ಬೆಂಗಳೂರು:ನಗರದಲ್ಲಿ ಮತ್ತೆ ಪುಂಡರ ಅಟ್ಟಹಾಸ ಶುರುವಾಗಿದೆ. ಬೇಕರಿ ಮಾಲಕಿಯ ಮೇಲೆ ಪುಡಿರೌಡಿಗಳು ಹಲ್ಲೆ ಮಾಡಿ ದಾಂಧಲೆ ನಡೆಸಿರುವ ಅಮಾನುಷ ಘಟನೆ ನಿನ್ನೆ (ಏಪ್ರಿಲ್​ 24) ಸಂಜೆ ಐದು ಗಂಟೆಗೆ ಲಿಂಗರಾಜಪುರದಲ್ಲಿ ನಡೆದಿದೆ.
ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಲಿಂಗರಾಜಪುರದಲ್ಲಿ ಮಹಿಳೆಯೊಬ್ಬರು ಬೇಕರಿ ವ್ಯಾಪಾರ ನಡೆಸುತ್ತಿದ್ದಾರೆ. ನಿನ್ನೆ ಸಂಜೆ ಮೂವರು ದುಷ್ಕರ್ಮಿಗಳು ಬೇಕರಿ ಬಳಿ ಬಂದಿದ್ದರು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಜತೆ ಜಗಳ ತೆಗೆದ ಪುಂಡರು, ನೋಡ ನೋಡುತ್ತಿದ್ದಂತೆ ಬೇಕರಿಯಲ್ಲಿದ್ದ ತಿನಿಸುಗಳನ್ನ ರಸ್ತೆಗೆ ಬಿಸಾಡಿ ದಾಂಧಲೆ ನಡೆಸಿದ್ದಾರೆ. ಈ ಘಟನೆಯಿಂದ ಮಹಿಳೆ ಆತಂಕಕ್ಕೀಡಾಗಿದ್ದಾಳೆ.
ಇದನ್ನೂ ಓದಿ:ಕನ್ನಡ ಚಿತ್ರರಂಗಕ್ಕೆ ಡಾ.ರಾಜ್ ಕೊಡುಗೆ ಅಪಾರ: ಅಭಿಮಾನಿಗಳ ಸಂಘದ ಅಧ್ಯಕ್ಷ ಜಿ.ಟಿ.ರವೀಂದ್ರ ಕುಮಾರ್ ಬಣ್ಣನೆ
ಈ ಹಿಂದೆ ಕುಂದಲಹಳ್ಳಿ ಗೇಟ್ ಸಮೀಪದ ಬೇಕರಿಯೊಂದರ ಹುಡುಗರಿಗೆ ಪುಡಿರೌಡಿಗಳು ಮನಸೋಇಚ್ಛೆ ಥಳಿಸಿದ್ದರು. ಸಿಗರೇಟ್ ಹಣ ಕೇಳಿದಕ್ಕೆ ಅಂಗಡಿ ಹುಡುಗರ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿ 1.9 ಲಕ್ಷ ರೂ. ಎಗರಿಸಿ, ಪ್ರಾಣಬೆದರಿಕೆ ಹಾಕಿದ್ದರು. ಈ ಘಟನೆ ಕುಂದಲಹಳ್ಳಿಗೇಟ್ ಸಮೀಪದ ಕಾಂಡಿಮೆಂಟ್ಸ್‌ವೊಂದರಲ್ಲಿ ನಡೆದಿತ್ತು.
ಘಟನೆ ಸಂಬಂಧ ಡೆಲಿವರಿ ಬಾಯ್ ಕಾರ್ತಿಕ್ (20), ಅಲ್ಯೂಮಿನಿಯಂ ವರ್ಕ್ ಮಾಡುವ ಸಲ್ಮಾನ್ (20) ಖಾಸಗಿ ಹೊಟೇಲ್ ಮ್ಯಾನೇಜರ್ ಕಾರ್ತಿಕ್ (23) ಎಂಬ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಲಾಗಿತ್ತು.(ದಿಗ್ವಿಜಯ ನ್ಯೂಸ್​)
ಸಾರ್ವಜನಿಕ ಸೇವಾ ಸಂಖ್ಯೆಗೆ ಕರೆ ಮಾಡಿ ಯೋಗಿ ಆದಿತ್ಯನಾಥ್​ಗೆ ಜೀವ ಬೆದರಿಕೆ ಹಾಕಿದ ಭೂಪ!

20 ಕ್ವಿಂಟಲ್​ ಹೂವುಗಳಿಂದ ಅಲಂಕೃತಗೊಂಡ ಕೇದಾರನಾಥ ದೇವಸ್ಥಾನ!

ಪ್ರಿಯತಮೆ ಮೇಲೆ ಕುದಿಯುವ ಎಣ್ಣೆ ಸುರಿದ ಗೆಳೆಯ; ಪ್ರಿಯಕರನಿಗಾಗಿ ಹುಡುಕಾಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 3 =
Remember me
