ಗುಂಪು ವಿಮೆ ಅನುಷ್ಠಾನಕ್ಕೆ ನಿವೃತ್ತ ಪೊಲೀಸ್ ಅಧಿಕಾರಿ/ಸಿಬ್ಬಂದಿ ಕ್ಷೇಮನಿಧಿ ಕೇಂದ್ರ ಸಮಿತಿ ಸಭೆ ನಿರ್ಧಾರ
| ಕೀರ್ತಿನಾರಾಯಣ ಸಿ. ಬೆಂಗಳೂರು
ನಿವೃತ್ತ ಪೊಲೀಸ್ ಕುಟುಂಬಗಳಿಗೆ ಆರೋಗ್ಯ ಭಾಗ್ಯ ಕಲ್ಪಿಸುವ ನಿಟ್ಟಿನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ/ಸಿಬ್ಬಂದಿ ಕ್ಷೇಮನಿಧಿ ಕೇಂದ್ರ ಸಮಿತಿ ಹಾಗೂ ನಿವೃತ್ತ ಪೊಲೀಸ್ ಆರೋಗ್ಯ ಯೋಜನೆ ಟ್ರಸ್ಟ್ ಹಲವು ನಿರ್ಣಯ ತೆಗೆದುಕೊಂಡಿದೆ. ಇನ್ನು ಮುಂದೆ 14 ಸಾವಿರ ನಿವೃತ್ತ ಪೊಲೀಸ್ ಕುಟುಂಬಗಳಿಗೆ ಅನುಕೂಲವಾಗುವಂತೆ ಗುಂಪು ವಿಮೆ ಜಾರಿಗೊಳಿಸುವ ಜತೆಗೆ ಸೇವೆಯಲ್ಲಿದ್ದಾಗ ಆರೋಗ್ಯ ಭಾಗ್ಯ ಯೋಜನೆಯ ಸೌಲಭ್ಯ ಪಡೆದಿರುವ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ, ನಿವೃತ್ತ ಪೊಲೀಸ್ ಆರೋಗ್ಯ ಯೋಜನೆಯಲ್ಲೂ ಸೌಲಭ್ಯ ಪಡೆಯಲು ಅರ್ಹರಿದ್ದಾರೆ ಎಂದು ಘೋಷಿಸಿದೆ.
ಪ್ರಸ್ತಾವನೆ ಏನಿತ್ತು?:ನಿವೃತ್ತ ಪೊಲೀಸ್ ಕುಟುಂಬಗಳಿಗೆ ಈವರೆಗೆ ಗಂಭೀರ ಕಾಯಿಲೆಗೆ 2 ಲಕ್ಷ ರೂ. ಮತ್ತು ಸಾಮಾನ್ಯ ಕಾಯಿಲೆಗೆ 1 ಲಕ್ಷ ರೂ.ನಂತೆ ಆಸ್ಪತ್ರೆ ವೆಚ್ಚ ಕೊಡಲಾಗುತ್ತಿದೆ. ಆದರೆ, ಸಾಮಾನ್ಯ ಕಾಯಿಲೆಗೆ ಸೌಲಭ್ಯ ಪಡೆಯುವ ನಿವೃತ್ತ ಪತಿ/ಪತ್ನಿಯರ ಸಂಖ್ಯೆ ಜಾಸ್ತಿ ಇದ್ದು, ಆಸ್ಪತ್ರೆಯ ವೆಚ್ಚವು ದುಬಾರಿಯಾಗಿರುವುದರಿಂದ ಸಾಮಾನ್ಯ ಚಿಕಿತ್ಸೆಗೂ 2 ಲಕ್ಷ ರೂ.ವರೆಗೆ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಬೇಕು ಎಂದು ಡಿಜಿ-ಐಜಿಪಿ ಡಾ.ಅಲೋಕ್ ಮೋಹನ್ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಕೆಯಾಗಿತ್ತು.
