ಬೆಂಗಳೂರು:ರಾಜ್ಯದ ಎಂಟೂವರೆ ಲಕ್ಷ ಸರ್ಕಾರಿ ನೌಕರರು, ನಾಲ್ಕು ಲಕ್ಷದಷ್ಟು ನಿವೃತ್ತ ನೌಕರರು ನಿರೀಕ್ಷಿಸುತ್ತಿರುವ 7ನೇ ವೇತನ ಆಯೋಗ ರಚನೆಗೆ ಕೊನೆಗೂ ಕಾಲ ಕೂಡಿಬಂದಿದೆ. ಶನಿವಾರ ಹಾಗೂ ಭಾನುವಾರ ಸರ್ಕಾರದ ಮಟ್ಟದಲ್ಲಿ ಈ ವಿಚಾರವಾಗಿ ಸರಣಿ ಸಭೆ ನಡೆದಿದ್ದು, ಆಯೋಗದ ಅಧ್ಯಕ್ಷರು ಯಾರಾಗಬೇಕು? ಸದಸ್ಯರು ಯಾರೆಲ್ಲ ಇರಬೇಕು? ಯಾವ ಅಂಶಗಳು ಪರಿಗಣನೆಯಾಗಬೇಕೆಂಬ ಬಗ್ಗೆ ಚರ್ಚೆ ನಡೆದಿದೆ. ಸೋಮವಾರ ಅಥವಾ ಮಂಗಳವಾರ ಆಯೋಗ ರಚನೆ ಘೋಷಣೆ ಆಗುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಹಾಗೂ ಹಣಕಾಸು ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಐಎಸ್​ಎನ್ ಪ್ರಸಾದ್ ಸಮಾಲೋಚನೆ ನಡೆಸಿದ್ದು, ಆಯೋಗ ರಚನೆ ಅಧಿಕೃತ ಆದೇಶ ಪ್ರಕಟಗೊಳ್ಳುವುದಷ್ಟೇ ಬಾಕಿ ಇದೆ.
ಪ್ರತಿ ಐದು ವರ್ಷಗಳಿಗೊಮ್ಮೆ ವೇತನ ಆಯೋಗ ರಚಿಸಲಾಗುತ್ತದೆ. ಆಯೋಗವು ಬೆಲೆ ಏರಿಕೆ, ಇತರ ರಾಜ್ಯಗಳಲ್ಲಿನ ವೇತನ ಪರಿಷ್ಕರಣೆ, ಕೇಂದ್ರದ ಕ್ರಮಗಳನ್ನು ಪರಿಶೀಲಿಸಿ ವೇತನ ಪರಿಷ್ಕರಣೆಗೆ ಶಿಫಾರಸು ಮಾಡುತ್ತದೆ. ಐದು ವರ್ಷ ಕೆಳಗೆ ಅಂದಿನ ಸಿಎಂ ಸಿದ್ದರಾಮಯ್ಯ ಚುನಾವಣೆಗೆ ಹೋಗುವ ಮುನ್ನ ಆಯೋಗ ರಚಿಸಿ ವರದಿಯನ್ನು ಅನುಷ್ಠಾನಗೊಳಿಸುವ ತೀರ್ಮಾನ ಪ್ರಕಟಿಸಿದ್ದರು. ಈಗ ಬಸವರಾಜ ಬೊಮ್ಮಾಯಿ ಸರದಿಯಾಗಿದೆ.
ವೇತನ ಆಯೋಗದ ಐದು ವರ್ಷಗಳ ಅವಧಿ ಜುಲೈ 31ಕ್ಕೆ ಕೊನೆಯಾಗಿದೆ. ಹೀಗಾಗಿ ಹೊಸ ವೇತನ ಆಯೋಗದ ರಚನೆ ಮತ್ತು ಅನುಷ್ಠಾನವನ್ನು ಸರ್ಕಾರಿ ನೌಕರರು ಎದುರು ನೋಡುತ್ತಿದ್ದರು. ಅಂತೆಯೇ, ಮುಖ್ಯಮಂತ್ರಿ ಕೂಡ ವೇತನ ಆಯೋಗ ರಚನೆ ಮಾಡುವುದಾಗಿ ಈ ಹಿಂದೆಯೇ ಘೋಷಣೆ ಮಾಡಿದ್ದರು. ಇನ್ನೊಂದೆಡೆ, 3 ತಿಂಗಳಿನಿಂದಲೇ ಸರ್ಕಾರಿ ನೌಕರರ ಸಂಘ ಸರ್ಕಾರಕ್ಕೆ ಮೇಲಿಂದಮೇಲೆ ಮನವಿ ಸಲ್ಲಿಸಿದೆ. ಎರಡು ದಿನಗಳ ಹಿಂದೆಯೂ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಸರ್ಕಾರಿ ನೌಕರರ ಅಪೇಕ್ಷೆಯನ್ನು ಬಿಚ್ಚಿಟ್ಟು, ತಡ ಮಾಡದಂತೆ ಕೋರಿತ್ತು.
