ಬೆಂಗಳೂರು:ರಾಜ್ಯದ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ, ದಿಗ್ವಿಜಯ 247 ನ್ಯೂಸ್ ಚಾನೆಲ್ ಸಹಯೋಗದಲ್ಲಿ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಏರ್ಪಡಿಸಿರುವ ಮೂರು ದಿನಗಳ ‘ರಿಯಲ್ ಎಸ್ಟೇಟ್ ಎಕ್ಸ್​ಪೋ’ಗೆ ಶುಕ್ರವಾರ ವಿದ್ಯುಕ್ತ ಚಾಲನೆ ಸಿಕ್ಕಿದೆ.
ಅಶ್ವಸೂರ್ಯ ರಿಯಾಲಿಟಿಸ್ ಅರ್ಪಿಸುವ ಈ ಎಕ್ಸ್​ಪೋವನ್ನು ನಟಿ ಪ್ರಿಯಾಂಕ ತಿಮ್ಮೇಶ್, ಶಾಸಕ ಉದಯ್ ಬಿ. ಗರುಡಾಚಾರ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹಾಗೂ ವಿಆರ್​ಎಲ್ ಸಮೂಹ ಸಂಸ್ಥೆಗಳ ಎಂಡಿ ಆನಂದ ಸಂಕೇಶ್ವರ ಉದ್ಘಾಟಿಸಿದರು. ಬಳಿಕ ರಿಯಾಲ್ಟಿ, ಸೌರಶಕ್ತಿ, ಕಟ್ಟಡ ಸಾಮಗ್ರಿ ಸ್ಟಾಲ್​ಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು. ವಿಜಯವಾಣಿ ಸಂಪಾದಕ ಕೆ.ಎನ್.ಚೆನ್ನೇಗೌಡ, ಜಾಹೀರಾತು ವಿಭಾಗದ ಉಪಾಧ್ಯಕ್ಷ ಅರುಣ್ ಕೆ.ಆರ್. ಮತ್ತಿರರಿದ್ದರು.
ಮೊದಲ ದಿನವೇ ಎಕ್ಸ್​ಪೋಗೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು. ಮೇಳ ಉದ್ಘಾಟನೆಯಾದ ಕೆಲ ತಾಸುಗಳಲ್ಲಿ ಸಾವಿರಾರು ಗ್ರಾಹಕರು ಭೇಟಿ ನೀಡಿ ರಿಯಾಲ್ಟಿ ಕಂಪನಿಗಳಿಂದ ಮಾಹಿತಿ ಪಡೆಯುತ್ತಿರುವುದು ಕಂಡುಬಂತು. ರಿಯಾಲ್ಟಿ ಕಂಪನಿಗಳ ಸಿಬ್ಬಂದಿ ಪಾದರಸದಂತೆ ಅಡ್ಡಾಡುತ್ತ ಸ್ಟಾಲ್ ಬಳಿ ಆಗಮಿಸಿದ ಗ್ರಾಹಕರಿಗೆ ತಮ್ಮ ಕಂಪನಿಯ ವಸತಿ ಯೋಜನೆ ಬಗ್ಗೆ ಮಾಹಿತಿ ನೀಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬಹುತೇಕ ಸ್ಟಾಲ್​ಗಳಲ್ಲಿ ದೊಡ್ಡ ಪರದೆ ಟಿವಿ ಅಳವಡಿಸಿ ವಸತಿ ಯೋಜನೆಗಳ ಸಮಗ್ರ ಮಾಹಿತಿಯನ್ನು ಕಂಪನಿಗಳು ಗ್ರಾಹಕರಿಗೆ ಒದಗಿಸಿದರು. ಇಷ್ಟವಾದ ವಸತಿ ಯೋಜನೆಗಳನ್ನು ಕಣ್ತುಂಬಿಕೊಳ್ಳಲು ಕೆಲ ಗ್ರಾಹಕರು ಅಲ್ಲಿಂದಲೇ ಯೋಜನಾ ಸ್ಥಳಗಳಿಗೆ ತೆರಳಿದರು. ಇವರಿಗೆ ರಿಯಾಲ್ಟಿ ಕಂಪನಿಗಳು ವಾಹನ ವ್ಯವಸ್ಥೆ ಕಲ್ಪಿಸಿದ್ದವು.
