ಬೆಂಗಳೂರು:ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ)ಶನಿವಾರ ಕೋನದಾಸಪುರ ವಸತಿ ಸಮುಚ್ಛಯದಲ್ಲಿ ಆಯೋಜಿಸಿರುವ “ಫ್ಲಾಟ್​’ ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತು.
ನಾಗರಬಾವಿಯ ಚಂದ್ರಾ ಬಡಾವಣೆಯಲ್ಲಿ 3 ಬಿಹೆಚ್​ಕೆ ಫ್ಲಾಟ್​ಗಳಲ್ಲಿ ಕೆಲ ಫ್ಲಾಟ್​ ಹಂಚಿಕೆಗೆ ಲಭ್ಯವಿದ್ದು, ಉಳಿದ ಫ್ಲಾಟ್​ಗಳು ಮಾರಾಟವಾಗಿವೆ. ಕಣಿಮಿಣಿಕೆಯಲ್ಲಿ 2 ಬಿಹೆಚ್​ಕೆ ಫ್ಲಾಟ್​ಗಳು ಮತ್ತು ಕೋನದಾಸಪುರ ಹಂತ-2ರಲ್ಲಿ ಹಂಚಿಕೆಗೆ ಲಭ್ಯವಿತ್ತು.ಮೊದಲು ಬಂದವರಿಗೆ ಆದ್ಯತೆ ಮೇರೆಗೆ ಹಂಚಿಕೆ ಮಾಡಲಾಗಿದೆ.
ನೀಟ್ ಬದಲು ರಾಜ್ಯಗಳೇ ಪ್ರವೇಶ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ಅವಕಾಶ ನೀಡಲಿ: ಡಿಸಿಎಂ ಡಿಕೆಶಿ
ಬೆಳಿಗ್ಗೆ 9 ಗಂಟೆಯಿಂದ ಶುರುವಾದ ಮೇಳ ಸಂಜೆ 5ಗಂಟೆವರೆಗೆ ನಡೆಯಿತು. ಮಧ್ಯಾಹ್ನ ವೇಳೆ ಹೆಚ್ಚು ಸಾರ್ವಜನಿಕರು ಭಾಗವಹಿಸಿದ್ದರು. ಒಟ್ಟು 150 ಫ್ಲಾಟ್​ಗಳು ಮಾರಾಟವಾಗಿ 75 ಫ್ಲಾಟ್​ ಹಂಚಿಕೆದಾರರು ಹಂಚಿಕೆ ಪತ್ರವನ್ನು ಸ್ವೀಕರಿಸಿದ್ದಾರೆ. ಬಾಕಿ 75 ಫ್ಲಾಟ್​ಗಳ ಖರೀದಿದಾರರು ತಾಂತ್ರಿಕ ಕಾರಣಗಳಿಂದ ಆನ್​ಲೈನ್​ ಮೂಲಕ ಫ್ಲಾಟ್​ ಮೊತ್ತವನ್ನು ಪಾವತಿಲಾಗದೇ ಚೆಕ್​ನ್ನು ನೀಡಿರುತ್ತಾರೆ. ಕಚೇರಿ ಸಮಯದಲ್ಲಿ ಆನ್​ಲೈನ್​ನಲ್ಲಿ ಪಾವತಿಸಿದ ನಂತರ ಚೆಕ್​ ಹಿಂತಿರುಗಿಸಿ ಹಂಚಿಕೆ ಪತ್ರ ನೀಡಲಾಗುತ್ತದೆ. ಮೇಳದಲ್ಲಿ 8 ಬ್ಯಾಂಕ್​ಗಳು ಭಾಗವಹಿಸಿವೆ.ಪ್ರತಿ ಬ್ಯಾಂಕ್​ಗೆ ಸಾಲಕ್ಕೆ ಕೋರಿ 10-15 ಅರ್ಜಿಗಳು ಸ್ವೀಕೃತಗೊಂಡಿವೆ. ಫೆಬ್ರವರಿ ತಿಂಗಳ ಫ್ಲಾಟ್​ ಮೇಳದಲ್ಲಿ ಮಾರಾಟವಾದ 50 ಫ್ಲಾಟ್​ಗಳಿಗೆ ಈಗಾಗಲೇ ಶುದ್ಧ ಕ್ರಯ ಪತ್ರವನ್ನು ನೋಂದಾಯಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − seven =
Remember me