12 ಸಾವಿರ ಕೋಟಿ ರೂ. ವೆಚ್ಚ:ಸದ್ಯ ಸರ್ಕಾರಿ ನೌಕರರ ಸಂಘ ಸಲ್ಲಿಸಿರುವ ಬೇಡಿಕೆಯನ್ನು ಒಪ್ಪಿದರೆ ಸರ್ಕಾರದ ಬೊಕ್ಕಸದ ಮೇಲೆ ಮಾಸಿಕ 1 ಸಾವಿರ ಕೋಟಿಯಂತೆ ವರ್ಷಕ್ಕೆ 12 ಸಾವಿರ ಕೋಟಿ ರೂ. ವೆಚ್ಚವಾಗಲಿದೆ.
ಬೇಡಿಕೆ ಏನು?:ಹಾಲಿ ಪಡೆಯುತ್ತಿರುವ ಡಿಎ ಯನ್ನು ಮೂಲವೇತನದೊಂದಿಗೆ ಸೇರಿಸಿ ಅದರ ಆಧಾರದಲ್ಲಿ ವೇತನ ಪರಿಷ್ಕರಣೆ ಮಾಡಬೇಕು ಮತ್ತು ಮೂಲ ವೇತನದ ಮೇಲೆ ಶೇ.30ರಿಂದ 40ರಷ್ಟು ವೇತನ ಹೆಚ್ಚಳ ಆಗಬೇಕು. 2022ರ ಜುಲೈ 1 ರಿಂದ ಅನ್ವಯವಾಗುವಂತೆ ಪರಿಷ್ಕರಣೆಯಾಗಬೇಕು. 2023ರ ಜನವರಿಯಿಂದ ಆರ್ಥಿಕ ಅನುಕೂಲ ಆಗಬೇಕು ಎಂಬುದು ಸರ್ಕಾರಿ ನೌಕರರ ಸಂಘದ ಆಗ್ರಹವಾಗಿದೆ.
ಸರ್ಕಾರ ವೇತನ ಆಯೋಗ ರಚನೆಗೆ ಮುಂದಾಗಿರುವುದು ಖುಷಿಯ ವಿಚಾರ. 2022ರ ಜುಲೈ 1ರಿಂದ ಅನ್ವಯವಾಗುವಂತೆ ಪರಿಷ್ಕರಣೆ ಆಗಬೇಕು ಎಂಬುದು ನಮ್ಮ ಒತ್ತಾಸೆ. ಸರ್ಕಾರಿ ನೌಕರರ ಬಗ್ಗೆ ವಿಶೇಷ ಕಾಳಜಿ ತೋರುತ್ತಿರುವ ಸಿಎಂ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿಎಸ್​ವೈ ಅವರನ್ನು ಸ್ಮರಿಸುತ್ತೇವೆ.