ನಿವೃತ್ತ ಪೊಲೀಸ್ ಆರೋಗ್ಯ ಯೋಜನೆಯಡಿ ಯಲ್ಲಿ ಸಾಮಾನ್ಯ ಮತ್ತು ಗಂಭೀರ ಚಿಕಿತ್ಸೆಗಳಿಗೆ ನಿಗದಿಪಡಿಸಿರುವ ದರ ಸರಿಯಾಗಿದೆ. ಆದ್ದರಿಂದ ಸಾಮಾನ್ಯ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಹೆಚ್ಚಿಸುವ ಬದಲು ಗುಂಪು ವಿಮಾ ಯೋಜನೆಯನ್ನು ಅನುಷ್ಠಾನಕ್ಕೆ ತರುವ ಬಗ್ಗೆ ಡಿಜಿಪಿ ಒಲವು ವ್ಯಕ್ತಪಡಿಸಿದ್ದು, ಈ ಬಗ್ಗೆ ವಿಮಾ ಕಂಪನಿಗಳ ಜತೆ ರ್ಚಚಿಸುವಂತೆ ಆಡಳಿತ ವಿಭಾಗದ ಎಡಿಜಿಪಿ ಅವರಿಗೆ ಸೂಚನೆ ಕೊಟ್ಟಿದ್ದಾರೆ.
ಇದಲ್ಲದೆ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದಿರುವ ಶೀಘ್ರಲಿಪಿಗಾರರು, ಡೆಪ್ಯುಟಿ ಡೈರೆಕ್ಟರ್, ಫಾರೆನ್ಸಿಕ್ ಸೈಟಿಂಸ್ಟ್​ಗಳಿಗೂ ನಿವೃತ್ತ ಪೊಲೀಸ್ ಆರೋಗ್ಯ ಯೋಜನೆಯಲ್ಲಿ ಸದಸ್ಯತ್ವ ಪಡೆಯಲು ಈಗ ಅವಕಾಶ ಇಲ್ಲ. ಹೀಗಾಗಿ ಸೇವೆಯಲ್ಲಿರುವಾಗ ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ ಸೌಲಭ್ಯ ಪಡೆದಿರುವ ಎಲ್ಲರೂ ನಿವೃತ್ತ ಪೊಲೀಸ್ ಆರೋಗ್ಯ ಯೋಜನೆಯಡಿ ಇನ್ನುಮುಂದೆ ಸೇವೆ ಪಡೆಯಬಹುದು ಎಂದು ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.
50 ಕೋಟಿ ಹೆಚ್ಚುವರಿ ಅನುದಾನ:ಆರೋಗ್ಯ ಯೋಜನೆಗಾಗಿ ಸರ್ಕಾರ ಸದ್ಯ 25 ಕೋಟಿ ರೂ. ಅನುದಾನ ಕೊಟ್ಟಿದೆ. ಅದನ್ನು ನಿಶ್ಚಿತ ಠೇವಣಿ ರೂಪದಲ್ಲಿರಿಸಿದ್ದು, ಅದರಿಂದ ಬರುವ ಬಡ್ಡಿ, ವಂತಿಗೆಯನ್ನು ಬಳಸಲಾಗುತ್ತದೆ. ಪೊಲೀಸ್ ಧ್ವಜ ದಿನಾಚರಣೆಯ ಪ್ರಯುಕ್ತ ಮಾರಾಟ ಮಾಡುವ ಧ್ವಜಗಳಿಂದ ಬರುವ ಹಣದಲ್ಲಿ ಶೇ.50 ಇದೇ ಯೋಜನೆಗೆ ಬಳಸಲಾಗುತ್ತಿದೆ. ಅದರ ಜತೆಗೆ ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಆರೋಗ್ಯ ಯೋಜನೆಗೆ 50 ಕೋಟಿ ಹೆಚ್ಚುವರಿ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ತೀರ್ವನಿಸಲಾಗಿದೆ.
