| ಪಂಕಜ ಕೆ.ಎಂ. ಬೆಂಗಳೂರು
ಕರ್ನಾಟಕ ಏಕೀಕರಣ 50ರ ‘ಸುವರ್ಣ ಸಂಭ್ರಮ’ದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ನಾಡು, ನುಡಿ, ಸಂಸ್ಕೃತಿ ಬಿಂಬಿಸುವ ಬೃಹತ್ ಮಟ್ಟದ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಸಿದೆ.
ಮೈಸೂರು, ಬೆಳಗಾವಿ, ಮಂಗಳೂರು, ಕಲಬುರಗಿಯಲ್ಲಿ ಆಯಾ ಪ್ರಾದೇಶಿಕತೆಯ ವೈಶಿಷ್ಟ್ಯಗಳನ್ನು ಒಳಗೊಂಡಂತೆ ಸಮಾವೇಶ ನಡೆಯಲಿದೆ. ಈ ಸಂಬಂಧ ಎಲ್ಲ ಆಕಾಡೆಮಿಗಳು ಹಾಗೂ ಪ್ರಾಧಿಕಾರಿಗಳ ಅಧ್ಯಕ್ಷರು ಹಾಗೂ ಸದಸ್ಯರನ್ನು ಒಳಗೊಂಡು ಯೋಜನೆ ರೂಪಿಸಲಾಗಿದೆ. ಈ ಕುರಿತು ಈಗಾಗಲೇ ಎರಡು ಸುತ್ತಿನ ಸಭೆ ನಡೆಸಲಾಗಿದ್ದು, ಸಮಾರಂಭಗಳ ಆಯೋಜನೆಯ ಖರ್ಚು ವೆಚ್ಚ, ಅನುದಾನ ಬಳಕೆ ಬಗ್ಗೆಯೂ ಚರ್ಚೆ ನಡೆದಿವೆ. ಅಂತಿಮ ಸಭೆ ಬಾಕಿ ಇದ್ದು, ಹೆಚ್ಚುವರಿ ಅನುದಾನದ ಅಗತ್ಯ ಉಂಟಾದಲ್ಲಿ ಸರ್ಕಾರ ಒದಗಿಸಲಿದೆ. ಈ ಎಲ್ಲಾ ಸಮಾವೇಶ ನ. 1ರೊಳಗೆ ನಡೆಸಲು ಉದ್ದೇಶಿಸಲಾಗಿದೆ.
ಬೆಂಗಳೂರಿನಲ್ಲಿ ಸಮಾರೋಪ:ಸುವರ್ಣ ಸಂಭ್ರಮ ನ. 1ರಂದು ಕನ್ನಡ ರಾಜ್ಯೋತ್ಸವದೊಂದಿಗೆ ಬೆಂಗಳೂರಿನಲ್ಲಿ ಸಮಾರೋಪಗೊಳ್ಳಲಿದೆ. ಈಗಾಗಲೇ ರಾಜ್ಯದಲ್ಲಿ ಸಂಚರಿಸುತ್ತಿರುವ ಸುವರ್ಣ ರಥ ಅಂದು ರಾಜಧಾನಿ ತಲುಪಲಿದೆ. ಈ ಬಾರಿ ವಿವಿಧ ಕ್ಷೇತ್ರದ 50 ಸಾಧಕರನ್ನು ಸನ್ಮಾನಿಸಲಾಗುತ್ತಿದೆ. 5 ಬೃಹತ್ ಸಂಪುಟಗಳು ಲೋಕಾರ್ಪಣೆಯಾಗಲಿವೆ.
ಸಾಂಸ್ಕೃತಿಕ ಕಾರ್ಯಕ್ರಮ:ನಾಲ್ಕು ಸಮಾವೇಶಗಳಲ್ಲಿ ಆಯಾ ಪ್ರದೇಶಕ್ಕೆ ಪೂರಕವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುವುದು. ಪ್ರಮುಖವಾಗಿ ‘ಹೊನ್ನ ಬಿತ್ತೇವು’ ಶೀರ್ಷಿಕೆಯಲ್ಲಿ ಸ್ಥಳೀಯ ಸಂಸ್ಕೃತಿಗಳ ಬಿಂಬಿಸುವ ಕಾರ್ಯಕ್ರಮ. ಸಂಗೀತ ಮತ್ತು ನೃತ್ಯ ಅಕಾಡೆಮಿ ವತಿಯಿಂದ ಬ್ಯಾಲೇ ಸೇರಿ ವಿವಿಧ ನೃತ್ಯ ಕಾರ್ಯಕ್ರಮಗಳು, ಕರ್ನಾಟಕ ಏಕೀಕರಣ ಪೂರ್ವ ಹಾಗೂ ನಂತರದ ರಾಜ್ಯದ ಭೌಗೋಳಿಕ ಅಂಶಗಳ ಕುರಿತು ಚಿತ್ರಕಲೆ ರಚನೆ ಹಾಗೂ ಪ್ರದರ್ಶನ. ನಾಟಕ ಅಕಾಡೆಮಿಯಿಂದ ಬೀದಿ ನಾಟಕಗಳ ಪ್ರದರ್ಶನ ಸೇರಿ ವಿವಿಧ ಸಂಗೀತ ಮತ್ತು ಸಾಂಸ್ಕೃತಿಕ ಹಾಗೂ ಜನಪದ ಕಲೆಗಳ ಪ್ರದರ್ಶನ ಇರಲಿದೆ.
