| ಅಶೋಕ ಶೆಟ್ಟರ ಬಾಗಲಕೋಟೆ
ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಕೋಟೆಕಲ್ಲ ಗ್ರಾಮದ ಮಹಾಗುಂಡಪ್ಪ ಹುಚ್ಚಪ್ಪ ಕಮತರ ಅಕ್ಷರಶಃ ‘ಬಂಗಾರದ ಮನುಷ್ಯ’ ಚಿತ್ರದ ‘ರಾಜೀವಪ್ಪ’ ಎಂದರೆ ತಪ್ಪಾಗದು. ನಡೆದುಕೊಂಡು ಹೋಗಲು ಆಗದ ಗುಡ್ಡ. ಎತ್ತ ನೋಡಿದರೂ ಕಲ್ಲು ಬಂಡಿ, ಮುಳ್ಳಿನ ರಾಶಿ. ಇಲ್ಲಿ ಏನಾದರೂ ಮಾಡಲು ಆಗುತ್ತಾ? ಆಗದು ಆಗದು ಎಂದವರೇ ಎಲ್ಲ. ಆದರೆ, ಮಹಾಗುಂಡಪ್ಪ ಮನಸ್ಸಿನಲ್ಲಿ ಮನೆ ಮಾಡಿದ್ದ ಆ ರಾಜೀವಪ್ಪ ‘ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವೂ ಮುಂದೆ’ ಎಂದು ಬಡಿದೆಬ್ಬಿಸಿತ್ತು.
ತಂದೆ ಸಾಗುವಳಿ ಮಾಡುತ್ತಿದ್ದ ಜಮೀನಿನಲ್ಲಿ ಸಹೋದರರಿಗೆಲ್ಲ ಭೂಮಿ ಹಂಚಿಕೆಯಾದಾಗ ಮಹಾಗುಂಡಪ್ಪ ಪಾಲಿಗೆ ಬಂದಿದ್ದು ಒಂದು ಎಕರೆ 25 ಗುಂಟೆಯ ಗುಡ್ಡ. ಇಲ್ಲೇ ಏನಾದರೂ ಸಾಧಿಸಬೇಕು ಎಂಬ ಛಲದಿಂದ ಒಂದೊಂದೆ ಕಲ್ಲು ಬಂಡೆ ಒಡೆದು ಪುಡಿ ಮಾಡಿ ಹಸನು ಮಾಡಿಕೊಂಡು ಒಂದು ಎಕರೆಯಲ್ಲಿ ಕೃಷಿ ಕಾಯಕ ಆರಂಭಿಸಿದರು. ಈ ಒಂದು ದಶಕದ ಅವಧಿಯಲ್ಲಿ ಆ ಕಲ್ಲಿನ ಜಾಗ ಹೂವಾಗಿ ಅರಳಿದೆ. ಗುಡ್ಡದಲ್ಲಿ ಇರುವುದರಿಂದ ಜಮೀನಿಗೆ ಎತ್ತಿನ ಬಂಡಿ, ವಾಹನಗಳು ಬರಲ್ಲ. ಹೀಗಾಗಿ ತಾವೇ ಸ್ವತಃ ಇಂಜನಿಯರ್, ವಿಜ್ಞಾನಿಯಾದರು. ಒಂದು ಸೈಕಲ್ ತಯಾರು ಮಾಡಿಕೊಂಡು ಅದಕ್ಕೆ ಮಡಿಕೆ, ಕುಂಟಿ, ಕೂರಗಿ, ಗುರದಾಳು, ಎಡೆಹೊಡೆಯುವ ಕುಂಟಿ ಹೀಗೆ ಎಲ್ಲ ಸಾಮಗ್ರಿಗಳನ್ನು ತಯಾರು ಮಾಡಿಕೊಂಡು, ಆ ಮೂಲಕ ಕೃಷಿ ಚಟುವಟಿಕೆ ಮಾಡುತ್ತಿರುವುದು ವಿಶೇಷ.
ಬಂಗಾರ ಮನುಷ್ಯ ಬಿರುದು: ಮಹಾಗುಂಡಪ್ಪ ಅವರ ಕೃಷಿ ಪ್ರೀತಿ ಅವರನ್ನು ಒಬ್ಬ ಯಶಸ್ವಿ, ಮಾದರಿ ಕೃಷಿಕನನ್ನಾಗಿಸಿದೆ. ಇದಕ್ಕೆ ಅವರಿಗೆ ಬಾಗಲಕೋಟೆ ಕೃಷಿ ವಿಜ್ಞಾನ ಕೇಂದ್ರ ಮಾರ್ಗದರ್ಶನವೂ ನಿರಂತರವಾಗಿ ದೊರೆಯುತ್ತಿದೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ 2015ರಲ್ಲಿ ಇವರಿಗೆ ಪ್ರಶಸ್ತಿ ನೀಡಿ, ಕೋಟೆಕಲ್ಲಿನ ಬಂಗಾರದ ಮನುಷ್ಯ ಎನ್ನುವ ಬಿರುದನ್ನು ನೀಡಿ ಗೌರವಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + seventeen =
Remember me
