ಬೆಂಗಳೂರು:ಕರೊನಾ ಭೀತಿ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಐ ಮಾನಿಟರಿ ಅಡ್ವೈಸರಿ (ಐಎಂಎ)ಯ ಹೂಡಿಕೆದಾರರ ಹಣ ಹಿಂತಿರುಗಿಸುವ ಪ್ರಕ್ರಿಯೆಗೆ ಮರು ಜೀವ ಬಂದಿದೆ. ಸೆ.21ರಂದು ಐಎಂಎ ವಿಶೇಷ ನ್ಯಾಯಾಲಯದಲ್ಲಿ ಈ ಕುರಿತು ವಿಚಾರಣೆ ನಡೆಯಲಿದೆ.
ಐಎಂಎ ಕಂಪನಿಯಲ್ಲಿ ಹೂಡಿಕೆ ಮಾಡಿದ ಸಂತ್ರಸ್ತರಿಗೆ ಹಣ ಹಿಂತಿರುಗಿಸುವ ಪ್ರಕ್ರಿಯೆ ಆರಂಭಿಸಬೇಕು ಎನ್ನುವಷ್ಟರಲ್ಲಿ ಕರೋನಾ ಕರಿ ನೆರಳ ಛಾಯೆ ಇದರ ಮೇಲೆ ಬಿದ್ದಿತ್ತು. ಇದೀಗ ಐಎಂಎ ವಂಚನೆ ಪ್ರಕರಣದ ವಿಚಾರಣೆಗಾಗಿ ರೂಪಿಸಲಾದ ವಿಶೇಷ ನ್ಯಾಯಾಲಯದಲ್ಲಿ ಸೋಮವಾರ ಪ್ರಕರಣದ ವಿಚಾರಣೆ ನಡೆಯಲಿದೆ.ಇದನ್ನೂ ಓದಿ:ಈ ಅಧಿವೇಶನದಲ್ಲೇ ಗೋಹತ್ಯಾ ನಿಷೇಧ ಮಸೂದೆ ಅಂಗೀಕರಿಸಿ, ರಾಘವೇಶ್ವರಶ್ರೀ ಒತ್ತಾಯ
ವಂಚನೆಗೊಳಗಾದ ಐಎಂಎ ಗ್ರಾಹಕರಿಗೆ ಎಷ್ಟು ಪ್ರಮಾಣದಲ್ಲಿ ಹಣ ಹಿಂತಿರುಗಿಸಬೇಕು ಎಂಬ ಬಗ್ಗೆ ಸಕ್ಷಮ ಪ್ರಾಧಿಕಾರಕ್ಕೆ ಸೂಚಿಸಿರಲಿಲ್ಲ. ಕೋರ್ಟ್ ನೀಡುವ ಆದೇಶದ ಮೇರೆಗೆ ಸಕ್ಷಮ ಪ್ರಾಧಿಕಾರದ ಅಧಿಕಾರಿ ಹರ್ಷಗುಪ್ತ ನೇತೃತ್ವದ ತಂಡ ವಂಚನೆಗೊಳಗಾದವರಿಗೆ ಹಣ ಮರು ಪಾವತಿಸುವ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.ವಂಚನೆಗೊಳಗಾದವರಿಂದ ಸದ್ಯದಲ್ಲೇ ಆನ್‌ಲೈನ್ ಮೂಲಕ ಕ್ಲೈಮ್ ಅರ್ಜಿ ಆಹ್ವಾನಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
‘ಥಟ್ಟನೆ ಗುಪ್ತಾಂಗ ತೋರಿಸಿದ್ದಾರೆ …ಬಲವಂತ ಮಾಡಿದ್ದಾರೆ’: ದೊಡ್ಡ ನಟರ ವಿರುದ್ಧ ಕಂಗನಾ ಆರೋಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