ಗೋಕಾಕ್ ಚಳವಳಿ ನೋಟ:ಕಲಬುರಗಿ ಕಂದಾಯ ವಿಭಾಗದ ರಾಯಚೂರಿನಲ್ಲಿ ಸೆಪ್ಟೆಂಬರ್​ನಲ್ಲಿ ಗೋಕಾಕ್ ಚಳವಳಿಯ ಹಿನ್ನೋಟ- ಮುನ್ನೋಟ ರಾಜ್ಯಮಟ್ಟದ ಬೃಹತ್ ಸಮಾವೇಶ ಆಯೋಜನೆ ಆಗಲಿದೆ. ವಿಚಾರ ಗೋಷ್ಠಿ ನಡೆಯಲಿದೆ.
ಗಡಿನಾಡ ಸಮಾವೇಶ:ಬೆಳಗಾವಿ ಕಂದಾಯ ವಿಭಾಗದ ಬಿಜಾಪುರ ಮತ್ತು ಮಹಾರಾಷ್ಟ್ರದ ಗಡಿಯಲ್ಲಿನ ಜತ್ತ ಪ್ರದೇಶದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಗಡಿ ಅಭಿವೃದ್ಧಿ ಪ್ರಾಧಿಕಾರ ಮತ್ತು ವಿವಿಧ ಅಕಾಡೆಮಿಗಳ ಸಹಯೋಗದಲ್ಲಿ ಆಗಸ್ಟ್ 28ರಂದು ಒಂದು ದಿನದ ‘ಗಡಿನಾಡ ಸಮಾವೇಶ’ ಆಯೋಜಿಸಲಾಗಿದೆ. ಚಿಂತಕರ ಸಮಾವೇಶ ಮೈಸೂರಿನಲ್ಲಿ ಸೆಪ್ಟೆಂಬರ್​ನಲ್ಲಿ 2 ದಿನ ಸಾಹಿತಿ, ಚಿಂತಕರ ಸಾಹಿತ್ಯ ಮತ್ತು ಸಂಸ್ಕೃತಿ ಸಮಾವೇಶ ಏರ್ಪಡಿಸಲಾಗಿದೆ.
ಭಾಷಾ ಸಂಭ್ರಮ:ಮಂಗಳೂರಿನಲ್ಲಿ ಅಕ್ಟೋಬರ್​ನಲ್ಲಿ ತುಳು, ಕೊಂಕಣಿ, ಕೊಡವ, ಅರೆಭಾಷ, ಬ್ಯಾರಿ ಸೇರಿ ವಿವಿಧ ಭಾಷಾ ಅಕಾಡೆಮಿಗಳ ಸಹಯೋಗದಲ್ಲಿ ‘ಭಾಷಾ ಸಂಭ್ರಮ’ ನಡೆಯಲಿದೆ.
ಗೋಕಾಕ್ ಚಳವಳಿ ನೋಟ:ಕಲಬುರಗಿ ಕಂದಾಯ ವಿಭಾಗದ ರಾಯಚೂರಿನಲ್ಲಿ ಸೆಪ್ಟೆಂಬರ್​ನಲ್ಲಿ ಗೋಕಾಕ್ ಚಳವಳಿಯ ಹಿನ್ನೋಟ- ಮುನ್ನೋಟ ರಾಜ್ಯಮಟ್ಟದ ಬೃಹತ್ ಸಮಾವೇಶ ಆಯೋಜನೆ ಆಗಲಿದೆ. ವಿಚಾರ ಗೋಷ್ಠಿ ನಡೆಯಲಿದೆ.
ಜನರಿಗೆ ಸತ್ಯ ತಿಳಿಸಲು ಪಾದಯಾತ್ರೆ: ಸಿ.ಟಿ.ರವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 19 =
Remember me
