|ರುದ್ರಣ್ಣ ಹರ್ತಿಕೋಟೆಬೆಂಗಳೂರು
ರಾಜ್ಯ ಸರ್ಕಾರ ಆಡಳಿತ ಸುಧಾರಣೆಗೆ ಸಚಿವಾಲಯದ ಮೂಲಕವೇ ಮುನ್ನುಡಿ ಬರೆಯುತ್ತಿದ್ದು, ಕೆಲವು ಹುದ್ದೆಗಳನ್ನು ಹಿಂದಕ್ಕೆ ಪಡೆಯುವುದರೊಂದಿಗೆ ಕಡತ ವಿಲೇವಾರಿ ಹಂತಗಳನ್ನು ಶೇ.50 ಕಡಿಮೆ ಮಾಡುವುದಕ್ಕೆ ಮುಂದಾಗಿದೆ.
ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅಧ್ಯಕ್ಷತೆಯ ಆಡಳಿತ ಸುಧಾರಣಾ ಆಯೋಗ ಸಿದ್ಧಪಡಿಸಿಕೊಟ್ಟ ಎರಡನೇ ವರದಿಯಲ್ಲಿನ ಅಂಶಗಳನ್ನು ಸರ್ಕಾರ ಸದ್ದಿಲ್ಲದೆ ಜಾರಿಗೆ ತರುತ್ತಿದೆ. ಕಂದಾಯ ಸಚಿವ ಆರ್. ಅಶೋಕ್ ಅಧ್ಯಕ್ಷತೆಯ ಸಚಿವ ಸಂಪುಟ ಉಪ ಸಮಿತಿ ಸಹ ಈ ಸುಧಾರಣೆಗೆ ಸಹಮತ ವ್ಯಕ್ತಪಡಿಸಿದೆ. ಸಾರ್ವಜನಿಕರಿಗೆ ಯೋಜನೆಗಳು ವೇಗವಾಗಿ ದೊರಕಬೇಕೆಂಬ ಉದ್ದೇಶದಿಂದ ಕೆಲ ಸುಧಾರಣಾ ಕ್ರಮಗಳಿಗೆ ಸರ್ಕಾರ ಮುಂದಾಗಿದೆ. ಹಂತಹಂತವಾಗಿ ಯೋಜನೆಯನ್ನು ಜಾರಿಗೊಳಿಸಬೇಕಾಗಿದೆ. ಅದರಲ್ಲಿ ಈಗ ಸಚಿವಾಲಯಕ್ಕೆ ಸಂಬಂಧಿಸಿದಂತೆ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಕಡತ ವಿಲೇವಾರಿ ಹಂತ ಕಡಿಮೆ:ಪ್ರಮುಖವಾಗಿ ಭ್ರಷ್ಟಾಚಾರ ಹಾಗೂ ವಿಳಂಬಕ್ಕೆ ಕಾರಣವಾಗಿರುವ ಕಡತಗಳ ಚಲನೆಯ ಹಂತಗಳನ್ನು ಶೇ.50 ತಗ್ಗಿಸಲು ಪ್ರಸ್ತಾವನೆ ಸಿದ್ಧವಾಗಿದೆ. ಕಡತ ವಿಲೇವಾರಿ ಹಂತ ಕಡಿಮೆ ಮಾಡಲು ಮುಖ್ಯ ಕಾರ್ಯದರ್ಶಿ ಸಹಮತಿಸಿದ್ದು, ಸಚಿವಾಲಯದಿಂದ ಇ-ಆಡಳಿತಕ್ಕೆ ಪ್ರಸ್ತಾವನೆ ಹೋಗಿದೆ. ಇ-ಆಫೀಸ್ ವ್ಯವಸ್ಥೆ ಜಾರಿಯಲ್ಲಿರುವುದರಿಂದ ಇಲ್ಲಿಯೂ ಅಳವಡಿಸಿಕೊಳ್ಳಬೇಕಾಗಿದೆ.
