ಬೆಂಗಳೂರು: ಜನರ ಸಮಸ್ಯೆಗಳಿಗೆ ಜಿಲ್ಲಾ ಮಟ್ಟದಲ್ಲೇ ಪರಿಹಾರ ದೊರಕಿಸಿಕೊಡಲು ಮೊಟ್ಟ ಮೊದಲ ಬಾರಿಗೆ ಹಮ್ಮಿಕೊಂಡಿದ್ದ ಜಿಲ್ಲಾ ಜನತಾ ದರ್ಶನದಲ್ಲಿ ಸ್ವೀಕೃತವಾದ ಅರ್ಜಿಗಳಿಗೆ ತ್ವರಿತ ಪರಿಹಾರ ನೀಡಲು ಸರ್ಕಾರ ಮುಂದಾಗಿದೆ.
ಎರಡು ದಿನದಲ್ಲೇ ಸ್ವೀಕೃತವಾದ 12,914 ಅರ್ಜಿಗಳನ್ನು ಇಲಾಖಾವಾರು ಪಟ್ಟಿ ಮಾಡಿ ಕ್ರಮ ಕೈಗೊಳ್ಳುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಸೂಚಿಸಿದ್ದಾರೆ.
ಒಟ್ಟು 12,914 ಅರ್ಜಿಗಳು ಸ್ವೀಕೃತಗೊಂಡಿದ್ದು, ಈ ಪೈಕಿ 180 ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲಾಗಿದೆ. ಉಳಿದ 12,668 ಅರ್ಜಿಗಳನ್ನು ತ್ವರಿತ ವಿಲೇವಾರಿಗೆ ಆಯಾ ಇಲಾಖೆ ಮುಖ್ಯಸ್ಥರಿಗೆ ರವಾನಿಸಲಾಗಿದೆ.
ಕೃಷಿ 110, ಪಶು ಸಂಗೋಪನೆ 65, ಹಿಂದುಳಿದ ವರ್ಗಗಳ ಇಲಾಖೆ 169, ವಾಣಿಜ್ಯ ಮತ್ತು ಕೈಗಾರಿಕೆ 80, ಸಹಕಾರ 57, ಮಾಹಿತಿ ತಂತ್ರಜ್ಞಾನ 5, ಡಿಪಿಎಆರ್ 8, ಸಾರ್ವಜನಿಕ ಉದ್ಯಮ 5, ಶಾಲಾ ಶಿಕ್ಷಣ 450, ಸಮಾಜ ಕಲ್ಯಾಣ 288, ಮಹಿಳಾ ಮತ್ತು ಮಕ್ಕಳ ಕಲ್ಯಾಣ 430, ಡಿಪಿಎಆರ್ ಆಡಳಿತ ಸುಧಾರಣೆ 2, ಡಿಪಿಎಆರ್ ಇ-ಗವರ್‌ನನ್ಸ್-9, ಇಂಧನ 366, ಆರ್ಥಿಕ 26, ಆಹಾರ 162, ಅರಣ್ಯ 112, ಆರೋಗ್ಯ 162, ಉನ್ನತ ಶಿಕ್ಷಣ 63, ಗೃಹ 237, ತೋಟಗಾರಿಕೆ 34, ವಸತಿ 265, ಮಾಹಿತಿ 3, ಮೂಲಸೌಕರ್ಯ ಅಭಿವೃದ್ಧಿ 7, ಕನ್ನಡ ಮತ್ತು ಸಂಸ್ಕೃತಿ 40, ಕಾರ್ಮಿಕ 79, ಕಾನೂನು 6, ವೈದ್ಯಕೀಯ ಶಿಕ್ಷಣ 2, ಸಣ್ಣ ನೀರಾವರಿ 65, ಅಲ್ಪಸಂಖ್ಯಾತರ ಕಲ್ಯಾಣ 219, ಯೋಜನೆ 1, ಲೋಕೋಪಯೋಗಿ 150, ಕಂದಾಯ 5855, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ 1574, ಕೌಶಲ ಅಭಿವೃದ್ಧಿ 34, ಪ್ರವಾಸೋದ್ಯಮ 11, ಸಾರಿಗೆ 201, ನಗರಾಭಿವೃದ್ಧಿ 1192, ಜಲಸಂಪನ್ಮೂಲ 98, ಯುವ ಜನ ಸೇವೆ ಮತ್ತು ಕ್ರೀಡಾ ಇಲಾಖೆಗೆ 26 ಅರ್ಜಿಗಳು ಸಲ್ಲಿಕೆಯಾಗಿವೆ.
ಜನರ ಕಷ್ಟಕ್ಕೆ ಮಿಡಿದ ಜಿಲ್ಲಾ ಜನತಾದರ್ಶನ; ಅಹವಾಲು ಸಲ್ಲಿಕೆಗೆ ಮುಗಿಬಿದ್ದ ನಾಗರಿಕರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
