ಮೈಸೂರು:ಮೈಸೂರಿನಲ್ಲಿ ಜುವೆಲ್ಲರಿಯೊಂದಕ್ಕೆ ನುಗ್ಗಿ ಚಿನ್ನಾಭರಣ ಕದಿಯಲು ಯತ್ನಿಸಿದ್ದಲ್ಲದೆ, ಅಂಗಡಿ ಮಾಲೀಕನ ಮೇಲೆ ಹಲ್ಲೆ ಮಾಡಿ, ಸಾರ್ವಜನಿಕರೊಬ್ಬರನ್ನು ಹತ್ಯೆ ಮಾಡಿ ಪರಾರಿಯಾಗಿರುವ ಕಳ್ಳರ ‘ಬಣ್ಣ’ ಇದೀಗ ಸಿಸಿಟಿವಿ ಕ್ಲಿಪ್ಪಿಂಗ್​ನಲ್ಲಿ ಬಯಲಾಗಿದೆ.
ಮೈಸೂರಿನ ವಿದ್ಯಾರಣ್ಯಪುರದ ಮುಖ್ಯರಸ್ತೆಯಲ್ಲಿರುವ ಅಮೃತ್ ಗೋಲ್ಡ್ ಆ್ಯಂಡ್ ಸಿಲ್ವರ್ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ನುಗ್ಗಿದ ಮೂವರು ಕಳ್ಳರು ಚಿನ್ನಾಭರಣ ಕದಿಯಲು ಯತ್ನಿಸಿದ್ದಾರೆ. ಅಡ್ಡ ಬಂದ ಮಾಲೀಕನ ಕೈ-ಕಾಲು ಕಟ್ಟಿ ಹಾಕಿ ಚೆನ್ನಾಗಿ ಥಳಿಸಿದ್ದಾರೆ.
ಕಳ್ಳರ ತಂಡ ತಪ್ಪಿಸಿಕೊಳ್ಳುವಾಗ ಹಾರಿಸಿದ ಗುಂಡಿಗೆ ಸಾರ್ವಜನಿಕ ದಡದಹಳ್ಳಿ ನಿವಾಸಿ ಚಂದ್ರು (23) ಎಂಬವರ ತಲೆಗೆ ತಾಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಹೀಗೆ ಹಲ್ಲೆ-ಹತ್ಯೆ ಮಾಡಿ ಪರಾರಿಯಾದ ಕಳ್ಳರ ತಂತ್ರವೊಂದು ಸಿಸಿಟಿವಿ ಕ್ಲಿಪ್ಪಿಂಗ್​ನಿಂದಾಗಿ ಬಹಿರಂಗಗೊಂಡಿದೆ.
ಇದನ್ನೂ ಓದಿ:ದೇಶಾದ್ಯಂತ ನಡೆಯುತ್ತಾ ಜಾತಿ ಆಧಾರಿತ ಜನಗಣತಿ?; ಪ್ರಧಾನಿಯನ್ನು ಭೇಟಿ ಆಗಿ ಚರ್ಚಿಸಿದರು 11 ಪಕ್ಷಗಳ ಮುಖಂಡರು
ಸಿಕ್ಕಿಬೀಳುವ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲು ಅನುಕೂಲವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಕಳ್ಳರ ಪೈಕಿ ಒಬ್ಬ ಅಂಗಿ ಮೇಲೊಂದು ಅಂಗಿ ಧರಿಸಿಕೊಂಡು ಬಂದಿರುವುದು ತಿಳಿದುಬಂದಿದೆ. ಆಭರಣದಂಗಡಿಯನ್ನು ದೋಚುವ ಯತ್ನ ಮಾಡುತ್ತಿದ್ದಾಗ ನೀಲಿ ಅಂಗಿ ಧರಿಸಿದ್ದ ಕಳ್ಳನೊಬ್ಬ ಅಲ್ಲಿ ತಪ್ಪಿಸಿಕೊಂಡು ಹೋಗುವಾಗ ಮಾರ್ಗಮಧ್ಯೆ ಅದನ್ನು ಕಳಚಿ ಕಾಂಪೌಂಡ್​ವೊಂದರ ಒಳಗೆ ಎಸೆದು ಓಡಿಹೋಗಿದ್ದಾನೆ. ಆತ ಬಿಳಿ ಅಂಗಿ ಮೇಲೆ ನೀಲಿ ಅಂಗಿ ಧರಿಸಿದ್ದು, ತಪ್ಪಿಸಿಕೊಳ್ಳುವಾಗ ಜನರಿಗೆ ಸುಲಭದಲ್ಲಿ ಸಿಕ್ಕಿಬೀಳದಂತೆ ಹೀಗೆ ಅಂಗಿ ಮೇಲೊಂದು ಅಂಗಿ ಧರಿಸಿದ್ದ ಎಂದು ಅಂದಾಜಿಸಲಾಗಿದೆ.
ಮೈಸೂರಿನ ಚಿನ್ನಾಭರಣ ಅಂಗಡಿಯೊಂದರಲ್ಲಿ ಕಳ್ಳತನ ಮಾಡಲು ಯತ್ನಿಸಿ ಪರಾರಿಯಾದ ಕಳ್ಳ ಅಂಗಿ ತೆಗೆದು ಕಾಂಪೌಂಡ್​ವೊಂದರ ಒಳಗೆ ಎಸೆದು ಪರಾರಿಯಾದ ದೃಶ್ಯ.ವಿವರಗಳಿಗೆhttps://t.co/YaFZZbZDD9ನೋಡಿpic.twitter.com/FMAaWkCIJW
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 8 =
Remember me
