರೆಸಿಕೊಂಡ ಟೆಕ್ಕಿ ಕತೆ ಏನಾಯ್ತು ಗೊತ್ತಾ?
ಉತ್ತರಹಳ್ಳಿ ಹೋಬಳಿ ಸಾಲುಹುಣಸೆ ಗ್ರಾಮದ ಅಪಾರ್ಟ್​ವೆುಂಟ್​ನಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಧನಂಜಯ, ತನ್ನ ಪತ್ನಿ ಮತ್ತು ಮಗನ ಜತೆ ನೆಲೆಸಿದ್ದರು. ನ.25ರಂದು ಟೆಕ್ಕಿ ಪತ್ನಿ ತನ್ನ ಸಹೋದರನ ಮದುವೆಗೆಂದು ಮಗನ ಜತೆಗೆ ಉತ್ತರ ಪ್ರದೇಶಕ್ಕೆ ಹೋಗಿದ್ದರು. ಡಿ.10ರ ರಾತ್ರಿ ಟೆಕ್ಕಿ, ತನ್ನ ಸ್ನೇಹಿತನಿಗೆ ಫ್ಲ್ಯಾಟ್​ನಲ್ಲಿ ತಾನೊಬ್ಬನೇ ಇರುವುದಾಗಿ ತಿಳಿಸಿದ್ದ. ಆತನೇ ಅರ್ಪಿತಾ ಎಂಬಾಕೆ ನಂಬರ್ ಕೊಟ್ಟು ಕರೆ ಮಾಡು ಆಕೆ ಮನೆಗೆ ಬರುತ್ತಾಳೆ ಎಂದು ಹೇಳಿದ್ದ. ಅರ್ಪಿತಾಗೆ ಕರೆ ಮಾಡಿದಾಗ ಆಕೆ ಮಧ್ಯಾಹ್ನ 1 ಗಂಟೆಗೆ ಟೆಕ್ಕಿ ಫ್ಲ್ಯಾಟ್​ಗೆ ಬಂದಿದ್ದಾಳೆ.ಇದನ್ನೂ ಓದಿರಿನಾನು 110 ಕೆಜಿ ಇದ್ದೇನೆ, ಕಾಂಗ್ರೆಸ್​ಗೆ ನನ್ನನ್ನು ತುಳಿಯೋಕೆ ಆಗಲ್ಲ ಎನ್ನುತ್ತಲೇ ಜೆಡಿಎಸ್​ಗೆ ಇಬ್ರಾಹಿಂ ಎಂಟ್ರಿ!
ಟೆಕ್ಕಿ ಮತ್ತು ಅರ್ಪಿತಾ ಇಬ್ಬರೂ ಮನೆಯಲ್ಲೇ ಮದ್ಯದ ಪಾರ್ಟಿ ಮಾಡಿದ್ದಾರೆ. ಸಿಗರೇಟ್ ಸೇದುವ ಸಲುವಾಗಿ ಸ್ನೇಹಿತೆಯನ್ನು ಮನೆಯಲ್ಲಿ ಟೆಕ್ಕಿ ಕಾರಿನಲ್ಲಿ ಸಾಲುಹುಣಸೆಗೆ ಹೋಗಿದ್ದಾರೆ. ಸಿಗರೇಟ್ ಸೇದಿ 15 ನಿಮಿಷಗಳ ಬಳಿಕ ಫ್ಲ್ಯಾಟ್​ಗೆ ಬರುವಷ್ಟರಲ್ಲಿ ಅರ್ಪಿತಾ, 27 ಲಕ್ಷ ರೂ. ಮೌಲ್ಯದ ಆಭರಣ, ನಗದು ದೋಚಿ ಕ್ಯಾಬ್​ನಲ್ಲಿ ರಾತ್ರೋರಾತ್ರಿ ಹೋಗಿರುವುದು ಗೊತ್ತಾಗಿದೆ.
