ಬೆಂಗಳೂರು:ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳ ಹೊರ ಗುತ್ತಿಗೆ, ನೇರ ಪಾವತಿ ಪೌರ ಕಾರ್ವಿುಕರಿಗೆ ಮುಂಗಡವಾಗಿ ನಾಡಹಬ್ಬದ ಉಡುಗೊರೆ ದೊರೆತಿದೆ.ಮೊದಲ ಹಂತದಲ್ಲಿ 11,133 ಪೌರ ಕಾರ್ವಿುಕರ ಸೇವೆ ಕಾಯಂಗೊಳಿಸಲು ರಾಜ್ಯ ಸಚಿವ ಸಂಪುಟ ಸಭೆ ಸೋಮವಾರ ಒಪ್ಪಿಗೆ ನೀಡಿದ್ದು, ವಿಶೇಷ ನೇಮಕ ನಿಯಮಗಳಡಿ ಈ ಅವಕಾಶ ಕಲ್ಪಿಸುವ ಮಹತ್ವ ತೀರ್ಮಾನ ಕೈಗೊಂಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, 10 ಮಹಾನಗರ ಪಾಲಿಕೆ ಹಾಗೂ 302 ನಗರ- ಪಟ್ಟಣ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 26,000 ಪೌರ ಕಾರ್ವಿುಕರು ಸೇವೆ ಸಲ್ಲಿಸುತ್ತಿದ್ದಾರೆ. ಈ ಪೈಕಿ 11,133 ಜನರಿಗೆ ಸರ್ಕಾರದಿಂದ ವೇತನ ಪಡೆಯುವ ಭಾಗ್ಯ ಲಭಿಸಲಿದೆ.
ಹೋರಾಟಕ್ಕೆ ಜಯ:ನಗರ-ಪಟ್ಟಣಗಳ ಸ್ವಚ್ಛತೆ, ಸ್ವಾಸ್ಥ್ಯ ಕಾಪಾಡುವ ಕೆಲಸದಲ್ಲಿ ನಿರತರ ಬದುಕು ಅತಂತ್ರವಾಗಿದ್ದು, ಸೇವೆ ಕಾಯಂಗೊಳಿಸಿ ಎಂದು ಪೌರ ಕಾರ್ವಿುಕರು ಎರಡು ದಶಕಗಳಿಂದ ಹೋರಾಡುತ್ತಿದ್ದರು. ಪೌರ ಕಾರ್ವಿುಕರ ಸಂಘದ ಪ್ರತಿನಿಧಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊಟ್ಟ ಮಾತಿನಂತೆ ಬೇಡಿಕೆ ಈಡೇರಿಸಿದ್ದಾರೆ. ಕಾನೂನು, ತಾಂತ್ರಿಕ ಅಡೆತಡೆಗಳನ್ನು ತ್ವರಿತವಾಗಿ ನಿವಾರಿಸಿದ್ದಾರೆ. ಪೌರ ಕಾರ್ವಿುಕರ ಹೋರಾಟಕ್ಕೆ ಜಯ ಲಭಿಸಿದ್ದರೆ, ಸಾಮಾಜಿಕ ನ್ಯಾಯದ ಪರ ನಿಲುವಿಗೆ ಬದ್ಧತೆಯನ್ನು ಸರ್ಕಾರ ಸಾರಿದೆ.
ಹಂತ ಹಂತವಾಗಿ ಕಾಯಂ:ಎಲ್ಲ 26,000 ಪೌರ ಕಾರ್ವಿುಕ ಸೇವೆ ಕಾಯಂಗೊಳಿಸಲು ಆರ್ಥಿಕ ಬಲವೂ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಆರ್ಥಿಕ ಲಭ್ಯತೆ ಅನುಸಾರ ಹಂತ ಹಂತವಾಗಿ ಎಲ್ಲರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ನಿರ್ಧರಿಸಿದೆ.
