ಬೆಂಗಳೂರು :ನಾನು ಚೆನ್ನಾಗಿ ಓದಿಲ್ಲ ಪರೀಕ್ಷೆ ಬರೆದರೂ ಫೇಲ್ ಆಗುತ್ತೇನೆ ಎಂಬ ಆಲೋಚನೆ ಬಿಟ್ಟು ಪರೀಕ್ಷೆಗೆ ಹಾಜರಾದರೆ ಸಾಕು, ನೀವು ಪಾಸ್! ಹೌದು, ಈ ವರ್ಷದ ಮಟ್ಟಿಗೆ ಎಸ್ಸೆಸ್ಸೆಲ್ಸಿ ಮತ್ತು ಪಿಯು ವಿದ್ಯಾರ್ಥಿಗಳನ್ನು ಯಾರನ್ನೂ ಫೇಲ್ ಮಾಡದೆ, ಎಲ್ಲರನ್ನೂ ಪಾಸ್ ಮಾಡಲು ರಾಜ್ಯ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಿಗದಿಪಡಿಸಿದ್ದರೂ ಫೇಲ್‍ ಆಗಬಹುದೆಂಬ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ರಾಜ್ಯದಲ್ಲಿರುವ ಸುಮಾರು 8.75 ಲಕ್ಷ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಜುಲೈನಲ್ಲಿ ಪರೀಕ್ಷೆ ನಡೆಸಲಾಗುವುದು. ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ತುಂಬಾ ಸರಳವಾಗಿರಲಿದ್ದು, ವಿದ್ಯಾರ್ಥಿಗಳು ಹಾಜರಾದರೆ ಸಾಕು ಪಾಸ್ ಆಗುವುದು ಖಚಿತ. ವಿದ್ಯಾರ್ಥಿಗಳಿಗೆ ಅಂಕಗಳನ್ನು ನೀಡುವುದಿಲ್ಲ, ಬದಲಾಗಿ ಗ್ರೇಡ್ ನೀಡುವುದರಿಂದ ಯಾವುದೇ ಆತಂಕ ಬೇಡ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ:ಎರಡನೇ ಮಗುವಾದ ಮೇಲೂ ಕರೀನಾ ಹೀಗಿದ್ದಾರೆ ನೋಡಿ- ಫೋಟೋ ಹಂಚಿಕೊಂಡ ಬಾಲಿವುಡ್‌ ತಾರೆ…
ಆಗಸ್ಟ್​​ನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ :ಜುಲೈ ಕೊನೆಯ ವಾರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೌಲ್ಯಮಾಪನ ಕೈಗೊಂಡು ಆಗಸ್ಟ್ ಮೊದಲ ವಾರದಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗುವುದು. ಒಎಂಆರ್ ಪ್ರಶ್ನೆ ಪತ್ರಿಕೆ ಮೂಲಕ ಪರೀಕ್ಷೆ ನಡೆಸಲಿದ್ದು, ಇದರ ಮೌಲ್ಯಮಾಪನ ಮಾಡುವುದು ಬಹಳ ಸುಲಭವಾಗಿದೆ. ಇದರಿಂದ ಫಲಿತಾಂಶ ಪ್ರಕಟಿಸಲು ಹೆಚ್ಚಿನ ದಿನಗಳ ಅವಶ್ಯಕತೆ ಇರುವುದಿಲ್ಲ. ಪರೀಕ್ಷೆ ಮುಗಿದ 10 ರಿಂದ 12 ದಿನಗಳಲ್ಲಿ ಫಲಿತಾಂಶ ಪ್ರಕಟಿಸುವುದಾಗಿ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ವಿ.ಸುಮಂಗಲಾ ತಿಳಿಸಿದ್ದಾರೆ.
ಜೂನ್‍ನಲ್ಲಿ ಪಿಯು ಫಲಿತಾಂಶ:ಇನ್ನು 6 ಲಕ್ಷಕ್ಕೂ ಹೆಚ್ಚಿರುವ ಎರಡನೇ ಪಿಯು ವಿದ್ಯಾರ್ಥಿಗಳಿಗೆ ಪರೀಕ್ಷೆಯೇ ಇಲ್ಲದೆ ಪಾಸ್​ ಮಾಡುವ ನಿರ್ಧಾರ ಮಾಡಲಾಗಿದೆ. ಕಳೆದ ವರ್ಷ ರಾಜ್ಯಮಟ್ಟದಲ್ಲಿ ಪ್ರಥಮ ಪಿಯು ಪರೀಕ್ಷೆ ಆಯೋಜನೆ ಮಾಡಿದ್ದು, ಎಲ್ಲರೂ ಪಾಸ್ ಆಗಿದ್ದಾರೆ. ಇದರಿಂದ ಆ ಎಲ್ಲ ವಿದ್ಯಾರ್ಥಿಗಳು ಸಹ ಈ ಬಾರಿ ದ್ವಿತೀಯ ಪಿಯುನಲ್ಲೂ ಪಾಸ್ ಆಗಲಿದ್ದಾರೆ. ಪ್ರಥಮ ಪಿಯು ಫಲಿತಾಂಶದ ಆಧಾರದ ಮೇಲೆ ವಿದ್ಯಾರ್ಥಿಗಳ ಮೌಲ್ಯಾಂಕನ ಮಾಡುವುದರಿಂದ ಇದರ ಮಾರ್ಗಸೂಚಿ ರಚನೆ ಮಾಡಿ ಜೂ.25 ರಿಂದ 30 ರೊಳಗೆ ಫಲಿತಾಂಶ ಪ್ರಕಟಿಸುವುದಾಗಿ ಪಿಯು ನಿರ್ದೇಶಕಿ ಆರ್.ಸ್ನೇಹಲ್ ತಿಳಿಸಿದ್ದಾರೆ.
ಜುಲೈ 3ನೇ ವಾರ ಎಸ್‌ಎಸ್ಎಲ್‌ಸಿ ಪರೀಕ್ಷೆ: ಆದರೆ ಮುಂಚಿನಂತೆ ಅಲ್ಲ- ಏನೇನು ವಿಶೇಷತೆ?

ವುಹಾನ್ ಲ್ಯಾಬಿಂದ ವೈರಸ್​ ಲೀಕಾಗಿತ್ತೆಂದು ನಾನು ಸರಿಯಾಗೇ ಹೇಳಿದ್ದೆ : ಟ್ರಂಪ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 3 =
Remember me