ಶವಸಂಸ್ಕಾರಕ್ಕೆ ತಕ್ಷಣ ಹಣ:ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಮೃತರಾದ ವಿಚಾರ ತಿಳಿಯುತ್ತಿದ್ದಂತೆಯೇ ಆಯಾ ಘಟಕಾಧಿಕಾರಿಗಳು, ಶವಸಂಸ್ಕಾರದ ಮೊತ್ತವನ್ನು ಅವರ ಕುಟುಂಬಕ್ಕೆ ತಲುಪಿಸಬೇಕು. ಒಂದು ವೇಳೆ ತಕ್ಷಣ ಮೃತರ ಮಾಹಿತಿ ಗೊತ್ತಾಗದಿದ್ದಲ್ಲಿ 3 ದಿನಗಳ ಒಳಗಾಗಿಯಾದರೂ ಆ ಮೊತ್ತವನ್ನು ಕುಟುಂಬಕ್ಕೆ ತಲುಪಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಡಿಜಿಪಿ, ಎಲ್ಲ ಘಟಕಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪಿಂಚಣಿ ಪತ್ರ ಸಿಗುವವರೆಗೆ ಕಾಯಬೇಕಿಲ್ಲ :ಸದ್ಯ ಯೋಜನೆಯಡಿಯಲ್ಲಿ ಸದಸ್ಯತ್ವ ಪಡೆಯಲು ಪಿಂಚಣಿ ದಾಖಲಾತಿಗಳು ಸಿಗುವವರೆಗೆ ಸಾಧ್ಯವಿಲ್ಲ. ಎಜಿ ಕಚೇರಿಯಿಂದ ಪಿಂಚಣಿ ದಾಖಲಾತಿ ಬರಲು 6 ತಿಂಗಳು ಬೇಕು. ಹಾಗಾಗಿ ಇನ್ನು ಮುಂದೆ ನಿವೃತ್ತಿ ಹೊಂದಿದ ನಂತರ ಪಿಂಚಣಿ ಪತ್ರ ಸ್ವೀಕೃತವಾಗುವವರೆವಿಗೂ ಕಾಯದೇ ಸೇವಾ ದೃಢೀಕರಣ ಪ್ರಮಾಣ ಪತ್ರದ ಆಧಾರದ ಮೇಲೆ ನಿವೃತ್ತ ಪೊಲೀಸ್ ಆರೋಗ್ಯ ಯೋಜನೆಯಡಿಯಲ್ಲಿ ಸದಸ್ಯತ್ವ ಪಡೆಯಬಹುದಾಗಿದೆ.
ಆನ್​ಲೈನ್ ವ್ಯವಸ್ಥೆ :ಆರೋಗ್ಯ ಭಾಗ್ಯ ಯೋಜನೆಯಡಿ ಸೌಲಭ್ಯ ಪಡೆಯಲು ಆನ್​ಲೈನ್ ವ್ಯವಸ್ಥೆ ಜಾರಿಯಲ್ಲಿದೆ. ಅದನ್ನು ನಿವೃತ್ತ ಪೊಲೀಸ್ ಆರೋಗ್ಯ ಯೋಜನೆಗೂ ವಿಸ್ತರಣೆ ಮಾಡಲು ಸೂಚನೆ ನೀಡಲಾಗಿದೆ. ಈ ಬಗ್ಗೆ ಅಗತ್ಯ ಮಾಹಿತಿಯನ್ನು ಸಂಗ್ರಹಿಸಿ ಸಂಬಂಧಪಟ್ಟ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಜವಾಬ್ದಾರಿಯನ್ನು ಎಸ್​ಸಿಆರ್​ಬಿ ವಿಭಾಗದ ಎಡಿಜಿಪಿಗೆ ವಹಿಸಲಾಗಿದೆ.
ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ; ಎಸ್​​ಐಟಿ ತನಿಖೆಗೆ ಸಿಎಂ ಆದೇಶ, ವಿದೇಶಕ್ಕೆ ಹಾರಿದ್ರಾ ಹಾಸನ ಸಂಸದ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − six =
Remember me
