ಬೆಂಗಳೂರು:ಮನೆಗೆ ಬಂದ ಅತಿಥಿಗಳೆಲ್ಲರೂ ಒಳ್ಳೆಯವರೇ ಆಗಿರುತ್ತಾರೆಂದೇನೂ ಇಲ್ಲ. ಕೆಲವರು ತಾವು ಬಂದ ಕೆಲಸ ಮುಗಿಸಿಕೊಂಡು ಹೋಗಿಬಿಟ್ಟರೆ ಇನ್ನು ಕೆಲವರು ಮನೆಯ ‘ಜಂತಿ ಎಣಿಸುವ’ ಕೆಲಸ ಶುರುವಿಟ್ಟುಕೊಳ್ಳುತ್ತಾರೆ. ಕುಮಾರಸ್ವಾಮಿ ಲೇಔಟ್‌ನ ಈ ಮನೆಗೆ ಬಂದ ಅತಿಥಿಗಳು ಮಾಡಿದ್ದೂ ಇಂಥದ್ದೇ ಕೆಲಸ.
ಇದನ್ನೂ ಓದಿ:ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ! ಹಣದಾಸೆಗೆ ಗಂಡನಿಂದಲೇ ಕೊಲೆ?!
ಡಿ.6ರ ಮಧ್ಯಾಹ್ನ ಕುಮಾರಸ್ವಾಮಿ ಲೇಔಟ್ ನಿವಾಸಿ ಅನಿಸಾ ಬೇಗಂ ಅವರ ಮನೆಗೆ ಸಂಬಂಧಿಕರಾದ ಸಾಯಿರಾ ಬಾನು ಹಾಗೂ ಮಕ್ಕಳಾದ ಸೈಯದ್ ಸಲ್ಮಾನ್, ಸೈಯದ್ ಇಮ್ರಾನ್ ಬಂದಿದ್ದರು. ಉಭಯ ಕುಶಲೋಪರಿ ಮಾತನಾಡುತ್ತ ಕುಳಿತಿದ್ದಾಗ ಅನಿಸಾ ಇತ್ತೀಚೆಗೆ ತಾವು ಖರೀದಿಸಿದ್ದ ಚಿನ್ನಾಭರಣಗಳ ಬಗ್ಗೆ ಬಾಯಿಬಿಟ್ಟಿದ್ದರು. ಅವುಗಳನ್ನು ತೋರಿಸುವಂತೆ ಸಾಯಿರಾ ಹೇಳಿದ್ದಳು. ಅದರಂತೆ ಅನಿಸಾ ತನ್ನ ಬಳಿಯಿದ್ದ ಚಿನ್ನಾಭರಣಗಳನ್ನೂ ತೋರಿಸಿ, ನಂತರ ಎಂದಿನಂತೆ ಲಾಕರ್‌ನಲ್ಲಿ ಇಟ್ಟಿದ್ದರು.
ಇದನ್ನೂ ಓದಿ:ಜೆಡಿಎಸ್​ ಮಗುವಿದ್ದಂತೆ, ಮಿಠಾಯಿ ತೋರಿಸಿದವರ ಕಡೆ ಹೋಗುತ್ತೆ; ಎಚ್.ವಿಶ್ವನಾಥ್ ಲೇವಡಿ
ಸ್ವಲ್ಪ ಸಮಯದ ಬಳಿಕ ತನ್ನ ಮಕ್ಕಳೊಂದಿಗೆ ವೈಯಕ್ತಿಕವಾಗಿ ಕೆಲ ಹೊತ್ತು ಮಾತನಾಡಬೇಕೆಂದು ಹೇಳಿದ ಸಾಯಿರಾ, ಬೆಡ್ ರೂಂಗೆ ಹೋಗಿ ಬಾಗಿಲು ಮುಚ್ಚಿಕೊಂಡಳು. 20 ನಿಮಿಷಗಳ ಬಳಿಕ ಮೂವರೂ ಹೊರಗೆ ಬಂದರು. ರಾತ್ರಿ 10 ಗಂಟೆಗೆ ಮನೆಯಿಂದ ತೆರಳಿದ್ದರು. ಇದಾದ ಬಳಿಕ ಮನೆಯ ಲಾಕರ್‌ನಲ್ಲಿಟ್ಟಿದ್ದ ಚಿನ್ನಾಭರಣ ಇರಲಿಲ್ಲ. ಇದರಿಂದ ದಿಕ್ಕು ತೋಚದಂತಾದ ಅನಿಸಾ ಕೂಡಲೇ ಮನೆಗೆ ಬಂದ ಅತಿಥಿಗಳೇ ಚಿನ್ನಾಭರಣ ದೋಚಿದ್ದಾರೆ ಎಂದು ಅನಿಸಾ ಪೊಲೀಸರಿಗೆ ದೂರು ನೀಡಿದ್ದಾರೆ. ಆಭರಣಗಳ ಬೆಲೆ 1.30 ಲಕ್ಷ ರೂ. ಎಂದು ನಮೂದಿಸಿದ್ದಾರೆ. ದೂರಿನ ಆಧಾರದ ಮೇಲೆ ವಿರುದ್ಧ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ.
ಕಿರಿ ಸೊಸೆ ಜತೆ ಮಾವನ ಅಕ್ರಮ ಸಂಬಂಧ; ವಿಚಾರ ತಿಳಿದ ಹಿರಿ ಸೊಸೆ, ಅತ್ತೆ ಮಾಡಿದ್ದೇನು ಗೊತ್ತಾ?

ಈ ಕೇಸ್​ ಸಾಲ್ವ್​ ಮಾಡೋಕೆ ಸಹಾಯ ಮಾಡಿದರೆ ನಿಮಗೆ ಸಿಗುತ್ತೆ 2.7 ಕೋಟಿ ರೂಪಾಯಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 18 =
Remember me