ಡಿ.12ರಂದು ಟೆಕ್ಕಿ ಪತ್ನಿ ತನ್ನ ಮಗನನ್ನು ಕರೆದುಕೊಂಡು ಗಂಡನ ಮನೆಗೆ ಬಂದಿದ್ದಾರೆ. ಆಗ ಮನೆಯಲ್ಲಿ ಚಿನ್ನಾಭರಣ ಮತ್ತು ನಗದು ಕಳವಾಗಿರುವುದು ಗೊತ್ತಾಗಿದೆ. ಈ ಬಗ್ಗೆ ಪತ್ನಿ ಪ್ರಶ್ನಿಸಿದ್ದಕ್ಕೆ ಟೆಕ್ಕಿ, ತನ್ನ ಸ್ನೇಹಿತೆ ಫ್ಲ್ಯಾಟ್​ಗೆ ಬಂದಿದ್ದಳು. ಆಕೆಯೇ 12.70 ಲಕ್ಷ ರೂ. ನಗದು ಮತ್ತು 15 ಲಕ್ಷ ರೂ. ಬೆಲೆ ಬಾಳುವ 300 ಗ್ರಾಂ ಚಿನ್ನಾಭರಣ ದೋಚಿದ್ದಾಳೆ ಎಂದು ಬಾಯ್ಬಿಟ್ಟಿದ್ದ.ಇದನ್ನೂ ಓದಿರಿಸೆಕ್ಸ್​ ಮಾಡುವಾಗ ಪ್ರಜ್ಞೆ ತಪ್ಪಿದಳು, ನಾನು ಕೊಲೆ ಮಾಡಿಲ್ಲ… ಎಂದು ಕಣ್ಣೀರಿಟ್ಟ ಆರೋಪಿ
ಕದ್ದಿಲ್ಲ ಸ್ನೇಹಿತನೇ ಕೊಟ್ಟ?:ಕೊನೆಗೆ ಟೆಕ್ಕಿ ಪೊಲೀಸರಿಗೆ ದೂರು ಕೊಟ್ಟಿದ್ದು, ಕಗ್ಗಲಿಪುರ ಪೊಲೀಸರು ಅರ್ಪಿತಾ ಎಂಬಾಕೆಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಆಕೆ ಕೂಡ ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದು, ಧನಂಜಯಗೆ ಪರಿಚಯಸ್ಥಳು. ಸ್ನೇಹಿತ ಕರೆದ ಕಾರಣಕ್ಕೆ ಆತನ ಫ್ಲ್ಯಾಟ್​ಗೆ ಹೋಗಿದ್ದೆ. ಆತನೇ ಹಣ ಮತ್ತು ಚಿನ್ನ ಕೊಟ್ಟಿದ್ದಾನೆ. ನಾನು ಕಳವು ಮಾಡಿಲ್ಲ ಎಂದಿದ್ದಾಳೆ. ಕಳವು ಮಾಡಿರುವುದಾಗಿ ಧನಂಜಯ ದೂರು ಕೊಟ್ಟಿದ್ದು, ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ನಾನು ತುಂಬಾ ತಪ್ಪು ಮಾಡುತ್ತಿರುವೆ, ನೀವೆಲ್ಲರೂ ಬಂದು ನನ್ನ ಶವದ ಮೇಲೆ ಮಣ್ಣು ಹಾಕಿ… ಇದೇ ನನ್ನ ಕೋರಿಕೆ

ವಾಟ್ಸ್​ಆ್ಯಪ್​ ವಿಡಿಯೋ ಕಾಲ್​ನಲ್ಲಿ ಬೆತ್ತಲಾದ ಯುವತಿಯರು… ಕಣ್ತುಂಬಿಕೊಂಡವನಿಗೆ ಕಾದಿತ್ತು ಭಾರಿ ಸಂಕಷ್ಟ!

ಬೈಕ್​ನಲ್ಲಿ ಕುಳಿತು ನಿದ್ರೆಗೆ ಜಾರಿದ ತಾಯಿ-ಮಕ್ಕಳು ತರಗೆಲೆಯಂತೆ ರಸ್ತೆಗೆ ಉರುಳಿದರು! ಬೆಚ್ಚಿಬೀಳಿಸುತ್ತೆ ಈ ದೃಶ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 11 =
Remember me