ಕೆಳಹಂತದ ಸಿಬ್ಬಂದಿಗೆ ಕಡತಗಳನ್ನು ನೋಡುವ ಅಧಿಕಾರವೇ ಇಲ್ಲದಿರುವುದರಿಂದ ಅವರು ಸಾರ್ವಜನಿಕ ರಿಂದ ಬರುವ ದೂರು, ಅರ್ಜಿ, ನ್ಯಾಯಾಲಯದ ಪ್ರಕರಣಗಳನ್ನು ಮಾತ್ರ ಗಮನಿಸ ಬೇಕಾಗುತ್ತದೆ. ಹೀಗಾಗಿ ಕೆಳಹಂತದ ಹುದ್ದೆಗಳು ರದ್ದಾಗುತ್ತವೆ ಎಂಬ ಭೀತಿ ನೌಕರರಲ್ಲಿ ಎದುರಾಗಿದೆ. ಸಚಿವಾಲಯದಲ್ಲಿ ಈಗಾಗಲೇ 500ಕ್ಕೂ ಹೆಚ್ಚು ಕಿರಿಯ ಹಾಗೂ ಹಿರಿಯ ಸಹಾಯಕರ ಹುದ್ದೆಗಳ ರದ್ದತಿಗೆ ಸಿದ್ಧತೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಎಸಿಬಿ ದಾಳಿ ಇಲ್ಲ:ಸಚಿವಾಲಯ ಎಂದರೆ ಅದು ಸರ್ಕಾರದ ಅಸ್ತಿತ್ವದ ಪ್ರಶ್ನೆ. ನೇರವಾಗಿ ಮುಖ್ಯಮಂತ್ರಿ, ಮಂತ್ರಿಗಳು ಹಾಗೂ ಮುಖ್ಯ ಕಾರ್ಯದರ್ಶಿ ಉಸ್ತುವಾರಿಗೆ ಬರುತ್ತದೆ. ಆದ್ದರಿಂದಲೇ ಸಚಿವಾಲಯವನ್ನು ಎಸಿಬಿಯಿಂದ ಹೊರಗಿಡಲಾಗಿದೆ. ಉಳಿದ ಕಚೇರಿಗಳಂತೆ ಎಸಿಬಿ ವ್ಯಾಪ್ತಿಗೆ ತರಬೇಕೆಂದು ಶಾಸಕರ ಬೇಡಿಕೆಯೂ ಆಗಿದೆ ಎಂದು ಸರ್ಕಾರದ ಮೂಲಗಳು ಹೇಳುತ್ತವೆ.
ಆಭರಣ ಕಸಿದುಕೊಂಡರು…!
ಮಹಿಳಾ ನೌಕರರೊಬ್ಬರ ವರ್ಗಾವಣೆ ಆದೇಶ ಪತ್ರ ನೀಡಲು ಹಣಕ್ಕಾಗಿ ಬೇಡಿಕೆ ಇಟ್ಟ ಅಧಿಕಾರಿಯೊಬ್ಬರ ಏಜೆಂಟ್ ಕೊನೆಗೆ ಆಕೆಯ ಬಳಿ ಇದ್ದ ಆಭರಣಗಳನ್ನೇ ಕಸಿದುಕೊಂಡು ಕಳುಹಿಸಿದರೆಂದು ಕೆಲ ಸಿಬ್ಬಂದಿ ಶಾಸಕರ ಗಮನಕ್ಕೆ ತಂದಿದ್ದರೆನ್ನಲಾಗಿದೆ. ಅದಕ್ಕೆ, ಶಾಸಕರು ಕಡತ ವಿಲೇವಾರಿ ಸರಳ ಮಾಡುವಂತೆ ಪದೇಪದೆ ಮುಖ್ಯಮಂತ್ರಿ ಮೇಲೆ ಒತ್ತಡ ಹೇರಿದ್ದರೆಂದು ಮೂಲಗಳು ಹೇಳುತ್ತವೆ. ಒಂದೆಡೆ ಭ್ರಷ್ಟಾಚಾರಕ್ಕೆ ಕಾರಣವಾಗುವ ಅಧಿಕಾರಿಗಳಿದ್ದರೆ, ಇನ್ನೊಂದೆಡೆ ಸಿಬ್ಬಂದಿಯಿಂದ ಹಣ ಮುಟ್ಟುವುದಿಲ್ಲವೆಂದು ಪ್ರತಿನಿತ್ಯ ಪ್ರಮಾಣ ಮಾಡಿಸುವ ಅಧಿಕಾರಿಯೂ ಸಚಿವಾಲಯದಲ್ಲಿದ್ದಾರೆ. ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ತನ್ನ ಶಾಖೆಯ ಸಿಬ್ಬಂದಿಯಿಂದ ಪ್ರತಿನಿತ್ಯ ಪ್ರಮಾಣ ಮಾಡಿಸಿಕೊಂಡು ಹಣದ ವಹಿವಾಟು ಶಾಖೆಯಲ್ಲಿ ನಡೆಯದಂತೆ ನೋಡಿಕೊಳ್ಳುತ್ತಿದ್ದಾರೆ. ಅಂತಹ ಅಧಿಕಾರಿಗಳ ಸಂಖ್ಯೆ ಹೆಚ್ಚಾಗಬೇಕು ಎಂಬ ಆಸೆಯೂ ಪ್ರಾಮಾಣಿಕ ನೌಕರರಲ್ಲಿದೆ.
ಹಂತಗಳು ಹೇಗಿವೆ? ಎಷ್ಟಕ್ಕೆ ಇಳಿಯಲಿವೆ?

ಮುಖ್ಯಮಂತ್ರಿ ಒಪ್ಪಿಗೆಗೂ ಸಲ್ಲಿಸಲಾಗುತ್ತಿದೆ. ಸಿಎಂ ಒಪ್ಪಿದ ನಂತರ ಆದೇಶವಾಗಿ ಹೊರಬರಲಿದೆ. ಕಡತ ಚಲನೆಯ ಹಂತಗಳು ಕಡಿಮೆಯಾದರೆ ಕೆಳಹಂತದ ನೌಕರರಿಗೆ ಕೆಲಸವೇ ಇಲ್ಲದಂತಾಗುತ್ತದೆ. ಸಣ್ಣಪುಟ್ಟ ಕೆಲಸಗಳ ಕಡತಗಳು ವಿಲೇವಾರಿ ಆಗಲು ತಿಂಗಳುಗಟ್ಟಲೆ ತೆಗೆದುಕೊಳ್ಳುತ್ತಿವೆ. ಈ ಹಂತಗಳನ್ನು ಕಡಿಮೆ ಮಾಡಿದರೆ ವೇಗವಾಗಿ ವಿಲೇವಾರಿ ಸಾಧ್ಯವಾಗುತ್ತದೆ ಎಂಬುದು ಸರ್ಕಾರದ ಅಭಿಪ್ರಾಯವಾಗಿದೆ.
ಪ್ರತಿಭಟನೆಗೆ ಮಣಿಯದ ಸರ್ಕಾರ:ಆಡಳಿತ ಸುಧಾರಣೆಯ ಹೆಸರಿನಲ್ಲಿ ಹುದ್ದೆಗಳನ್ನು ರದ್ದು ಮಾಡಲಾಗುತ್ತದೆ ಎಂದು ಪ್ರತಿಭಟಿಸಿ ಸಚಿವಾಲಯ ನೌಕರರ ಸಂಘವು ಸಚಿವಾಲಯ ಬಂದ್ ಮಾಡಿತ್ತು. ಸರ್ಕಾರ ಅದಕ್ಕೆ ಸೊಪು್ಪ ಹಾಕಿಲ್ಲ. ಪ್ರತಿಭಟನೆಯ ನಂತರವೇ ಕಾನೂನು ಕೋಶಗಳಿಂದ ಅಧೀನ ಕಾರ್ಯದರ್ಶಿ ಹುದ್ದೆಗಳನ್ನು ಹಿಂದಕ್ಕೆ ಪಡೆದಿದೆ ಹಾಗೂ ಕಡತ ವಿಲೇವಾರಿ ಹಂತಗಳನ್ನು ಕಡಿಮೆ ಮಾಡುವ ಪ್ರಸ್ತಾವನೆ ಸಿದ್ಧಪಡಿಸಿದೆ.
