ಬೆಂಗಳೂರು:ಯುಗಾದಿ ಹಬ್ಬಕ್ಕೆ ಚಿನ್ನ ಖರೀದಿಸಬೇಕೆಂದಿರುವವರಿಗೆ ಆತಂಕದ ಸುದ್ದಿ ಬಂದಿದೆ. ಹಳದಿ ಲೋಹ ಚಿನ್ನಡ ಬೆಲೆ ಸಾರ್ವಕಾಲಿದ ಏರಿಕೆಯಾಗಿದೆ. ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ದಾಖಲೆಯ ಮಟ್ಟದ ಏರಿಕೆ ಕಂಡಿದೆ. ಏಪ್ರಿಲ್‌ನಲ್ಲಿ ವಿಶೇಷ ಕಾರ್ಯಕ್ರಮಗಳಿದ್ದು ಚಿನ್ನ ಖರೀದಿ ಮಾಡಬೇಕು ಎಂದು ಕೊಂಡಿದ್ದರೆ ನಿಮಗೆ ನಿರಾಸೆ ಕಾಡುವುದು ಖಚಿತ.
ಚಿನ್ನ ಮತ್ತು ಬೆಳ್ಳಿ ಎರಡೂ ಕೂಡ ಹೊಸ ದಾಖಲೆ ಬೆಲೆ ಪಡೆದಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಇವೆರಡೂ ಲೋಹಗಳಿಗೆ ಭಾರೀ ಬೇಡಿಕೆ ಮುಂದುವರಿದಿದೆ. ಮದುವೆ ಸಮಾರಂಭಗಳ ಸೀಸನ್ ಇದು. ಶುಭ ಸಮಾರಂಭಗಳಿಗೆ ಚಿನ್ನಾಭರಣವೂ ಅತೀ ಮುಖ್ಯ. ಹಾಗಾಗಿ ಚಿನ್ನ ಕೊಳ್ಳುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಈ ಸಮಯದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ಹಿಂದಿಗಿಂತ ದುಬಾರಿಯೇ ಇದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ:22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 65,750 ರೂ.24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 71,730ರೂ.
ಬೆಳ್ಳಿ ಬೆಲೆ 1 ಕೆಜಿ: 83,750 ರೂ.
ದೈನಂದಿನ ಪ್ರಕ್ರಿಯೆಯಲ್ಲಿ ಚಿನ್ನದ ದರವು ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಎಷ್ಟಿದೆ ಎಂದು ನೋಡುವುದಾದರೆ, ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ​ ಚಿನ್ನದ ಬೆಲೆ 65,650 ರೂಪಾಯಿ ಇತ್ತು. ಆದರೆ ಇಂದು  65,750 ರೂಪಾಯಿ ಆಗಿದೆ. ನಿನ್ನೆ ಇದ್ದ ಬೆಲೆಗಿಂತ 100 ರೂ ಏರಿಕೆಯಾಗಿದೆ.
ನಿನ್ನೆ ಬೆಂಗಳೂರಿನಲ್ಲಿ 24 ಕ್ಯಾರೆಟ್​ 10 ಗ್ರಾಂ ಚಿನ್ನದ ಬೆಲೆ 71,620 ರೂಪಾಯಿ ಇತ್ತು. ಆದರೆ ಇಂದು 71,730ರೂಪಾಯಿ ಆಗಿದೆ. ನಿನ್ನೆ ಇದ್ದ ಬೆಲೆಗಿಂತ 110 ರೂ ಏರಿಕೆಯಾಗಿದೆ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):
ಬೆಂಗಳೂರು: 65,750ರೂ.
ಮುಂಬೈ: 65,750 ರೂ
ದೆಹಲಿ: 65,900  ರೂ.
ಕೇರಳ: 65,750ರೂ.
ಅಹ್ಮದಾಬಾದ್:65,800 ರೂ.
ಜೈಪುರ್: 65,900 ರೂ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
