ಬೆಂಗಳೂರು:ಈತನಿಗೆ ಮಾಡೋಕೆ ಕೆಲಸ ಇಲ್ಲದಿದ್ರೂ ಯುವತಿಯ ಲವ್ವಿಡವ್ವಿಯಲ್ಲಿ ಬಿದ್ದಿದ್ದ. ಪ್ರಿಯತಮೆಯ ಗೋವಾ ಪ್ರವಾಸದ ಆಸೆ ಈಡೇರಿಸಲು ಅಣ್ಣನ ಮನೆಯಲ್ಲಿ ಮಾಡಬಾರದ್ದು ಮಾಡಿ ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಅತ್ತ ಪ್ರೀತಿಯ ತಮ್ಮನೆಂದು ಅನ್ನ ಕೊಟ್ಟು, ಆಶ್ರಯ ಕೊಟ್ಟಿದ್ದ ಅಣ್ಣ-ಅತ್ತಿಗೆಗೆ ಆತನ ಅಸಲಿ ಮುಖ ಕಂಡು ಮನನೊಂದಿದ್ದಾರೆ. ಕಿರಿಮಗ ದಾರಿತಪ್ಪಿದ್ದಾನೆ ಎಂಬ ಸುದ್ದಿ ಕೇಳಿ ಹೆತ್ತಮ್ಮ ಆಘಾತಗೊಂಡಿದ್ದಾರೆ.
ಮೊಹಮ್ಮದ್ ಇರ್ಫಾನ್ ಬಂಧಿತ ಆರೋಪಿ. ಆಡುಗೋಡಿಯ ಮಹಾಲಿಂಗೇಶ್ವರ ಬಂಡೆ ಏರಿಯಾದಲ್ಲಿ ಅಣ್ಣ ಸಲ್ಮಾನ್, ಅತ್ತಿಗೆ ಹಾಗೂ ತಾಯಿಯೊಂದಿಗೆ ವಾಸವಿದ್ದ ಇರ್ಫಾನ್​, ಸುದ್ದುಗುಂಟೆಪಾಳ್ಯದಲ್ಲಿ ಅವಕಾಶ ಸಿಕ್ಕಾಗ ಸೇಲ್ಸ್​ಮನ್ ಕೆಲಸ ಮಾಡುತ್ತಿದ್ದ. ಇದ್ದಂತೆ ಕೆಲಸವಿಲ್ಲದೆ ಓಡಾಡಿಕೊಂಡಿದ್ದ. ಇದರ ನಡುವೆ ಯುವತಿಯೊಬ್ಬಳನ್ನ ಪ್ರೀತಿಸುತ್ತಿದ್ದ. ಗೋವಾಗೆ ಹೋಗಿ ಮೋಜು-ಮಸ್ತಿ ಮಾಡಬೇಕು ಎಂಬುದು ಇರ್ಫಾನ್​ನ ಪ್ರೇಯಸಿಯ ಬಯಕೆಯಾಗಿತ್ತು.
ಆದರೆ, ಗೋವಾಗೆ ಹೋಗಲು ಇರ್ಫಾನ್​ ಬಳಿ ಹಣ ಇರಲಿಲ್ಲ. ಆದರೂ ಪ್ರೇಯಸಿಯ ಬಯಕೆ ಈಡೇರಿಸಲು ಈತ, ಕೆಟ್ಟ ನಿರ್ಧಾರ ಮಾಡಿಯೇ ಬಿಟ್ಟ. ಅದರಂತೆ, ಮನೆಯಲ್ಲೇ ಕಳ್ಳತನ ಮಾಡಿದ್ದ. ಅಣ್ಣ-ಅತ್ತಿಗೆಗೆ ಸೇರಿದ 103 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಕದ್ದ ಚಿನ್ನಾಭರಣವನ್ನು ಅಡವಿಟ್ಟು ಪ್ರೇಯಸಿ ಜೊತೆ ಗೋವಾಗೆ ಹೋಗಿದ್ದ.
ನವೆಂಬರ್ 29ರಂದು ಮನೆಯ‌ ಬೀರು ಪರಿಶೀಲಿಸಿದಾಗ ಚಿನ್ನಾಭರಣ ಕಳವಾಗಿರುವುದು ಮನೆಯವರಿಗೆ ಗೊತ್ತಾಗಿದೆ. ಅತ್ತ ನಾಲ್ಕೈದು ದಿನಗಳಿಂದ ಮನೆಗೆ ಇರ್ಫಾನ್ ಬಂದಿರಲಿಲ್ಲ. ಅನುಮಾನಗೊಂಡ ಸಲ್ಮಾನ್, ದೂರು ನೀಡಿದ್ದರು. ದೂರಿನನ್ವಯ ತನಿಖೆ ಕೈಗೊಂಡ ಆಡುಗೋಡಿ ಪೊಲೀಸರು ಕಳ್ಳತನದಲ್ಲಿ ಇರ್ಫಾನ್ ಕೈವಾಡವನ್ನು ಬಯಲು ಮಾಡಿದ್ದಾರೆ. ಗೋವಾದಲ್ಲಿದ್ದಾಗಲೇ ಆರೋಪಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ತಿಪಟೂರಲ್ಲಿ ಎರಡು ತಲೆ ಹಾವು ಮಾರಾಟಕ್ಕೆ ಯತ್ನ: ಪಿಡಿಒ ಸೇರಿ ಮೂವರ ಬಂಧನ

ಪಂಚರತ್ನ ರಥಯಾತ್ರೆಗೆ ಆಗಮಿಸಿದ್ದವರಿಗೆ ಅಪಘಾತ: ಇಬ್ಬರ ಸ್ಥಿತಿ ಗಂಭೀರ, 10 ಮಂದಿಗೆ ಗಾಯ

ಹೊಸ ವರ್ಷಕ್ಕೆ ಟೈಟ್ ರೂಲ್ಸ್: ಮತ್ತೆ ಮಾಸ್ಕ್ ಕಡ್ಡಾಯ; ಸಂಭ್ರಮಾಚರಣೆಗೆ ಮಾರ್ಗಸೂಚಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − seven =
Remember me
