ಬೆಂಗಳೂರು:ಮನೆ ಮಾಲೀಕರಿಗೆ ತಿಳಿಯದಂತೆ ಗಂಡನ ಜತೆ ಸೇರಿ ಚಿನ್ನಾಭರಣ ಕಳವು ಮಾಡಿದ್ದ ಮನೆ ಕೆಲಸದಾಕೆ ಮತ್ತು ಆಕೆಯ ಪತಿಯನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ.
ಬೇಗೂರು ನಿವಾಸಿ ರಮ್ಯಾ ಮತ್ತು ಪತಿ ಭೀಮಾಶಂಕರ್ ಬಂಧಿತ. 5 ಲಕ್ಷ ರೂ. ಮೌಲ್ಯದ 80 ಗ್ರಾಂ ಚಿನ್ನವನ್ನು ವಶ ಪಡಿಸಿಕೊಳ್ಳಲಾಗಿದೆ. ಬೇಗೂರಿನಲ್ಲಿ ಜ್ಞಾನಲತಾ ಎಂಬುವರ ಮನೆಯಲ್ಲಿ ರಮ್ಯಾ ಕೆಲಸ ಮಾಡುತ್ತಿದ್ದಳು. ಮನೆ ಮಾಲಕಿಗೆ ತಿಳಿಯದಂತೆ ಆಭರಣ ಕಳವು ಮಾಡಿ ಅದನ್ನು ತನ್ನ ಗಂಡನ ಮೂಲಕ ವಿಲೇವಾರಿ ಮಾಡಿಸಿದ್ದಳು. ಈ ಬಗ್ಗೆ ಜ್ಞಾನಲತಾ ಅವರ ಪತಿ ಜಾನ್ ನೀಡಿದ ದೂರಿನ ಮೇರೆಗೆ ಆರೋಪಿಗಳ ಬಂಧನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಮನೆಗಳ ಬೀಗ ಮುರಿದು ಚಿನ್ನಾಭರಣ ಕಳವು ಮಾಡುತ್ತಿದ್ದ ಕಳ್ಳನನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ. ಡಿ.ಜೆ.ಹಳ್ಳಿಯ ನಿವಾಸಿ ನವಾಜ್ ಷರೀಫ್ ಬಂಧಿತ. 16 ಲಕ್ಷ ರೂ. ಮೌಲ್ಯದ ಚಿನ್ನ ಜಪ್ತಿ ಮಾಡಲಾಗಿದೆ. ಸಿಂಗಸಂದ್ರ, ದೇವರಚಿಕ್ಕನಹಳ್ಳಿ, ಹೊಗಸಂದ್ರದ ಮನೆಗಳಲ್ಲಿ ಸರಣಿ ಕಳ್ಳತನ ಆಗಿದ್ದವು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ನವಾಜ್‌ನನ್ನು ಬಂಧಿಸಲಾಗಿದೆ. ವೃತ್ತಿಪರ ಕಳ್ಳ ನವಾಜ್, 25 ವರ್ಷಗಳಿಂದ ಕಳ್ಳತನದಲ್ಲಿ ನಿರತನಾಗಿದ್ದ. ಈತನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ 27 ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾರತ್​ ಜೋಡೋ ಪಾದಯಾತ್ರೆಗೆ ವರುಣ್​ ಗಾಂಧಿ!? ಸುದ್ದಿಗೋಷ್ಠಿಯಲ್ಲಿ ಮಹತ್ವದ ವಿಚಾರ ಸ್ಪಷ್ಟಪಡಿಸಿದ ರಾಹುಲ್​

VIDEO | 1 ಕಿ.ಮೀ ದೂರ ವ್ಯಕ್ತಿಯನ್ನು ಎಳೆದೊಯ್ದ ಬೈಕ್ ಸವಾರ; ಬೆಂಗಳೂರಿನಲ್ಲೊಂದು ಆಘಾತಕಾರಿ ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