ಸೇವೆ ಕಾಯಂ ಸಂಖ್ಯಾಬಲ:302 ನಗರ, ಪುರಸಭೆ, ಪಟ್ಟಣ ಪಂಚಾಯಿತಿಗಳು- 5,533, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ- 3,673 ಹಾಗೂ 10 ಮಹಾನಗರ ಪಾಲಿಕೆಗಳು- 1,927 ಸೇರಿ ಒಟ್ಟು 11,133 ಪೌರ ಕಾರ್ವಿುಕರು.
ವಾರ್ಷಿಕ 250 ಕೋಟಿ ರೂ. ವೆಚ್ಚ:ಸೇವೆ ಕಾಯಂ ಆಗಲಿರುವ ಪೌರಕಾರ್ವಿುಕರಿಗೆ 17,000 ರೂ.ಗಳಿಂದ 28,980 ರೂ. ವೇತನ ಶ್ರೇಣಿ ನಿಗದಿಯಾಗಿದೆ. ಈ ಲೆಕ್ಕಾಚಾರದ ಪ್ರಕಾರ ರಾಜ್ಯದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ ವಾರ್ಷಿಕ 250 ಕೋಟಿ ರೂ. ವೆಚ್ಚವಾಗುವ ಅಂದಾಜಿದೆ.
ಮುಂದೇನು?:ವಿಶೇಷ ನೇಮಕ ನಿಯಮಗಳು ಹಾಗೂ ಆರ್ಥಿಕ ಇಲಾಖೆ ಷರತ್ತುಗಳ ಅನ್ವಯ ಪೌರ ಕಾರ್ವಿುಕ ಸೇವೆ ಕಾಯಂ ಆಗಲಿದೆ. ಆಕ್ಷೇಪಣೆಗಳನ್ನು ಆಹ್ವಾನಿಸಿ ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮಗೊಳಿಸಲಾಗುತ್ತದೆ.
ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಪೌರ ಕಾರ್ವಿುಕರ ಸೇವೆ ಕಾಯಂ ಆಗಲಿದೆ. ಪೌರ ಕಾರ್ವಿುಕರ ಸುದೀರ್ಘ ಹೋರಾಟಕ್ಕೆ ನ್ಯಾಯ ಸಂದಿದೆ. ಸಾಮಾಜಿಕ ನ್ಯಾಯದ ದಿಗ್ವಿಜಯ ಯಾತ್ರೆಯನ್ನು ರಾಜ್ಯ ಬಿಜೆಪಿ ಸರ್ಕಾರ ಮುಂದುವರಿಸಿದೆ.
|ಗೋವಿಂದ ಕಾರಜೋಳ, ಜಲ ಸಂಪನ್ಮೂಲ ಸಚಿವ.
ಒಮ್ಮೆಗೆ 11,133 ಪೌರ ಕಾರ್ವಿುಕರ ಸೇವೆಯನ್ನು ಕಾಯಂಗೊಳಿಸುವ ಮಹತ್ವದ ತೀರ್ವನವನ್ನು ರಾಜ್ಯ ಸಚಿವ ಸಂಪುಟ ಸಭೆ ತೆಗೆದುಕೊಂಡಿದೆ. ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕೃತಜ್ಞತೆ ಸಲ್ಲಿಸುವೆ.
|ಎಂ.ಟಿ.ಬಿ. ನಾಗರಾಜು, ಪೌರಾಡಳಿತ ಸಚಿವ.
ನೇರ ಪಾವತಿ, ಹೊರ ಗುತ್ತಿಗೆ ಪೌರ ಕಾರ್ವಿುಕರ ಸೇವೆ ಕಾಯಂ ಕನಸನ್ನು ರಾಜ್ಯ ಬಿಜೆಪಿ ಸರ್ಕಾರ ನನಸು ಮಾಡಿದೆ. ಪೌರ ಕಾರ್ವಿುಕರಿಗೆ ಸೇವಾ ಭದ್ರತೆ ಒದಗಿಸಿದ ಸಿಎಂ ಹಾಗೂ ಸಚಿವ ಸಂಪುಟದ ಸದಸ್ಯರಿಗೆ ಕೃತಜ್ಞತೆಗಳು.
