ಬೆಂಗಳೂರು:ಇನ್ನೇನು ಕಚೇರಿಯಿಂದ ಹೊರಡಬೇಕು ಎನ್ನುವಷ್ಟರಲ್ಲಿ ಚಿಣ್ಣರು ಸಚಿವರ ಕಚೇರಿಗೆ ಲಗ್ಗೆ ಹಾಕಿ ಸುತ್ತಲೂ ಮುತ್ತಿಕೊಳ್ಳಬೇಕೆ?ಇದೆಲ್ಲ ನಡೆದಿದ್ದು ವಿಕಾಸಸೌಧದಲ್ಲಿರುವ ಸಚಿವ ಚಲುವರಾಯಸ್ವಾಮಿ ಅವರು ಕಚೇರಿಯಲ್ಲಿ.ಇಲಾಖೆಯ ಬಿಡುವಿಲ್ಲದ ಕಾರ್ಯಕ್ರಮ, ಸಾರ್ವಜನಿಕ ಭೇಟಿಯಲ್ಲಿ ತೊಡಗಿದ್ದ ಕೃಷಿ ಸಚಿವರಿಗೆ ಇಂದು ಅಪರೂಪದ ಅತಿಥಿಗಳು ಅಚ್ಚರಿ ತಂದರು.ಒಂದು ದಿನದ ಕ್ಷೇತ್ರ ಪ್ರವಾಸಕ್ಕಾಗಿ ಬೆಂಗಳೂರಿನ ನೆಹರು ತಾರಾಲಯ ಮತ್ತು ವಿಶ್ವೇಶ್ವರಯ್ಯ ಮ್ಯೂಸಿಯಂ ವೀಕ್ಷಣೆಗೆ ಆಗಮಿಸಿದ್ದ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಹೊಣಕೆರೆ ಹೋಬಳಿಯ ಚೀಣ್ಯ ಮತ್ತು ಹೊಣಕೆರೆ ಕ್ಲಸ್ಟರ್‌ನ ಆರು ಸರ್ಕಾರಿ ಪ್ರಾಥಮಿಕ ಶಾಲೆಗಳ ಮಕ್ಕಳು ತಮ್ಮ ಕ್ಷೇತ್ರದ ನಾಯಕರೂ ಆದ ಸಚಿವರನ್ನು ಅವರ ಕಚೇರಿಯಲ್ಲಿ ಭೇಟಿಯಾದರು. ಮಕ್ಕಳೊಂದಿಗೆ ಹಾಗೂ ಶಿಕ್ಷಕರೊಂದಿಗೆ ಆತ್ಮೀಯವಾಗಿ ಮಾತನಾಡಿದ ಸಚಿವರು ಉತ್ತಮ ಶೈಕ್ಷಣಿಕ ಸಾಧನೆ ಮಾಡುವಂತೆ ಕಿವಿ ಮಾತು ಹೇಳಿದ್ದಲ್ಲದೆ, ವಿಧಾನ ಸೌಧ ವಿಕ್ಷಣೆಗೂ ಅವಕಾಶ ಮಾಡೊಕೊಟ್ಟರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × 1 =
Remember me
