|ರುದ್ರಣ್ಣ ಹರ್ತಿಕೋಟೆಬೆಂಗಳೂರು
ರಾಜ್ಯದಲ್ಲಿರುವ 312 ಪೌರಸಂಸ್ಥೆಗಳಲ್ಲಿ 25 ಸಾವಿರಕ್ಕೂ ಹೆಚ್ಚಿನ ನೌಕರರು ವಿವಿಧ ಹೆಸರಿನಲ್ಲಿ ಹಂಗಾಮಿಯಾಗಿ ಕೆಲಸ ಮಾಡುತ್ತಿದ್ದು, ಗೌರವಯುತ ಬದುಕು ನಡೆಸಲು ಸಾಧ್ಯವಾಗುವಂತೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇತ್ತೀಚಿಗೆ ಬೆಳಗಾವಿ ಅಧಿವೇಶನ ಸಂದರ್ಭ ಪೌರಾಡಳಿತ ಸ//ಂಸ್ಥೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ವಿುಕರಿಗೆ ಕಾಯಂ ಮತ್ತು ನೇರ ನಗದು ಪಾವತಿ ವ್ಯವಸ್ಥೆ ವ್ಯಾಪ್ತಿಗೆ ತರುವ ಬಗ್ಗೆ ಆದೇಶ ಪತ್ರಗಳನ್ನು ನೀಡಲಾಯಿತು. ಆ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪೌರಾಡಳಿತ ಸಚಿವ ಎಂಟಿಬಿ ನಾಗರಾಜು ಭರವಸೆ ನೀಡಿದ್ದರು. ಇದೀಗ ಇಲಾಖೆಯ ಅಧಿಕಾರಿಗಳು ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದಾರೆ ಎಂದು ಪೌರಾಡಳಿತ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.
ಯಾವ ನೌಕರರು:ಪೌರಸಂಸ್ಥೆಗಳಲ್ಲಿ ಪೌರ ಕಾರ್ವಿುಕರು, ಸಹಾಯಕರು, ನೀರು ಸರಬರಾಜು ಮಾಡುವವರು, ಹೆಲ್ಪರ್​ಗಳು, ವಾಲ್​ವುನ್​ಗಳು, ವಾಹನ ಚಾಲಕರು, ಯುಜಿಡಿ ಹೆಲ್ಪರ್​ಗಳು, ಕ್ಲೀನರ್​ಗಳು, ಲೋಡರ್​ಗಳು ಹಂಗಾಮಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಯಾವ ಹೆಸರಿನಲ್ಲಿ ಸೇವೆ:ಗುತ್ತಿಗೆ, ಹೊರಗುತ್ತಿಗೆ, ದಿನಗೂಲಿ, ಕ್ಷೇಮಾಭಿವೃದ್ಧಿ ನಿಧಿ, ಕನಿಷ್ಠ ವೇತನ, ಸಮಾನ ಕೆಲಸಕ್ಕೆ ಸಮಾನ ಕೂಲಿ ಹೀಗೆ ವಿವಿಧ ಹೆಸರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಾಯಂ ನೌಕರರಿಗೂ ಈ ನೌಕರರಿಗೂ ವೇತನದಲ್ಲಿ ಅಜಗಜಾಂತರ ವ್ಯತ್ಯಾಸಗಳಿವೆ. ಏಜೆನ್ಸಿಗಳ ಮೂಲಕ ನೇಮಕ ಆಗುವುದರಿಂದ ಇವರಿಗೆ ಸರ್ಕಾರ ನಿಗದಿ ಮಾಡಿರುವ ಮೊತ್ತ ಪೂರ್ತಿಯೂ ಸಿಗದೆ ಶೋಷಣೆಯಾಗುತ್ತಿದೆ. ಅದನ್ನು ತಪ್ಪಿಸಬೇಕೆಂದು ಸರ್ಕಾರ ಈಗ ಮುಂದಾಗಿದೆ.
ಎರಡೇ ವಿಧ:ಪೌರ ಸಂಸ್ಥೆಗಳ ನೌಕರಿಯಲ್ಲಿ ಮುಂದೆ ಎರಡೇ ವಿಧದ ನೌಕರಿಗಳಿರುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಒಂದು ಪೌರ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಕಾಯಂ ನೌಕರರು, ಇನ್ನೊಂದು ನೇರ ವೇತನ ಪಾವತಿಯ ನೌಕರರೆಂದು ನಿಗದಿ ಮಾಡಲಾಗುತ್ತದೆ. ಇದರಿಂದ ನೌಕರರಿಗೆ ಸಾಕಷ್ಟು ಅನುಕೂಲವಾಗುತ್ತದೆ ಎಂದೇ ಹೇಳಲಾಗುತ್ತಿದೆ. ಈ ನೌಕರರಿಗೆ ಕೊಡುವ ವೇತನವೇ ಕಡಿಮೆಯಾಗಿದೆ. ಆದ್ದರಿಂದ ಗೌರವಯುತ ಬದುಕು ನಡೆಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದಲೇ ಸರ್ಕಾರ ಇಂತಹ ಮಹತ್ವದ ನಿರ್ಧಾರಕ್ಕೆ ಬಂದಿದೆ.