|ಬೈರತಿ ಬಸವರಾಜ, ನಗರಾಭಿವೃದ್ಧಿ ಸಚಿವ
ಪಿಯು ಮಂಡಳಿ ವಿಲೀನ:ಎಸ್​ಎಸ್​ಎಲ್​ಸಿ ಪರೀಕ್ಷಾ ಮಂಡಳಿಯಲ್ಲಿ ಪಿಯು ಮಂಡಳಿ ವಿಲೀನಗೊಳಿಸುವುದು ತಿದ್ದುಪಡಿ ವಿಧೇಯಕದ ಇನ್ನೊಂದು ಪ್ರಮುಖ ಅಂಶವಾಗಿದೆ. ಪಿಯು ವಾರ್ಷಿಕ, ಪೂರಕ ಪರೀಕ್ಷೆ ಮುಗಿಸಿದ ನಂತರ ಪಿಯು ಮಂಡಳಿಗೆ ಬೇರೆ ಕಾರ್ಯಭಾರ ಇಲ್ಲದ ಕಾರಣ ಎಸ್ಸೆಸ್ಸೆಲ್ಸಿ ಪರೀಕ್ಷಾ ಮಂಡಳಿಯಲ್ಲಿ ವಿಲೀನಕ್ಕೆ ಸರ್ಕಾರ ಮುಂದಾಗಿದೆ.
ಶಿಕ್ಷಕರಿಗೆ ಷರತ್ತುಬದ್ಧ ವರ್ಗಾವಣೆ:ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಷರತ್ತು ವರ್ಗಾವಣೆಗೆ ಅವಕಾಶ ಕಲ್ಪಿಸುವ ಮತ್ತೊಂದು ಮಹತ್ವದ ನಿರ್ಧಾರವನ್ನು ಸಚಿವ ಸಂಪುಟ ಸಭೆ ತೆಗೆದುಕೊಂಡಿದೆ. ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ವಿಧೇಯಕ, 2022ಕ್ಕೆ ಅನುಮೋದನೆ ನೀಡಿದೆ. ವಿಧಾನ ಮಂಡಲದಲ್ಲಿ ಮಂಡಿಸಿ ಒಪ್ಪಿಗೆ ಪಡೆದ ನಂತರ ಕಾಯ್ದೆ ರೂಪ ಪಡೆದುಕೊಳ್ಳಲಿದೆ. ಶೇ.25ರಷ್ಟು ಶಿಕ್ಷಕರ ಕೊರತೆ ಇರುವ ಬ್ಲಾಕ್​ನ ವ್ಯಾಪ್ತಿಯಲ್ಲಿ 10 ವರ್ಷಕ್ಕಿಂತ ಮೇಲ್ಪಟ್ಟ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರಿಗೆ ನಿರ್ಬಂಧ ಸಡಿಲಿಸಿ ಮತ್ತೊಂದು ಬ್ಲಾಕ್​ಗೆ ವರ್ಗಾವಣೆ ಅವಕಾಶ ದೊರೆಯಲಿದೆ. ನೇಮಕವಾಗಿ ಐದು ವರ್ಷ ಹಾಗೂ ವಯೋ ನಿವೃತ್ತಿಗೆ ಐದು ವರ್ಷ ಇರುವವರನ್ನು ಬಿಟ್ಟು ಉಳಿದ ವಿಷಯವಾರು ಶಿಕ್ಷಕರು ಪರಸ್ಪರ ವರ್ಗಾವಣೆಗೆ ಅವಕಾಶ ಪಡೆಯಲಿದ್ದಾರೆ. ಮಲೆನಾಡು, ಕಲ್ಯಾಣ ಕರ್ನಾಟಕ ಹಾಗೂ ಶೈಕ್ಷಣಿಕ ಹಿಂದುಳಿದ ಬ್ಲಾಕ್​ಗೆ ವರ್ಗಾವಣೆ ಆಗಲು ಇಚ್ಚಿಸುವವರಿಗೆ ಅನುಕೂಲವಾಗಲಿದೆ.
ನಾಲಿಗೆಯೇ ಹೇಳುತ್ತೆ ಕರುಳಿನ ಆರೋಗ್ಯ!: ಹೇಗೆ? ಇಲ್ಲಿದೆ ಮಾಹಿತಿ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
