ಬೆಂಗಳೂರು:ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲಾ ಮಕ್ಕಳಿಗೆ ಆನ್​ಲೈನ್ ತರಗತಿ ನಡೆಸುವುದು ರದ್ದಾದ ಬಳಿಕ ಆಫ್​ಲೈನ್ ಕ್ಲಾಸ್ ಮುಂದುವರಿಸಿದ್ದ ಖಾಸಗಿ ಶಾಲೆಗಳಿಗೆ ಸರ್ಕಾರ ಬ್ರೇಕ್ ಹಾಕಿದೆ. ಈ ಸಂಬಂಧ ಶಿಕ್ಷಣ ಇಲಾಖೆ ನಿರ್ಧಾರ ಹೊರಬಿದ್ದ ಐದು ದಿನಗಳ ಬಳಿಕ ಆದೇಶ ಹೊರಡಿಸಿದೆ.
ಎಲ್​ಕೆಜಿಯಿಂದ ಐದನೇ ತರಗತಿವರೆಗೆ ಆನ್​ಲೈನ್ ತರಗತಿಯನ್ನು ಸರ್ಕಾರ ರದ್ದುಗೊಳಿಸಿದ ಬಳಿಕ ಕೆಲವು ಖಾಸಗಿ ಶಾಲೆಗಳು ಆದೇಶ ಪ್ರಕಟವಾಗಿಲ್ಲ ಎಂಬುದನ್ನೇ ನೆಪವಾಗಿಸಿಕೊಂಡು ಆನ್​ಲೈನ್ ತರಗತಿ ಮುಂದುವರಿಸಿದ್ದವು. ಇನ್ನೂ ಕೆಲವು ಶಾಲೆಗಳು ಆಫ್​ಲೈನ್ ಮೂಲಕ ತರಗತಿ ಆರಂಭಿಸಿ ಶುಲ್ಕ ಕಟ್ಟುವಂತೆ ಪಾಲಕರಿಗೆ ಒತ್ತಡ ಹೇರುತ್ತಿದ್ದವು. ಇದೀಗ ಎರಡೂ ರೀತಿಯ ಕಲಿಕೆಗೆ ನಿಷೇಧ ಹೇರಿರುವ ಸರ್ಕಾರ ಮುಂದಿನ ಮಾರ್ಗಸೂಚಿಗಳು ಪ್ರಕಟವಾಗುವವರೆಗೂ 5ನೇ ತರಗತಿಯವರೆಗೆ ಆನ್​ಲೈನ್ ಮಾತ್ರವಲ್ಲ, ಆಫ್​ಲೈನ್​ನಲ್ಲೂ ಸಮೂಹ ಮಾಧ್ಯಮ ಅಥವಾ ತಂತ್ರಜ್ಞಾನ ಬಳಕೆ ಮಾಡಿಕೊಂಡು ಬೋಧನೆ ಮಾಡಬಾರದೆಂದು ಆದೇಶಿಸಿದೆ. ಈಗಾಗಲೇ ಆನ್​ಲೈನ್ ತರಗತಿ ಆರಂಭಿಸಿದ್ದಲ್ಲಿ ತಕ್ಷಣ ಸ್ಥಗಿತ ಮಾಡಬೇಕು. ಇದೇ ನೆಪದಲ್ಲಿ ಖಾಸಗಿ ಶಾಲೆಗಳು ಶುಲ್ಕ ವಸೂಲಿಗೆ ಮುಂದಾಗುವಂತಿಲ್ಲವೆಂದು ಎಚ್ಚರಿಕೆ ನೀಡಿದೆ.
ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಆನ್​ಲೈನ್ ತರಗತಿ ನಡೆಸುವುದನ್ನು ವಿರೋಧಿಸಿ ವಿಜಯವಾಣಿ ಅಭಿಯಾನ ಆರಂಭಿಸಿತ್ತು. ಇದಕ್ಕೆ ರಾಜ್ಯದ ಶಿಕ್ಷಣ ತಜ್ಞರು, ಪಾಲಕರು ಬೆಂಬಲ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಜೂ.10ರಂದು ಸಭೆ ನಡೆಸಿ ಆನ್​ಲೈನ್ ತರಗತಿ ನಿರ್ಬಂಧಿಸಿ ಇದರ ಅಧ್ಯಯನಕ್ಕಾಗಿ ಪ್ರತ್ಯೇಕ ಸಮಿತಿ ರಚಿಸಿತ್ತು.ಇದನ್ನೂ ಓದಿ:ರಾಜ್ಯದಲ್ಲಿ ಸಕ್ರಿಯ ಕರೊನಾ ಪ್ರಕರಣಗಳು 2987; 24 ಗಂಟೆಯಲ್ಲಿ 213ಮಂದಿಯಲ್ಲಿ ಸೋಂಕು ದೃಢ
ಆದರೂ, ಬಹುತೇಕ ಖಾಸಗಿ ಶಾಲೆಗಳು ಅಧಿಕೃತವಾಗಿ ಆದೇಶ ಬಂದಿಲ್ಲವೆಂಬ ನೆಪವೊಡ್ಡಿ ತರಗತಿ ನಡೆಸುತ್ತಿದ್ದವು. ಮತ್ತೆ ಈ ಬಗ್ಗೆ ಮಾಧ್ಯಮಗಳು ಸುದ್ದಿ ಪ್ರಚಾರ ಮಾಡಿದ ಮೇಲೆ ಸೋಮವಾರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಅಧಿಕೃತವಾಗಿ ಆದೇಶ ಹೊರಡಿಸಿದೆ.
