ಬೀದರ್:ಚಲಿಸುತ್ತಿದ್ದ ಬಸ್​ನಿಂದ ಚಕ್ರಗಳು ಕಳಚಿ ಬಿದ್ದ ಆತಂಕಕಾರಿ ಘಟನೆ ಬಸವಕಲ್ಯಾಣ ಬಳಿಯಲ್ಲಿ ನಡೆದಿದೆ. ಅದೃಷ್ಟವಶಾತ್​ ಪ್ರಯಾಣಿಕರೆಲ್ಲ ಸುರಕ್ಷಿತವಾಗಿ ಇದ್ದಾರೆ.
ಬಸವಕಲ್ಯಾಣ ಘಟಕಕ್ಕೆ ಸೇರಿದ ಸರ್ಕಾರಿ ಬಸ್​ ಆಳಂದ ತಾಲೂಕಿನ ವಿಕೆಸಲಗರಿಂದ ಬಸವಕಲ್ಯಾಣ ಕಡೆಗೆ ಬರುತ್ತಿತ್ತು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 9ರಲ್ಲಿನ ಸಸ್ತಾಪೂರ ಬಂಗ್ಲಾ ಬಳಿ ಬಸ್​ನ ಚಕ್ರಗಳು ಕಳಚಿ ಬಿದ್ದಿವೆ.
ಹೆದ್ದಾರಿ ಮೇಲೆ ಬಸ್​ ವೇಗವಾಗಿ ಹೋಗುತ್ತಿದ್ದಾಗ ಕುರಿಯೊಂದು ಅಡ್ಡ ಬಂದ ಕಾರಣ ಚಾಲಕ ತಕ್ಷಣ ಬ್ರೇಕ್ ಹಾಕಿದ್ದರಿಂದ ಅವಘಡ ಸಂಭವಿಸಿದೆ. ಬಸ್​ನ ಹಿಂಭಾಗದ ನಾಲ್ಕು ಚಕ್ರಗಳು ಕಳಚಿ ರಸ್ತೆಯ ಬಲಭಾಗಕ್ಕೆ ಬಿದ್ದಿವೆ. ಬಸವಕಲ್ಯಾಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