ವಿಜಯವಾಣಿ ಹಾಗೂ ದಿಗ್ವಿಜಯ 247 ನ್ಯೂಸ್ ಚಾನೆಲ್ ಆಯೋಜಿಸಿರುವ ರಿಯಲ್ ಎಸ್ಟೇಟ್ ಎಕ್ಸ್​ಪೋದಲ್ಲಿ 42ಕ್ಕೂ ಅಧಿಕ ಪ್ರತಿಷ್ಠಿತ ರಿಯಾಲ್ಟಿ ಕಂಪನಿಗಳು ಒಂದೇ ಸೂರಿನಡಿ ಇರುವುದರಿಂದ ಸಿಲಿಕಾನ್ ಸಿಟಿ ಜನರು ತಮ್ಮ ಕನಸಿನ ಮನೆಗಳನ್ನು ಖರೀದಿಸಲು ಉತ್ತಮ ಅವಕಾಶ ಸಿಕ್ಕಿದಂತಾಗಿದೆ. ಬೆಂಗಳೂರು ಸುತ್ತಮುತ್ತ ಕೈಗೆಟಕುವ ದರದಲ್ಲಿ ನಿವೇಶಗಳನ್ನು ಸ್ಥಳದಲ್ಲೇ ಬುಕಿಂಗ್ ಮಾಡಿದವರಿಗೆ ಆಕರ್ಷಕ ಕೊಡಗೆ ನೀಡುತ್ತಿವೆ. ಇದನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳಬೇಕು.
|ಉದಯ್ ಬಿ. ಗರುಡಾಚಾರ್ಶಾಸಕ
ಕನಸಿನ ಮನೆ ಗುಟ್ಟು ಬಿಚ್ಚಿಟ್ಟ ನಟಿ:ಎಕ್ಸ್​ಪೋಗೆ ಚಾಲನೆ ನೀಡಿದ ನಟಿ ಪ್ರಿಯಾಂಕ ತಿಮ್ಮೇಶ್, ತಮ್ಮ ಕನಸಿನ ಮನೆಯ ಗುಟ್ಟು ಬಿಚ್ಚಿಟ್ಟರು. 40*60 ನಿವೇಶನದಲ್ಲಿ ಸುಂದರವಾದ ಮನೆ ಕಟ್ಟಬೇಕು. ಮನೆ ಮುಂದೆ ವಾಹನ ನಿಲುಗಡೆ ವ್ಯವಸ್ಥೆ ಇರಬೇಕು. ನಾಲ್ಕು ಕೊಠಡಿ, 2 ಬಾಲ್ಕನಿ ಇರಬೇಕು. ಜತೆಗೆ, ಮನೆ ಮುಂದೆ ಹಸಿರು ತೋಟ ಇದ್ದರೆ ಮನೆ ಚೆಂದವಾಗಿ ಕಾಣಿಸಲಿದೆ ಎಂದು ಪ್ರಿಯಾಂಕ ಹೇಳಿದರು. ವಿಜಯವಾಣಿ, ದಿಗ್ವಿಜಯ 247 ನ್ಯೂಸ್ ಚಾನೆಲ್ ಆಯೋಜಿಸಿರುವ ಎಕ್ಸ್ ಪೋದಲ್ಲಿ ಒಂದೇ ಸೂರಿನಡಿ ಇಷ್ಟವಾದ ನಿವೇಶನಗಳು ಖರೀದಿಸುವುದಕ್ಕೆ ಹಾಗೂ ಸಾಲ ಪಡೆಯುವುದಕ್ಕೆ ಅಗತ್ಯ ಸೌಲಭ್ಯಗಳ ಸಿಗುವುದರಿಂದ ಜನರಿಗೆ ಅನುಕೂಲವಾಗಲಿದೆ. ಎಕ್ಸ್​ಪೋ ಬಗ್ಗೆ ಅಮ್ಮನ ಬಳಿ ರ್ಚಚಿಸುತ್ತೇನೆ. ನನ್ನ ಸ್ನೇಹಿತರಿಗೂ ಇದನ್ನು ತಿಳಿಸುತ್ತೇನೆ ಎಂದರು.
ಹೆಚ್ಚು ಜನರ ಭೇಟಿ ನಿರೀಕ್ಷೆ:ರಿಯಾಲ್ಟಿ ಮೇಳಕ್ಕೆ ಬೃಹತ್ ವೇದಿಕೆ ನಿರ್ವಿುಸಲಾಗಿದ್ದು, ಸಂಪೂರ್ಣ ಹವಾ ನಿಯಂತ್ರಿತ ಸೌಲಭ್ಯವಿದೆ. ಉಚಿತ ಪ್ರವೇಶ ಹಾಗೂ ರ್ಪಾಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು ಎರಡು ದಿನ ಮೇಳ ನಡೆಯಲಿದ್ದು, ಶನಿವಾರ ಹಾಗೂ ಭಾನುವಾರ ವಾರಾಂತ್ಯದ ರಜೆ ಇರುವುದರಿಂದ ಮೇಳಕ್ಕೆ ಭೇಟಿ ಕೊಡುವವರ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ.
ಇನ್ನು ಎಲ್ಲರಿಗೂ ಲಭ್ಯ ಕೋವಿಡ್ ಬೂಸ್ಟರ್​ ಡೋಸ್​: ಯಾವತ್ತಿನಿಂದ ಶುರು?

ಇಬ್ಬರು ಮಾಜಿ ಸಿಎಂ, ಕುಂ.ವೀ. ಸೇರಿ 61ಕ್ಕೂ ಅಧಿಕ ಸಾಹಿತಿಗಳಿಗೆ ಕೊಲೆ ಬೆದರಿಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + three =
Remember me
