ಬೆಂಗಳೂರು:ಇಲ್ಲೊಬ್ಬ ಗೃಹಿಣಿ ಮನೆಗೆ ಬಂದ ಅಪರಿಚಿತರ ಮಾತು ನಂಬಿ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಬಿಚ್ಚಿ ಅವರ ಕೈಗೆ ಕೊಟ್ಟು ಇದೀಗ ಕಂಗಾಲಾಗಿದ್ದಾರೆ. ಆ ಗೃಹಿಣಿಯ ಕಣ್ಮುಂದೆಯೇ ನೀರಿಗೆ ಅರಿಶಿನ ಬೆರೆಸಿ ಅದಕ್ಕೆ ಚಿನ್ನದ ಸರ ಹಾಕಿದ್ದಾರೆ. ಆದರೆ ಕ್ಷಣಾರ್ಧದಲ್ಲೇ ಸರ ಮಾಯವಾಗಿದ್ದು, ಆ ಅಪರಿಚಿತರು ಅಲ್ಲಿಂದ ಎಸ್ಕೇಪ್​ ಆಗಿದ್ದಾರೆ.
ಹೌದು, ಚಿನ್ನ ಪಾಲಿಶ್ ಮಾಡುವ ನೆಪದಲ್ಲಿ ಶ್ರೀನಿವಾಸ್ ನಗರದ ಮನೆಯೊಂದಕ್ಕೆ ಬಂದ ದುಷ್ಕರ್ಮಿಗಳು, ‘ನಿಮ್ನ ಚಿನ್ನವನ್ನು ಕಡಿಮೆ ಬೆಲೆಗೆ ಪಾಲಿಶ್ ಮಾಡಿ ಕೊಡ್ತೀವಿ’ ಎಂದಿದ್ದಾರೆ. ಖದೀಮರ ಮಾತಿಗೆ ಮರುಳಾದ ಆ ಮನೆಯ ಗೃಹಿಣಿ ಉಷಾ, ಪಾಲಿಶ್​ ಮಾಡಲು 30 ಗ್ರಾಂ ತೂಕದ ಸರ ಕೊಟ್ಟಿದ್ದರು.
ನಂತರ ನೀರಿಗೆ ಅರಿಶಿನ ಪುಡಿ ಹಾಕಿ ಅದರಲ್ಲಿ ಚಿನ್ನದ ಸರ ಹಾಕಿದ ದುಷ್ಕರ್ಮಿಗಳು 10 ನಿಮಿಷ ಬಿಟ್ಟು ತೆಗೆಯಬೇಕು, ಸರ ಫಳಫಳ ಹೊಳೆಯುತ್ತದೆ ಎಂದ ಅವರು ಅಲ್ಲಿಂದ ಪರಾರಿಯಾಗಿದ್ದರು. ಬಳಿಕ ಆ ನೀರಲ್ಲಿ ಕೈಹಾಕಿ ನೋಡಿದರೆ ಸರ ಇರಲಿಲ್ಲ.
ಚಿನ್ನ ಕಳೆದುಕೊಂಡ ಮಹಿಳೆಯು ಹನುಮಂತನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಳ್ಳರು ಚಿನ್ನಾಭರಣ ಎಗರಿಸಿ ಹೊರ ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಮದ್ವೆಗೆ 2 ದಿನ ಇದ್ದಂತೆ ವಧುಗೆ ಕೈಕೊಟ್ಟ ವರ​! ಮದ್ವೆ ದಿನ ವಾಪಸ್​ ಬಂದವನಿಂದ ಮತ್ತೊಂದು ಶಾಕ್​

ಮದ್ವೆಗೆ 2 ದಿನ ಇದ್ದಂತೆ ವಧುಗೆ ಕೈಕೊಟ್ಟ ವರ​! ಮದ್ವೆ ದಿನ ವಾಪಸ್​ ಬಂದವನಿಂದ ಮತ್ತೊಂದು ಶಾಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