ಗುತ್ತಿಗೆ, ಹೊರ ಗುತ್ತಿಗೆ ರದ್ದು:ಕಾಯಂ ಮಾಡಲು ಸಾಧ್ಯವಾಗದಿರುವ ನೌಕರರಿಗೆ ನೇರ ವೇತನ ಪಾವತಿ ವ್ಯಾಪ್ತಿಗೆ ತರಲು ಗುತ್ತಿಗೆ, ಹೊರ ಗುತ್ತಿಗೆ ರದ್ದು ಮಾಡಲಾಗುತ್ತದೆ. ಕೆಲಸ ಮಾಡುತ್ತಿರುವ ನೌಕರರಿಗೆ ಅನ್ಯಾಯ ಮಾಡುವುದಿಲ್ಲ. ಬದಲಾಗಿ ಅವರನ್ನೇ ಮುಂದುವರಿಸಲಾಗುತ್ತದೆ. ಯಾವುದೇ ಏಜೆನ್ಸಿಗಳು ನ್ಯಾಯಾಲಯದ ಮೆಟ್ಟಿಲು ಹತ್ತಲು ಸಾಧ್ಯವಾಗದಿರುವಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಸರ್ಕಾರ ಕೈಗೊಂಡಿರುತ್ತದೆ ಎಂದು ಮೂಲಗಳು ಖಚಿತಪಡಿಸಿವೆ.
ಎಷ್ಟು ವೇತನ ನಿಗದಿ?:ಸದ್ಯ ವಿವಿಧ ನಿಯಮದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ನಿಗದಿಯಾಗಿರುವ ಸಮಾನ ಕೆಲಸಕ್ಕೆ ಸಮಾನ ವೇತನ ಶ್ರೇಣಿಯವರಿಗೆ 23,593 ರೂ. ಹೊರಗುತ್ತಿಗೆ, ಕನಿಷ್ಠ ವೇತನ, ದಿನಗೂಲಿಯಲ್ಲಿ ನೇಮಕವಾಗಿರುವವರಿಗೆ 14,325, ಕ್ಷೇಮಾಭಿವೃದ್ಧಿ ನಿಧಿಯಲ್ಲಿ ನೇಮಕವಾಗಿರುವವರಿಗೆ 21,160 ರೂ. ಹಾಗೂ ಇತರರಿಗೆ 1,3962 ರೂ. ಇದೆ. ಈ ತಾರತಮ್ಯವನ್ನು ತಪ್ಪಿಸುವುದು ಸಹ ಸರ್ಕಾರದ ಉದ್ದೇಶವಾಗಿದೆ.
ನೇಮಕಾತಿ:ಸರ್ಕಾರ 1,437 ಲೋಡರ್ಸ್ ಮತ್ತು 309 ಕ್ಲಿನರ್ಸ್​ಗಳನ್ನು ನೇಮಕ ಮಾಡಿಕೊಳ್ಳಲು ಉದ್ದೇಶಿಸಿದೆ. ಶೀಘ್ರದಲ್ಲಿಯೇ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮೂಲಗಳು ಖಚಿತಪಡಿಸಿವೆ.
ಅಧಿಕಾರಿಗಳಲ್ಲಿ ನಿರಾಸಕ್ತಿ:ಸರ್ಕಾರ ನೌಕರರ ಶೋಷಣೆ ತಪ್ಪಿಸಲು ನಿರ್ಧರಿಸಿದ್ದರೆ, ಕೆಲವು ಅಧಿಕಾರಿಗಳು ಮಾತ್ರ ವೇತನದ ವೆಚ್ಚ ಹೆಚ್ಚಾಗುತ್ತದೆ ಎಂಬ ಅಭಿಪ್ರಾಯ ನೀಡಿದ್ದಾರೆ. ಆದರೆ ಸರ್ಕಾರ ಮಾತ್ರ ತಳವರ್ಗದಲ್ಲಿ ಕೆಲಸ ಮಾಡುವವರ ನೆರವಿಗೆ ನಿಲ್ಲುವ ದೃಢ ನಿರ್ಧಾರ ಮಾಡಿದೆ ಎಂದು ಹೇಳಲಾಗುತ್ತಿದೆ.
‘ನಾನು ಯೂಟ್ಯೂಬರ್ ಆಗಿದ್ದು ಯಾಕೆ?’ ಅಂತ ಖುದ್ದು ಡಾ.ಬ್ರೋ ಅವರೇ ಹಂಚಿಕೊಂಡಿದ್ದಾರೆ ಇಲ್ಲಿ..

ಡಾ.ಬ್ರೋ ಯಾವಾಗ ವಿದೇಶಕ್ಕೆ ಹೋಗಲ್ಲ?; ಒಂದು ದೇಶಕ್ಕೆ ಹೊರಟಾಗ ಅವರ ಅಧ್ಯಯನ ಹೇಗಿರುತ್ತೆ?; ಇಲ್ಲಿದೆ ಮಾಹಿತಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − seven =
Remember me
