ಚಿಕ್ಕಮಗಳೂರು:ಬೀಗರ ಊಟಕ್ಕೆ ಬಂದಿದ್ದ ಮೂವರ ಜತೆಗೆ ಮತ್ತಿಬ್ಬರು ಸೇರಿ ಒಟ್ಟು ಐವರು ಯುವಕರು ನೀರು ಪಾಲಾಗಿದ್ದಾರೆ.
ತಾಲೂಕಿನ ವಸ್ತಾರೆಯ ಹಿರೇಕೆರೆಯಲ್ಲಿ ಬುಧವಾರ ಈಜಲು ತೆರಳಿದ್ದ ರಘು (22), ದಿಲೀಪ್ (24), ಸಂದೀಪ್ (23), ದೀಪಕ್ (25) ಹಾಗೂ ಸುದೀಪ್ (22) ನಾಪತ್ತೆಯಾಗಿದ್ದರು. ಕೆರೆಯಲ್ಲಿ ಮುಳುಗಿರಬಹುದೆಂಬ ಶಂಕೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಧಾವಿಸಿದ್ದು, ಕೆರೆಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಮಧ್ನಾಹ್ನ 3.30ರ ಸುಮಾರಿಗೆ ಸಂದೀಪ್ ಮೃತದೇಹ ಪತ್ತೆಯಾಗಿದೆ.
ಇನ್ನುಳಿದ ನಾಲ್ವರಿಗಾಗಿ ಬೋಟ್ ಬಳಸಿ ಶೋಧ ಕಾರ್ಯ ಮುಂದುವರಿದೆ. ಸಂದೀಪ್​ ಶವ ಪತ್ತೆಯಾಗುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇನ್ನುಳಿದ ನಾಲ್ವರು ಯುವಕರ ಕುಟುಂಬಸ್ಥರು ಕೆರೆ ದಡದಲ್ಲಿಯೇ ಬೀಡು ಬಿಟ್ಟಿದ್ದು, ಆತಂಕದ ಜತೆಗೆ ಕಣ್ಣೀರು ಹಾಕುತ್ತಲೇ ಇದ್ದ ದೃಶ್ಯ ಕಂಡು ಬಂತು. ಮಕ್ಕಳು ಜೀವಂತವಾಗಿ ಸಿಕ್ಕರೆ ಸಾಕು ಎಂದೆಲ್ಲ ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಕೆರೆಯಲ್ಲಿ ಈಜಾಡಲು ಹೋಗಿದ್ದ ಐವರಲ್ಲಿ ಇಬ್ಬರು ಯುವಕರು ಸ್ಥಳೀಯ ನಿವಾಸಿಗಳು. ಉಳಿದ ಮೂವರು ಬೀಗರ ಮನೆ ಊಟಕ್ಕೆಂದು ಗ್ರಾಮಕ್ಕೆ ಬಂದಿದ್ದರು. ಈ ನಡುವೆ ಸ್ಥಳೀಯ ಯುವಕರಿಬ್ಬರ ಜತೆ ಈಜಾಟಕ್ಕೆ ಹೋಗಿ ಎಲ್ಲರೂ ಮೃತ್ಯುಕೂಪಕ್ಕೆ ಸಿಲುಕಿದ್ದು ಮಾತ್ರ ವಿಪರ್ಯಾಸ. ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿಸಿದೆ.
https://www.vijayavani.net/matrimonial-groom-robbery/
ಉಮಾಶ್ರೀ ಕಾರು ಅಪಘಾತ, ಸ್ಥಳದಲ್ಲೇ ಇಬ್ಬರ ಸಾವು! ತೀವ್ರ ಸಂಕಟಕ್ಕೆ ಸಿಲುಕಿದ ನಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