ಮಾರ್ಗಸೂಚಿಗೆ ಸಮಿತಿ:ಶಿಕ್ಷಣ ಇಲಾಖೆ 6ರಿಂದ 10ನೇ ತರಗತಿವರೆಗೆ ಆನ್​ಲೈನ್ ಶಿಕ್ಷಣವನ್ನು ವಯೋಮಾನಕ್ಕೆ ಅನುಗುಣವಾಗಿ ವೈಜ್ಞಾನಿಕವಾಗಿ ಅಳವಡಿಸಲು ಮಾರ್ಗಸೂಚಿ ಸಿದ್ಧಪಡಿಸಲು ಸಮಿತಿ ರಚಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿ ನಿರೂಪಣಾ ಸಮಿತಿ ಸದಸ್ಯ ಕಾರ್ಯದರ್ಶಿ ಡಾ.ಎಂ.ಕೆ. ಶ್ರೀಧರ್ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿದ್ದು, ಶಿಕ್ಷಣ ತಜ್ಞರು ಮತ್ತು ಅಧಿಕಾರಿಗಳು ಸೇರಿದಂತೆ 10 ಜನರ ಸದಸ್ಯರಿದ್ದಾರೆ. ಈ ಸಮಿತಿಯು ಎಲ್​ಕೆಜಿಯಿಂದ 5ನೇ ತರಗತಿಗೆ ಆನ್​ಲೈನ್ ಹೊರತಾಗಿ ಸಮೂಹ ಮಾಧ್ಯಮ, ತಂತ್ರಜ್ಞಾನ ಆಧಾರಿತವಾಗಿ ಬೋಧನೆ ಮಾಡಲು ಮಾರ್ಗಸೂಚಿ ರಚಿಸಬೇಕು. ಶಿಕ್ಷಣದಲ್ಲಿ ತಂತ್ರಜ್ಞಾನ ಯಾವ ರೀತಿ ಬಳಸಬೇಕು. ಸಾಂಪ್ರದಾಯಿಕ ತರಗತಿಗಳಿಗೆ ಪರ್ಯಾಯ ಎನ್ನುವ ಭಾವನೆ ಮೂಡದಂತೆ ಮಕ್ಕಳಿಗೆ ಕಲಿಕೆಗೆ ಪ್ರೇರಣೆ ಹಾಗೂ ಮಕ್ಕಳ ಜ್ಞಾನರ್ಜನೆಗೆ ಪೂರಕವಾಗಿ ತಂತ್ರಜ್ಞಾನ ಬಳಕೆ ಹೇಗಿರಬೇಕು? ವಯೋಮಾನಕ್ಕೆ ಅನುಗುಣವಾಗಿ ವಿದ್ಯಾರ್ಥಿಯ ಸಾಮರ್ಥ್ಯ, ತಂತ್ರಜ್ಞಾನ ಉಪಕರಣ ಬಳಕೆಯಿಂದ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳು, ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿ ಸಾಮಾಜಿಕ ಸ್ಥಿತಿಗತಿಗಳ ಅಂತರದ ಹಿನ್ನೆಲೆಯಲ್ಲಿ ಈ ರೀತಿಯ ನೀತಿ ರೂಪಣೆಗಳ ಕಾರಣ ಯಾವುದೇ ವಿದ್ಯಾರ್ಥಿ ಕಲಿಕೆಯಿಂದ ವಂಚಿತರಾಬಾರದು ಎಂಬ ಪರಿಕಲ್ಪನೆ ಇಟ್ಟುಕೊಳ್ಳಬೇಕು. ಕರೊನಾ ವೇಳೆ ಪರ್ಯಾಯ ಬೋಧನಾ ಕ್ರಮದ ಸಾಧಕ ಬಾಧಕಗಳನ್ನು ರ್ಚಚಿಸಿ ಮಾರ್ಗಸೂಚಿ ರಚಿಸಬೇಕೆಂದು ಸೂಚಿಸಿದೆ.ಇದನ್ನೂ ಓದಿ:ಕುಡುಕ ತಂದೆಯನ್ನು ಕತ್ತಿಯಿಂದ ಕಡಿದು ಕೊಂದ ಮಕ್ಕಳು
10 ದಿನಗಳ ಡೆಡ್​ಲೈನ್:ಸಮಿತಿ ವರದಿ ನೀಡಲು 10 ದಿನಗಳ ಡೆಡ್​ಲೈನ್ ನಿಗದಿ ಪಡಿಸಿದೆ. ಇದು ಜೂ.10ರಿಂದ ಅಥವಾ 15ರಿಂದ ಅನ್ವಯವಾಗಲಿದೆಯೇ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಏಕೆಂದರೆ ಜೂ.10ರಂದು ಸಹ ಮುಂದಿನ 10 ದಿನದಲ್ಲಿ ವರದಿ ನೀಡುವಂತೆ ಸೂಚಿಸಿದ್ದರು. ಸಮಿತಿಗೆ ಬೇಕಾದ ಸ್ಥಳಾವಕಾಶ ಮತ್ತು ಅಗತ್ಯ ಪರಿಕರಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಒದಗಿಸಬೇಕು. ಸಮಿತಿ ಸರ್ಕಾರೇತರ ಸದಸ್ಯರಿಗೆ ಗೌರವ ಸಂಭಾವನೆ ನೀಡುವ ಬಗ್ಗೆಯೂ ಪ್ರತ್ಯೇಕ ಆದೇಶ ಹೊರಡಿಸಬೇಕೆಂದು ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
ಭಾರತೀಯ ರಾಯಭಾರ ಕಚೇರಿಯ ಸಿಬ್ಬಂದಿ ಅಪಹರಿಸಿದ ಪಾಕಿಸ್ತಾನ; ಸೇಡಿನ ಕ್ರಮ ಶಂಕೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × 2 =
Remember me
