ಬೆಂಗಳೂರು:ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದ ರಾಜ್ಯ ಸರ್ಕಾರ ಇದೀಗ ಅಧಿಕಾರಕ್ಕೆ ಬಂದ ಮೇಲೆ ಐದೂ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗಿದ್ದು, ಪ್ರತಿ ಮನೆಗಳಿಗೂ ಗೃಹಜ್ಯೋತಿ ಯೋಜನೆಯಡಿಯಲ್ಲಿ ಉಚಿತ ವಿದ್ಯುತ್ ಪೂರೈಕೆ ಮಾಡುತ್ತಿದೆ. ಆದ್ರೆ, ಈ ಯೋಜನೆಯ ಫಲಾನಾಭುವಿಗಳಾದ ಬಾಡಿಗೆದಾರರು ಮನೆಯ ಬದಲಾವಣೆಯಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದರು. ಸದ್ಯ ಈ ಗೊಂದಲಗಳಿಗೆ ಸರ್ಕಾರ ಉತ್ತರಿಸಿದ್ದು, ಬಾಡಿಗೆದಾರರಿಗೆ ಇನ್ಮುಂದೆ ತೊಂದರೆ ಇಲ್ಲದಂತೆ ಮಾಡಿದೆ. ಏನದು? ಹೇಗೆ? ಇಲ್ಲಿದೆ ಉತ್ತರ.
ಇದನ್ನೂ ಓದಿ:ಐಸಿಸಿ ಟೆಸ್ಟ್ ಬೌಲಿಂಗ್ ಬುಮ್ರಾಗೆ ವಿಶ್ವ ನಂ.1 ಪಟ್ಟ: ಕಪಿಲ್ ದೇವ್ ಸಾಧನೆ ಮುರಿದ ವೇಗಿ
ಈ ಹಿಂದೆ ಬಾಡಿಗೆ ಮನೆಯಲ್ಲಿ ವಾಸವಿದ್ದವರು ಗೃಹಜ್ಯೋತಿ ಯೋಜನೆಯನ್ನು ಪಡೆಯುತ್ತಿದ್ದರು. ಆದರೆ, ಮನೆ ಬದಲಿಸಿದಾಗ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದರು. ತಮ್ಮ ಹಿಂದಿನ ಮನೆಗೆ ಲಿಂಕ್ ಮಾಡಿಸಲಾಗಿದ್ದ ಆಧಾರ್​ ಕಾರ್ಡ್​ ಅನ್ನು ಹೊಸ ಮನೆಗೆ ಬಂದ ಬಳಿಕ ಮರು ಲಿಂಕ್ ಮಾಡಲಾಗುತ್ತಿರಲಿಲ್ಲ. ಮತ್ತೆ ಅಲ್ಲಿಯೂ ಕೂಡ ರದ್ದು ಮಾಡಿಸಲು ಆಗುತ್ತಿರಲಿಲ್ಲ. ಈ ತೊಂದರೆಗಳನ್ನು ಅನೇಕರು ರಾಜ್ಯ ಸರ್ಕಾರಕ್ಕೆ ಪತ್ರ, ಇ-ಮೇಲೆ ಮುಖಾಂತರ ದೂರು ಸಲ್ಲಿಸಿದ್ದರು. ಇದೀಗ ಈ ಸಮಸ್ಯೆಗಳಿಗೆ ಸರ್ಕಾರ ಡಿ-ಲಿಂಕ್ ಆಯ್ಕೆ ತರುವ ಮೂಲಕ ಬಾಡಿಗೆದಾರರ ಸಮಸ್ಯೆ ನಿವಾರಿಸಿದೆ.
