ವಿಜಯನಗರ:ಹರಪನಹಳ್ಳಿ ಪಟ್ಟಣದ ಹೊರವಲಯದ ಮೈಲಾರದಲ್ಲಿ ಗೊರವಯ್ಯ ಬಿಲ್ಲನ್ನು ಏರಿ ಪ್ರತೀ ವರ್ಷ ಕಾರ್ಣಿಕ ನುಡಿಯುತ್ತಾರೆ. ಈ ಕಾರ್ಣಿಕದಲ್ಲಿ ರಾಜ್ಯದ ದೇಶದ ಒಟ್ಟಾರೆ ಭವಿಷ್ಯವನ್ನು ನುಡಿಯಲಾಗುತ್ತದೆ. ಪ್ರತೀ ವರ್ಷದಂತೆ ಈ ಬಾರಿಯೂ ಗೊರವಯ್ಯ ಕಾರ್ಣಿಕವನ್ನು ನುಡಿದಿದ್ದು ಈ ಬಾರಿ ಚುನಾವಣೆ ಹೊಸ್ತಿಲಲ್ಲೇ ಜಾತ್ರೆ ಬಂದಿರುವುದರಿಂದ ಭಕ್ತಾದಿಗಳು ಭವಿಷ್ಯವಾಣಿಗಾಗಿ ಕಾತರದಿಂದ ಕಾಯುತ್ತಿದ್ದರು.
ಈ ಬಾರಿ ಬಿಲ್ಲನ್ನು ಏರಿದ್ದ ಗೊರವಯ್ಯ, ಭಾಗ್ಯದ ನಿಧಿ ತುಂಬಿ ತುಳುಕಿತಲೇ ಪರಾಕ್ ಎಂದು ಕಾರ್ಣಿಕ ನುಡಿದಿದ್ದಾರೆ. ಅಂದಹಾಗೆ ಈ ಮೈಲಾರ ಇರುವುದು ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ಹುಲಿಕಟ್ಟಿ ರಸ್ತೆಗೆ ಹೊಂದಿಕೊಂಡು.
ಹರಪನಹಳ್ಳಿ ಪಟ್ಟಣದ ಹೊರವಲಯದಲ್ಲಿರೋ ಮೈಲಾರಲಿಂಗೇಶ್ವರ ದೇಗುಲದಲ್ಲಿ ನಡೆದ ಕಾರ್ಣಿಕೋತ್ಸವದಲ್ಲಿ ಗೊರವಪ್ಪ ಕೊಟೆಪ್ಪ ಬಿಲ್ಲನ್ನೂ ಏರಿ, ಸದ್ದಲೇ ಅಂತ ಹೇಳಿದ ಕೂಡಲೇ, ಎಲ್ಲರೂ ಮೌನವಹಿಸುತ್ತಾರೆ. ಆ ಬಳಿಕ ಗೊರವಪ್ಪ ಭವಿಷ್ಯ ನುಡಿದು ಗೊರವಯ್ಯ ಬಿಲ್ಲಿನಿಂದ ಕೆಳಗೆ ಬೀಳುತ್ತಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 7 =
Remember me
