ಬೆಂಗಳೂರು:ಬಹಳ ವರ್ಷಗಳ ಹಿಂದೆ ವಸತಿ ಯೋಜನೆಯ ಫಲಾನುಭವಿಯಾಗಿ, ವಿವಿಧ ಕಾರಣಕ್ಕೆ ಮನೆಯನ್ನೂ ಪೂರ್ತಿ ಮಾಡಿಕೊಳ್ಳಲಾಗದೆ, ಹೊಸ ಯೋಜನೆಗೂ ಫಲಾನುಭವಿಯಾಗಲು ಸಾಧ್ಯವಾಗದೆ ಪರಿತಪಿಸುತ್ತಿದ್ದ ಎರಡು ಲಕ್ಷ ಕುಟುಂಬಕ್ಕೆ ಬೊಮ್ಮಾಯಿ ಸರ್ಕಾರ ಶುಭ ಸುದ್ದಿ ನೀಡಿದೆ.
ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಮಹತ್ವದ ಚರ್ಚೆ ನಡೆದಿದ್ದು, ತ್ರಿಶಂಕುವಾಗಿದ್ದ ಫಲಾನುಭವಿಗಳಿಗೆ ಸಂಕಷ್ಟದಿಂದ ಮುಕ್ತಿ ನೀಡಲು ನಿರ್ಣಯಿಸಲಾಯಿತು. ಈ ಹಿಂದೆ ವಿವಿಧ ವಸತಿ ಯೋಜನೆಗಳಡಿ ಫಲಾನುಭವಿಯಾಗಿ, ಸರ್ಕಾರದಿಂದ ಮನೆ ಹಂಚಿಕೆಯಾಗಿದ್ದರೂ ಎರಡು ಲಕ್ಷದಷ್ಟು ಫಲಾನುಭವಿಗಳು ಪೋರ್ಟಲ್​ನಲ್ಲಿ ಸೂಕ್ತ ಮಾಹಿತಿ ಅಪ್​ಲೋಡ್ ಮಾಡದೆ ಅನುದಾನ ಪಡೆದಿರಲಿಲ್ಲ. ಇನ್ನು ಕೆಲವರು ಮನೆಗಳನ್ನೇ ಆರಂಭಿಸದೆ ಯೋಜನೆ ಲಾಭ ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಅಂತಹವರ ಫಲಾನುಭವಿತ್ವವನ್ನು ರದ್ದು ಮಾಡಿ, ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲು ನಿಶ್ಚಯಿಸಲಾಗಿದೆ. ಈ ರೀತಿ ತ್ರಿಶಂಕು ಸ್ಥಿತಿಯಲ್ಲಿದ್ದ 2 ಲಕ್ಷ ಕುಟುಂಬಕ್ಕೆ ಈವರೆಗೆ ಹೊಸ ವಸತಿ ಯೋಜನೆಗಳಿಗೆ ಪುನಾ ಅರ್ಜಿ ಸಲ್ಲಿಸಲು ಅವಕಾಶವೇ ಇರಲಿಲ್ಲ.
ಒಂದೇ ಪ್ರಕರಣಕ್ಕೆ ಒಂದೇ ಕೇಸ್:ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ವಿಧೇಯಕವನ್ನು ಶಾಸನಸಭೆ ಯಲ್ಲಿ ಮಂಡಿಸಲು ಸಂಪುಟ ಸಭೆ ಅನುಮೋದನೆ ನೀಡಿದೆ. ಕೆಲವು ಪ್ರಕರಣಗಳಲ್ಲಿ 5-6, ಅದಕ್ಕಿಂತ ಎಫ್​ಐಆರ್ ಆಗುತ್ತಿತ್ತು, ಅದನ್ನೆಲ್ಲ ಸೇರಿಸಿ ಒಂದೇ ಕೇಸ್ ನಡೆಸಲು ಕಾನೂನು ತಿದ್ದುಪಡಿ ಅವಶ್ಯಕತೆ ಇದೆ. ಹಣಕಾಸು ವಿಷಯದಲ್ಲಿ ಒಂದೇ ಪ್ರಕರಣದಲ್ಲಿ ಬೇರೆ ಬೇರೆ ಎಫ್​ಐಆರ್ ದಾಖಲಾಗಿದ್ದರೆ, ಅದನ್ನೆಲ್ಲ ಸೇರಿಸಿ ಒಂದೇ ಕ್ರೖೆಮ್ ನಂಬರ್​ನಡಿ ನಡೆಸುವ ಉದ್ದೇಶದಿಂದ ಕಾಯ್ದೆ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ.
ಇಂದಿರಾ ಕ್ಯಾಂಟೀನ್ ಶಿಫ್ಟ್:ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಕುರಿತು ಸಮಗ್ರ ಅಧ್ಯಯನ ನಡೆಸಿ, ಎಲ್ಲೆಲ್ಲಿ ಕ್ಯಾಂಟೀನ್ ಅಗತ್ಯ ಇಲ್ಲವೋ ಅದನ್ನು ಗುರುತಿಸಿ, ಜನನಿಬಿಡ ಪ್ರದೇಶಗಳಿಗೆ ವರ್ಗಾಯಿಸಲು ಸರ್ಕಾರ ಬಯಸಿದೆ. ಸ್ಥಳೀಯ ಸಂಸ್ಥೆಗಳು ಈ ಯೋಜನೆಗೆ ತಮ್ಮ ಪಾಲಿನ ಶೇ.30-40 ಅನುದಾನ ಕೊಡಲು ಶಕ್ತಿ ಇಲ್ಲ ಎಂದಿದ್ದವು. ಸರ್ಕಾರವೇ ಅನುದಾನ ಕೊಡಬೇಕೆಂದರೆ ಸ್ಥಳ ಬದಲಿಸಿ, ಹೆಚ್ಚಿನ ಜನರಿಗೆ ಅನುಕೂಲವಾಗುವ ಸ್ಥಳದಲ್ಲಿ ಮಾಡಿ ಎಂದು ಸೂಚಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + thirteen =
Remember me
