ಬೆಂಗಳೂರು:ಚಿತ್ರಮಂದಿರಗಳ ಮಾಲೀಕರ ಒತ್ತಾಯಕ್ಕೆ ನಿನ್ನೆಯಷ್ಟೇ ಮಣಿದು ಪೂರ್ತಿ ಆಸನ ಭರ್ತಿಗೆ ಒಪ್ಪಿದ್ದ ಸರ್ಕಾರ, ಇಂದು ಜಿಮ್ ಮಾಲೀಕರ ಒತ್ತಾಯಕ್ಕೆ ಮಣಿದು ಜಿಮ್​ ತೆರೆಯಲು ಕೂಡ ಅನುಮತಿ ನೀಡಿದೆ. ಆದರೆ ಕೆಲವು ಷರತ್ತುಗಳನ್ನು ವಿಧಿಸಿದ್ದು, ಅವುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದೆ.
ಕರೊನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಮಾರ್ಗಸೂಚಿ ಹೊರಡಿಸಿ ಕೆಲವೊಂದು ನಿರ್ಬಂಧಗಳನ್ನು ವಿಧಿಸಿದ್ದ ಸರ್ಕಾರ, ಜಿಮ್​ಗಳನ್ನು ಮುಚ್ಚುವಂತೆ ಆದೇಶ ನೀಡಿತ್ತು. ಆದರೆ ಈ ಬಗ್ಗೆ ಇಂದು ಚಿತ್ರನಟರಾದ ರಾಕಿಂಗ್ ಸ್ಟಾರ್ ಯಶ್​, ದುನಿಯಾ ವಿಜಯ್​ ಕೂಡ ದನಿ ಎತ್ತಿದ್ದು, ಜಿಮ್​ ತೆರೆಯಲು ಅನುಕೂಲ ಮಾಡಿಕೊಡುವಂತೆ ಟ್ವೀಟ್​ ಮೂಲಕ ಒತ್ತಾಯಿಸಿದ್ದರು. ಅಲ್ಲದೆ #savefitnessindustry #savegym ಹ್ಯಾಷ್​ಟ್ಯಾಗ್​ಗಳ ಮೂಲಕ ಟ್ವಿಟರ್​ನಲ್ಲಿ ಅಭಿಯಾನ ಕೂಡ ಆರಂಭವಾಗಿ, ಅದಕ್ಕೆ ಉತ್ತಮ ಬೆಂಬಲವೂ ವ್ಯಕ್ತವಾಗಿತ್ತು.
ಇದನ್ನೂ ಓದಿ:ಬೈಕ್​ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು!
ಈ ಮಧ್ಯೆ ಜಿಮ್​ ಮಾಲೀಕರ ಅಹವಾಲನ್ನು ಕೇಳಿಸಿಕೊಂಡ ಸರ್ಕಾರ ಜಿಮ್​ ತೆರೆಯಲು ಅನುವು ಮಾಡಿಕೊಟ್ಟಿದೆ. ಆದರೆ ಜಿಮ್​ನಲ್ಲಿ ಕಸರತ್ತು ನಡೆಸಲು ಶೇ. 50 ಮಂದಿಗಷ್ಟೇ ಅವಕಾಶ ನೀಡಬೇಕು. ಮುನ್ನೆಚ್ಚರಿಕೆ ಸಲುವಾಗಿ ಮಾಸ್ಕ್​, ಸೋಷಿಯಲ್ ಡಿಸ್ಟೆನ್ಸ್, ಸ್ಯಾನಿಟೈಸರ್ ಬಳಕೆಯನ್ನು ಪಾಲಿಸಬೇಕು. ಪ್ರತಿಯೊಬ್ಬರೂ ಬಳಸಿದ ಬಳಿಕ ಉಪಕರಣಗಳನ್ನು ಸ್ಯಾನಿಟೈಸ್ ಮಾಡಬೇಕು. ಒಂದು ವೇಳೆ ಈ ಎಲ್ಲ ನಿಯಮಗಳನ್ನು ಪಾಲಿಸದಿದ್ದರೆ ಕೋವಿಡ್​ ಹಾವಳಿ ಮುಗಿಯುವವರೆಗೂ ಜಿಮ್​ಗಳನ್ನು ಮುಚ್ಚಿಸಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

ಜಿಮ್​ನವರ ಪರ ರಾಕಿಂಗ್ ಸ್ಟಾರ್ ಯಶ್​ ಕಸರತ್ತು: ಫಿಟ್​ನೆಸ್​ನವರ ಒತ್ತಡಕ್ಕೆ ಮಣಿಯುತ್ತಾ ಸರ್ಕಾರ?

ಸಾರಾಯಿ ಸಾಗಿಸುತ್ತಿದ್ದ ಲಾರಿ ಪಲ್ಟಿ; ಕೆಲವು ಮದ್ಯಪ್ರಿಯರಿಗೆ ಖುಷಿಯೋ ಖುಷಿ!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:one × four =
Remember me