ಮನೆ ಬದಲಿಸಿದರೂ ಡಿ-ಲಿಂಕ್ ಆಯ್ಕೆ:ಹೊಸ ಮನೆಯ ಆರ್‌ಆರ್ ಸಂಖ್ಯೆಗೆ ತಮ್ಮ ಆಧಾರ್ ಜೋಡಣೆ ಮಾಡಿಸಬಹುದು. ಗೃಹಜ್ಯೋತಿ ವಿದ್ಯುತ್ ಯೋಜನೆಯ ನಿಯಮಾವಳಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಬಾಡಿಗೆ ಮನೆಯಲ್ಲಿರುವ ಯೋಜನೆ ಫಲಾನುಭವಿಗಳಿಗೆ ಇದೀಗ ಡಿ-ಲಿಂಕ್ ಸದುಪಯೋಗ ಮಾಡಿಕೊಳ್ಳುವ ಅವಕಾಶವನ್ನು ಸರ್ಕಾರ ಜಾರಿಗೊಳಿಸಿದೆ. ಇನ್ನು ಮುಂದೆ ಬಾಡಿಗೆ ಮನೆ ಬದಲಾಯಿಸಿದರೂ ಹೆಚ್ಚು ಚಿಂತಿಸಬೇಕಿಲ್ಲ. ಮನೆ ಬದಲಾಯಿಸಿದರೆ ಕೂಡಲೇ ಹಳೆ ಮನೆಯ ವಿಳಾಸದ ವಿದ್ಯುತ್‌ ಸಂಪರ್ಕವನ್ನು ರದ್ದುಪಡಿಸಿ, ಹೊಸ ಮನೆಯ ವಿಳಾಸಕ್ಕೆ ಯೋಜನೆಯ ಫಲ ಪಡೆಯಬಹುದಾಗಿದೆ. ಇದಕ್ಕಾಗಿ ಇಂಧನ ಇಲಾಖೆಯು ಡಿ ಲಿಂಕ್ ಆಯ್ಕೆ ಕೊಟ್ಟಿದೆ.
ಇದನ್ನೂ ಓದಿ:ಕಸದ ತೊಟ್ಟಿಯಲ್ಲಿ ನವಜಾತ ಶಿಶು ಶವ ಪತ್ತೆ! ಕಣ್ಣೀರಿಟ್ಟ ಸ್ಥಳೀಯರು
ಈ ತೊಂದರೆ ನಿವಾರಿಸುವ ಸಲುವಾಗಿ ಹೊಸ ಬಾಡಿಗೆ ಮನೆಯ ಆರ್‌ಆರ್ ಸಂಖ್ಯೆಗೆ ಸುಲಭವಾಗಿ ನೋಂದಣಿ ಮಾಡಿಕೊಳ್ಳುವ ಸೌಲಭ್ಯ ಕಲ್ಪಿಸಲಾಗಿದೆ. ಸೇವಾ ಸಿಂಧು ಪೋರ್ಟಲ್‌ನಲ್ಲಿ ಈ ಬದಲಾವಣೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ಇನ್ನೊಂದು ವಾರದೊಳಗೆ ಈ ಸೇವೆ ಆರಂಭವಾಗಲಿದ್ದು, ಫಲಾನುಭವಿಗಳು ಬದಲಾವಣೆ ಮಾಡಿಕೊಳ್ಳಬಹುದು.
ಬಾಡಿಗೆದರರು ಈಗಾಗಲೇ ಗೃಹ ಜ್ಯೋತಿ ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದರೆ, ಅದರಲ್ಲೂ ಈಗ ಹೊಸ ಮನೆಯನ್ನು ಬದಲಾಯಿಸಿದ್ದರೆ ಹಳೆ ನೋಂದಣಿ ರದ್ದುಪಡಿಸಿಕೊಂಡು ಬಳಿಕ ಹೊಸ ಮನೆಯ ಆರ್‌ಆರ್ ಸಂಖ್ಯೆ ಜತೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಇದಕ್ಕೆ ಮುಖ್ಯವಾಗಿ ಡಿ-ಲಿಂಕ್ ಪ್ರಕ್ರಿಯೆ ಮಾಡಿಸಬೇಕು,(ಏಜೆನ್ಸೀಸ್).
ಕಸದ ತೊಟ್ಟಿಯಲ್ಲಿ ನವಜಾತ ಶಿಶು ಶವ ಪತ್ತೆ! ಕಣ್ಣೀರಿಟ್ಟ ಸ್ಥಳೀಯರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
