| ಮಂಜುನಾಥ ಕೋಳಿಗುಡ್ಡ ಬೆಳಗಾವಿ
ಗ್ರಾಮ ಪಂಚಾಯಿತಿಗಳಲ್ಲಿನ ಖರ್ಚು-ವೆಚ್ಚಗಳಲ್ಲಿ ಪಾರದರ್ಶಕತೆ, ಲೆಕ್ಕ ಪರಿಶೋಧನೆಯಲ್ಲಿ ಏಕರೂಪತೆ ತರುವ ನಿಟ್ಟಿನಲ್ಲಿ ಸರ್ಕಾರವು ‘ಆನ್​ಲೈನ್ ಆಡಿಟ್’ ಮಾಡಲು ನಿರ್ಧರಿಸಿದೆ.
ರಾಜ್ಯದಲ್ಲಿನ 6,028 ಗ್ರಾಪಂಗಳಿಗೆ ವಾರ್ಷಿಕ ತಲಾ 50 ಲಕ್ಷ ರೂ.ನಿಂದ 1 ಕೋಟಿ ರೂ.ವರೆಗೆ ಅನುದಾನ ಬರುತ್ತದೆ. ಆದರೆ, ಎಷ್ಟು ಪ್ರಮಾಣದಲ್ಲಿ ಅನುದಾನ ಖರ್ಚಾಗಿದೆ ಎಂಬ ನಿಖರ ಮಾಹಿತಿ ಲಭ್ಯವಾಗುತ್ತಿಲ್ಲ. ಹೀಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಇಲಾಖೆಯು ‘ಆನ್​ಲೈನ್ ಆಡಿಟ್’ ವ್ಯವಸ್ಥೆ ಅಳವಡಿಸಿಕೊಂಡಿದೆ.
ವೆಬ್ ಆಧಾರಿತ ತಂತ್ರಾಂಶಬಹುತೇಕ ಗ್ರಾಪಂಗಳಲ್ಲಿ ವಾರ್ಷಿಕ ಲೆಕ್ಕ ಪರಿಶೋಧನೆಗಳು ವಿಳಂಬವಾಗುತ್ತಿವೆ. ಕೆಲವು ಕಡೆ ಲೆಕ್ಕ ಪರಿಶೋಧನೆಗಳ ವರದಿಯಲ್ಲಿ ಲೋಪ-ದೋಷಗಳೂ ಕಂಡು ಬರುತ್ತಿವೆ. ಇದರಿಂದಾಗಿ ನಿಗದಿತ ಸಮಯದಲ್ಲಿ ಲೆಕ್ಕ ಪರಿಶೋಧನೆ ಮಾಡುವುದು ಹಾಗೂ ಪಾರದರ್ಶಕತೆ ಕಾಪಾಡುವುದು ತೊಡಕಾಗುತ್ತಿವೆ. ಈ ಹಿನ್ನೆಲೆಯಲ್ಲಿ 15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಇಲಾಖೆಯು ವೆಬ್ ಆಧಾರಿತ ‘ಆಡಿಟ್ ಆನ್​ಲೈನ್’ ತಂತ್ರಾಂಶ ಅಭಿವೃದ್ಧಿ ಪಡಿಸಿದೆ.
ಮೊದಲ ಹಂತ ಆರಂಭಆನ್​ಲೈನ್ ತಂತ್ರಾಂಶದ ಮೂಲಕವೇ ಎಲ್ಲ ಗ್ರಾಪಂಗಳು ಲೆಕ್ಕ ಪರಿಶೋಧನೆ ಕೈಗೊಳ್ಳಲು ಸರ್ಕಾರ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ 30 ಜಿಪಂಗಳ ವ್ಯಾಪ್ತಿಯಲ್ಲಿ ಮೊದಲ ಹಂತದಲ್ಲಿ ಶೇ. 20ರಂತೆ ಸುಮಾರು 1,230 ಗ್ರಾಪಂ ಗುರುತಿಸಲಾಗಿದ್ದು, 2019-20ನೇ ಸಾಲಿನ ಅನುದಾನ ಬಳಕೆ, ಖರ್ಚು-ವೆಚ್ಚಗಳ ಸಂಪೂರ್ಣ ಲೆಕ್ಕ ಪರಿಶೋಧನೆಯನ್ನು ಆನ್​ಲೈನ್ ಮೂಲಕವೇ ಆಡಿಟ್ ಮಾಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಇಲಾಖೆ ಕ್ರಮ ವಹಿಸಿದೆ.
ನೋಂದಣಿ ಮಾಡಲು ಸಿಬ್ಬಂದಿಗೆ ತರಬೇತಿ
ಆನ್​ಲೈನ್ ಆಡಿಟ್ ಕಾರ್ಯಕ್ರಮ ಸುಗವಾಗಿ ನಡೆಸುವ ನಿಟ್ಟಿನಲ್ಲಿ ರಾಜ್ಯ, ಜಿಲ್ಲಾ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ಸರ್ಕಾರ ನಿಯೋಜಿಸಿದೆ. ಅಲ್ಲದೆ, ಆನ್​ಲೈನ್ ಆಡಿಟ್​ಗೆ ಆಯ್ಕೆಯಾಗಿರುವ ಗ್ರಾಪಂಗಳ ಪಿಡಿಒಗಳು ತಮ್ಮ ಗ್ರಾಪಂಗಳ ವಾರ್ಷಿಕ ಖರ್ಚು, ವೆಚ್ಚಗಳನ್ನು ಆನ್​ಲೈನ್ ಆಡಿಟ್ ತಂತ್ರಾಂಶದಲ್ಲಿ ನೋಂದಣಿ ಮಾಡಬೇಕು. ಇದಕ್ಕಾಗಿ ಸಂಬಂಧಿಸಿದ ಗ್ರಾಪಂ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ ಎಂದು ಜಿಪಂ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 16 =
Remember me
