ಬೆಂಗಳೂರು:ಕಳೆದ ಒಂದು ವಾರದಿಂದ ಏರಿಳಿತ ಕಾಣುತ್ತಿದ್ದ ಚಿನ್ನದ ದರವು ಶುಕ್ರವಾರ (ಮೇ ಚಿನ್ನ ಮತ್ತು ಬೆಳ್ಳಿ ದರವು ಶುಕ್ರವಾರ (ಮೇ.24) ಮತ್ತೆ ಇಳಿಕೆ ಕಂಡಿದೆ.
ಇದನ್ನೂ ಓದಿ:ವಿದ್ಯಾರ್ಥಿನಿಯರಿಂದ ಮಸಾಜ್ ಮಾಡಿಸಿಕೊಳ್ಳುತ್ತಿರುವ ವಾಚ್‌ಮ್ಯಾನ್: ವಿಡಿಯೋ ವೈರಲ್​​
ಸದ್ಯ ಮದುವೆ ಹಾಗೂ ಶುಭ ಕಾರ್ಯಗಳು ಜರುಗುತ್ತಿದ್ದು, ಚಿನ್ನ ಬೆಳ್ಳಿ ಆಭರಣಗಳಿಗೆ ಭರ್ಜರಿ ಬೇಡಕೆ ಇದೆ. ಚಿನ್ನ ಖರೀದಿ ಮಾಡಬೇಕು ಎಂಬ ಆಲೋಚನೆ ಹೊಂದಿದ್ದವರಿಗೆ ಒಳ್ಳೆಯ ಅವಕಾಶ. ಸದ್ಯ ಮಾರುಕಟ್ಟೆಯಲ್ಲಿ 24 ಕ್ಯಾರೆಟ್‌ ಚಿನ್ನ 10 ಗ್ರಾಂಗೆ 900 ರೂ., 72.650 ಆಗಿದೆ. ಧಾರಣೆಯು ಕೆ.ಜಿ. 500 ರೂ. ಇಳಿದು 92,100ಕ್ಕೆ ಕುಸಿದಿದೆ.
ದೆಹಲಿ ಮಾರುಕಟ್ಟೆಗಳಲ್ಲಿ ಸ್ಪಾಟ್ ಚಿನ್ನದ ಬೆಲೆಯು 10 ಗ್ರಾಂಗೆ 72,650 ರೂ.ನಲ್ಲಿ ವಹಿವಾಟು ನಡೆಸುತ್ತಿದೆ. 900 ರೂ.ಗಳಷ್ಟು ಕಡಿಮೆಯಾಗಿದೆ.ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯು ಒಂದು ಔನ್ಸ್​ಗೆ (28.34 ಗ್ರಾಂ) ಕ್ರಮವಾಗಿ 2.340 ಡಾಲ್​ ( ಅಂದಾಜು 1.94 ಲಕ್ಷ ) ಮತ್ತು 30.45 ಡಾಲರ್​ನಂತೆ ( ಅಂದಾಜು 2.531 ರೂ.) ಮಾರಾಟವಾಗಿದೆ.
ಅಮೆರಿಕ ಫೆಡರ್​ಲ್ ರಿಸರ್ವ್​ ಬಡ್ಡಿದರ ಕಡಿತಕ್ಕೆ ಇನ್ನೂ ನಿರ್ಧರಿಸಿಲ್ಲ. ಇಳುವರಿ ಮತ್ತು ಡಾಲರ್ ಸೂಚ್ಯಂಕವು ಏರಿಕೆಯಾಗಿದೆ. ಹೂಡಿಕೆದಾರರು ಲಾಭ ಗಳಿಕೆಯತ್ತ ಗಮನ ಹರಿಸಿದ್ದು ಹಳದಿ ಲೋಹದ ಮಾರಾಟಕ್ಕೆ ಮುಂದಾಗಿದ್ದಾರೆ. ಇದರಿಂದ ಚಿನ್ನ ಬೆಲೆಯಲ್ಲಿ ಇಳಿಕೆಯಾಗಿದೆ ಎಂದು ಹೇಳುತ್ತಾರೆ.
ಮಹಾನಗರಗಳಲ್ಲಿ ಚಿನ್ನದ ರೇಟ್ಳ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ ( ಗ್ರಾಂ) ರೂ. 6,750 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 6,750 ರೂ. 6,730 ರೂ. 6,730 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 6,745 ರೂ. ಆಗಿದೆ.
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − seven =
Remember me