|ಸಿ.ಎಸ್. ಷಡಾಕ್ಷರಿಸರ್ಕಾರಿ ನೌಕರರ ಸಂಘದ ಅಧ್ಯಕ್ಷ
ನಿವೃತ್ತ ಅಪರ ಮುಖ್ಯಕಾರ್ಯ ದರ್ಶಿ ನೇತೃತ್ವದಲ್ಲಿ ನಾಲ್ವರು ಸದಸ್ಯರಿರುವ ಸಮಿತಿ ರಚನೆಯಾಗಲಿದೆ. ಅದರಲ್ಲಿ ಆರ್ಥಿಕ ಇಲಾಖೆ ಪ್ರತಿನಿಧಿಯೂ ಇರಲಿದ್ದಾರೆ. ಮುಂದಿನ ಹಂತದಲ್ಲಿ ಆಯೋಗದ ಅಧ್ಯಕ್ಷರು ಸರ್ಕಾರಿ ನೌಕರರ ಬೇಡಿಕೆಗಳನ್ನು ಪರಿಶೀಲಿಸಲಿದ್ದಾರೆ. ಬೇರೆ ರಾಜ್ಯಗಳಲ್ಲಿನ ವೇತನ ವ್ಯತ್ಯಾಸ, ಕೇಂದ್ರದ ವೇತನ ಪರಿಷ್ಕರಣೆ, ಬೆಲೆ ಹೆಚ್ಚಳ ಸೇರಿ ಬೇರೆ ಬೇರೆ ಆಯಾಮದಲ್ಲಿ ಅವಲೋಕನ ನಡೆಸುತ್ತಾರೆ. ಹೀಗಾಗಿ ಅಧ್ಯಕ್ಷರು ಮತ್ತು ಸಮಿತಿಗೆ ಹೆಚ್ಚಿನ ಜವಾಬ್ದಾರಿ ಇರಲಿದೆ. ನಿವೃತ್ತ ಅಪರ ಮುಖ್ಯಕಾರ್ಯದರ್ಶಿ ಉಮೇಶ್, ಅಮಿತಾ ಪ್ರಸಾದ್ ಹೆಸರು ಚರ್ಚೆಯಲ್ಲಿದೆ. ಆಡಳಿತ ಸುಧಾರಣೆ ಆಯೋಗದ ಜವಾಬ್ದಾರಿ ಹೊತ್ತಿರುವ ವಿಜಯ ಭಾಸ್ಕರ್ ಹೆಸರೂ ಚರ್ಚೆಗೆ ಬಂದಿದೆ. ಅಂತಿಮ ತೀರ್ಮಾನ ಮುಖ್ಯಮಂತ್ರಿ ಕೈಗೊಳ್ಳಲಿದ್ದಾರೆ.
ಬಿಜೆಪಿ ಹಮ್ಮಿಕೊಂಡಿರುವ ಜನಸಂಕಲ್ಪ ಯಾತ್ರೆಯ 2ನೇ ಹಂತದ ಪ್ರವಾಸ ಇಂದಿನಿಂದ (ನ.7) ಪ್ರಾರಂಭವಾಗಲಿದೆ. ಡಿಸೆಂಬರ್ ತನಕ ಜನಸಂಕಲ್ಪ ಯಾತ್ರೆ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಉಡುಪಿ, ಗದಗ, ಹಾವೇರಿ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಮೂರು ದಿನಗಳು ಸತತವಾಗಿ ಕಾರ್ಯಕ್ರಮಗಳಿವೆ ಎಂದರು. ಕಾರ್ಯಕ್ರಮಕ್ಕೆ ಅಭೂತಪೂರ್ವ ಬೆಂಬಲ ಎಲ್ಲೆಡೆ ದೊರೆಯುತ್ತಿದೆ. ಈ ಬಾರಿ ಮುಂಬೈ ಕರ್ನಾಟಕದಲ್ಲಿ ಪ್ರವಾಸ ಮಾಡುತ್ತಿದ್ದು, ಇದು ನಮ್ಮ ಮುಂದಿನ ವಿಜಯಕ್ಕೆ ಪುಷ್ಟಿ ನೀಡುತ್ತಿದೆ ಎಂದರು.
ಎಸ್ಸಿ ಎಸ್ಟಿ ಮೋರ್ಚಾ ಬೃಹತ್ ಸಮಾವೇಶ:ನ.20 ರಂದು ಬಳ್ಳಾರಿಯಲ್ಲಿ ಎಸ್​ಟಿ ಮೋರ್ಚಾ ಸಮಾವೇಶ ಹಾಗೂ ನ.30 ರಂದು ಮೈಸೂರಿನಲ್ಲಿ ಎಸ್​ಸಿ ಮೋರ್ಚಾ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದರು.
‘ಕೆಜಿಎಫ್’​, ‘ಕಾಂತಾರ’ದಂತೆ ‘ವಿಜಯಾನಂದ’ ಕೂಡ ಪ್ಯಾನ್​ ಇಂಡಿಯಾ ಸದ್ದು ಮಾಡಲಿ: ಹರ್ಷಿಕಾ ಪೂಣಚ್ಚ

‘ಗಂಧದಗುಡಿ’ಯಿಂದ ಸಿಹಿಸುದ್ದಿ: ಪುನೀತ್ ಮಹತ್ವಾಕಾಂಕ್ಷೆಯ ಸಿನಿಮಾ ಟಿಕೆಟ್​ ದರದಲ್ಲಿ ಭಾರಿ ಇಳಿಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
