ಮೈಸೂರು:ಜಗತ್ತನ್ನೇ ತಲ್ಲಣಗೊಳಿಸá-ವು ಕರೊನಾಗೆ ನಮ್ಮ ಪರಿಸರದಲ್ಲಿ ದೊರೆಯುವ ಬೆಟ್ಟದ ನೆಲ್ಲಿ, ಹಣ್ಣು-ಹಂಪಲು, ಸಾಂಬಾರ ಪದಾರ್ಥಗಳು ರಾಮಬಾಣ! ಮೈಸೂರಿನ ಕಿರಣ್ ರಾಬರ್ಟ್ ಗುರುವಾರ ವಿಜಯವಾಣಿಗೆ ನೀಡಿದ ಸಂದರ್ಶನದಲ್ಲಿ ಇಂಥದೊಂದು ಸಲಹೆ ನೀಡಿದ್ದಾರೆ.
ಸಾಮಾನ್ಯ ಶೀತ ತಡೆಯಲು ಔಷಧ ಕಂಡು ಹಿಡಿಯುವ ಸಲುವಾಗಿ ಅಮೆರಿಕದಲ್ಲಿ ಸೊಸೈಟಿ ಫಾರ್ ಕಾಮನ್ ಕೋಲ್ಡ್ ರಚಿಸಲಾಯಿತು. ಈ ಸೊಸೈಟಿ 1949 ರಿಂದ 1999ರವರೆಗೆ ಅಧ್ಯಯನ ನಡೆಸಿದರೂ ಔಷಧ ಕಂಡು ಹಿಡಿಯಲುಸಾಧ್ಯವಾಗಲಿಲ್ಲ. ಅಂತಿಮವಾಗಿ ಭಾರತೀಯರು ಬಳಕೆ ಮಾಡುವ ಸಾಂಬಾರ ಪದಾರ್ಥಗಳಲ್ಲಿ ಶೀತವನ್ನು ತಡೆಯುವ ಗುಣ ಇದೆ ಎಂಬ ವರದಿಯನ್ನು ಸೊಸೈಟಿ ನೀಡಿತ್ತು. ಈ ಕಾರಣಕ್ಕೆ ಭಾರತೀಯರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ ಎಂದು ಅಭಿಪ್ರಾಯಪಟ್ಟಿತು. ಕರೊನಾ ಬಾರದಂತೆ ಅಗತ್ಯ ಮುಂಜಾಗ್ರತಾ ಕ್ರಮ ಅನುಸರಿಸುವುದು ಉತ್ತಮ. ಒಂದು ವೇಳೆ ಬಂದರೂ ಅದನ್ನು ಎದುರಿಸುವಷ್ಟು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುವ ಅವಶ್ಯಕತೆ ಇದೆ. ಕರೊನಾಕ್ಕೆ ಬೆಟ್ಟದ ನೆಲ್ಲಿ ರಾಮಬಾಣವಾಗಿದ್ದು, ಜನರು ದಿನಕ್ಕೆ ಒಂದು ನೆಲ್ಲಿಕಾಯಿಯನ್ನಾದರೂ ಸೇವಿಸಿ ಎಂದು ಸಲಹೆ ನೀಡಿದ್ದಾರೆ. ವಿಟಮಿನ್ ಸಿ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವುದಿಲ್ಲ. ಅದನ್ನು ನಾವು ಹಣ್ಣು-ಹಂಪಲುಗಳನ್ನು ತಿನ್ನುವ ಮೂಲಕ ಪಡೆಯಬೇಕು. ವಿಟಮಿನ್ ಸಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಬೆಟ್ಟದ ನೆಲ್ಲಿಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಅಂಶ ಇರುತ್ತದೆ. ಹೀಗಾಗಿ ಬೆಟ್ಟದ ನೆಲ್ಲಿಯನ್ನು ತಿನ್ನುವುದು ಉತ್ತಮ ಎಂದರು. ಬೆಟ್ಟದ ನೆಲ್ಲಿ ದೊರೆಯದೆ ಇದ್ದರೆ ವಿಟಮಿನ್ ಸಿ ಅಂಶ ಇರುವ ನಿಂಬೆಹಣ್ಣಿನ ಜ್ಯೂಸ್ ಕುಡಿಯುವುದು ಅಥವಾ ಜೇನು ಸೇವಿಸುವುದು ಉತ್ತಮ. ಟೊಮ್ಯಾಟೊವನ್ನು ಬೇಯಿಸದೆ ಹಾಗೆಯೇ ತಿನ್ನಿ. ಮೂಸಂಬಿ, ಕಿತ್ತಳೆ ಹಣ್ಣು ಸೇರಿ ವಿಟಮಿನ್ ಸಿ ಅಂಶ ಹೆಚ್ಚಿರುವ ಹಣ್ಣು- ಹಂಪಲುಗಳನ್ನು ಸೇವಿಸಿ. ನೀರನ್ನು ಹೆಚ್ಚಾಗಿ ಕುಡಿಯಿರಿ ಎಂದು ಸಲಹೆ ನೀಡಿದರು.
ಕಿರಣ್ ರಾಬರ್ಟ್ ಕುರಿತು
ಕಿರಣ್ ರಾಬರ್ಟ್ ಮೈಸೂರಿನ ನಿವಾಸಿ. ಇಂಡಿಯನ್ ಸೊಸೈಟಿ ಫಾರ್ ಮಲೇರಿಯಾ ಆಂಡ್ ಅದರ್ ಕಮ್ಯುನಿಕೇಬಲ್ ಡಿಸೀಸ್​ನ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದು. ವಿಶ್ವ ಆರೋಗ್ಯ ಸಂಸ್ಥೆ ಸದಸ್ಯರೊಂದಿಗೆ ನಿರಂತರ ಒಡನಾಟ ಹೊಂದಿದ್ದಾರೆ. ಪ್ರಸ್ತುತ ಕರೊನಾ ಮುಕ್ತ ಭಾರತ ನಿರ್ವಣಕ್ಕೆ ಜಿಲ್ಲಾಡಳಿತಕ್ಕೆ ಅಗತ್ಯ ಸಲಹೆ, ಸಹಕಾರ ನೀಡುತ್ತಿದ್ದಾರೆ.
| ಸದೇಶ್ ಕಾರ್ವಡ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − four =
Remember me
