ಬೆಂಗಳೂರು:ಗೋಡೆಗೆ ಕನ್ನ ಕೊರೆದ ಕಳ್ಳರಿಬ್ಬರು ಸುಮಾರು ಒಂದು ಕೆ.ಜಿ. ಚಿನ್ನ ಕಳವು ಮಾಡಿರುವ ಪ್ರಕರಣವೊಂದು ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ವರದಿಯಾಗಿದೆ.
ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಸರಾಯಿ ಪಾಳ್ಯದ ರಾಘವೇಂದ್ರ ರಾವ್ ಜುವೆಲರಿಯಲ್ಲಿ ಈ ಕಳ್ಳತನ ನಡೆದಿದೆ. ಸುಮಾರು 1 ಕೆ.ಜಿ. ತೂಕದ ಚಿನ್ನ ಕದ್ದುಕೊಂಡು ಹೋಗಿದ್ದಾರೆ ಎಂದು ಮಾಲೀಕ ದೂರು ನೀಡಿದ್ದಾರೆ ಪೂರ್ವ ವಿಭಾಗದ ಡಿಸಿಪಿ ಭೀಮಶಂಕರ್ ಗುಳೇದ್ ತಿಳಿಸಿದ್ದಾರೆ.
ಇದನ್ನೂ ಓದಿ:ಏನಮ್ಮ ಸೌಮ್ಯ ರೆಡ್ಡಿ.. ಬಂಗಾರ ಹಾಕಲ್ವೇನಮ್ಮ..?; ನೀನಮ್ಮ ರೂಪ.. ಚಿನ್ನ ಹಾಕಲ್ವಾ..?
ಡ್ರಿಲ್ಲಿಂಗ್ ಮಷಿನ್​​ನಿಂದ ನಿನ್ನೆ ರಾತ್ರಿ ಗೋಡೆ ಕೊರೆದು ಈ ಕಳ್ಳತನ ಮಾಡಲಾಗಿದೆ. ಒಬ್ಬ ಒಳಗಿನಿಂದ ನುಸುಳಿದ್ದು, ಇನ್ನೊಬ್ಬ ಹೊರಗಿದ್ದು ಕಳವು ಮಾಡಿದ್ದಾರೆ. ಅಂಗಡಿಯಲ್ಲಿ ಡಿಸ್​​ಪ್ಲೇನಲ್ಲಿಟ್ಟಿದ್ದ ಚಿನ್ನಾಭರಣಗಳನ್ನ ಒಬ್ಬ ಚೀಲದಲ್ಲಿ ತುಂಬಿ ಹೊರಗಡೆ ನಿಂತಿದ್ದವನಿಗೆ ಕೊಟ್ಟಿದ್ದಾನೆ. ನಂತರ ಗೋಡೆ ಕೊರೆಯಲು ಉಪಯೋಗಿಸಿದ್ದ ವಸ್ತುಗಳನ್ನ ಅಲ್ಲೇ ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ. ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ನಾಲಿಗೆ ಚಪಲದಿಂದಾಗಿ ಜೈಲು ಸೇರಿದ ಭೂಪರು; ಬಂಧಿತರಿಂದ ಬಂದೂಕು-ಬೈಕ್ ವಶ

ಸೇಡಿಗೆ ಬಲಿಯಾದನೇ ಹರ್ಷ?; ಆರು ವರ್ಷಗಳಿಂದಿತ್ತು ಹಗೆತನ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 19 =
Remember me