ಹುದ್ದೆಗಳು ಹಿಂದಕ್ಕೆ:ಇತ್ತೀಚೆಗೆ ಮುಖ್ಯಮಂತ್ರಿ ಜನಸ್ಪಂದನ ಕೋಶ ರದ್ದು ಮಾಡಿ ಅಲ್ಲಿರುವ 50ಕ್ಕೂ ಹೆಚ್ಚು ಹುದ್ದೆಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲಾಗಿತ್ತು. ಇದೀಗ ವಿವಿಧ ಇಲಾಖೆಗಳಲ್ಲಿನ ಕಾನೂನು ಕೋಶದಲ್ಲಿರುವ ಅಧೀನ ಕಾರ್ಯದರ್ಶಿಗಳ ಹುದ್ದೆಗಳನ್ನು ರದ್ದು ಮಾಡಲಾಗುತ್ತಿದೆ. 1996ರಲ್ಲಿ 17 ಕಾನೂನು ಕೋಶಗಳನ್ನು ವಿವಿಧ ಇಲಾಖೆಗಳಲ್ಲಿ ಸೃಷ್ಟಿಸಲಾಗಿತ್ತು. ನ್ಯಾಯಾಲಯದ ಪ್ರಕರಣಗಳಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡುವುದು ಕೋಶಗಳ ಉದ್ದೇಶವಾಗಿತ್ತು.
ಎರಡು, ಮೂರು ಇಲಾಖೆಗೆ ಒಬ್ಬರಂತೆ ಕಾನೂನು ಕೋಶದ ಅಧೀನ ಕಾರ್ಯದರ್ಶಿಗಳಿದ್ದಾರೆ. ಇವರ ಅಗತ್ಯವಿಲ್ಲ ಎಂಬ ಕಾರಣಕ್ಕೆ ಇದೀಗ 12 ಅಧೀನ ಕಾರ್ಯದರ್ಶಿ ಹುದ್ದೆಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಮರಳಿಸಲಾಗುತ್ತಿದೆ. ಈ ಅಧಿಕಾರಿಗಳನ್ನು ಅವರು ಬೇರೆ ಕಡೆ ಬಳಸಬಹುದಾಗಿದೆ.
ಶಾಸಕರ ಒತ್ತಡ:ಕಡತ ವಿಲೇವಾರಿ ಹಂತಗಳನ್ನು ಕಡಿಮೆ ಮಾಡುವಂತೆ ಮುಖ್ಯಮಂತ್ರಿ ಮೇಲೆ ಶಾಸಕರು ನಿರಂತರ ಒತ್ತಡ ತರುತ್ತಿದ್ದರೆಂದು ಸರ್ಕಾರದ ಮೂಲಗಳು ಹೇಳುತ್ತವೆ. ಭಷ್ಟಾಚಾರ ಮಿತಿ ಮೀರುತ್ತಿದೆ. ಆದ್ದರಿಂದ ಕಡತ ವಿಲೇವಾರಿ ಹಂತಗಳು ಕಡಿಮೆಯಾಗಲೇಬೇಕೆಂದು ಒತ್ತಡ ಇತ್ತೆನ್ನಲಾಗಿದೆ.
ಆಂಧ್ರ ಲಾರಿಯಲ್ಲಿ ರಕ್ತ ಚಂದನ, TN ನೋಂದಣಿ ಕಾರಿನಲ್ಲಿ ಎಸ್ಕಾರ್ಟ್.. ಕರ್ನಾಟಕದಲ್ಲಿ ತಗ್ಲಾಕಂಡ ಕಿಲಾಡಿಗಳು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
