| ವಿಲಾಸ ಮೇಲಗಿರಿ ಬೆಂಗಳೂರು
ಕೇಂದ್ರ ಸರ್ಕಾರ ಭತ್ತ ಸಹಿತ 23 ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡಿದ್ದರೂ ಹಲವು ನಿಯಮ, ಷರತ್ತುಗಳಿಂದಾಗಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಶಿವಮೊಗ್ಗ, ರಾಯಚೂರು ಬಳ್ಳಾರಿ, ದಾವಣಗೆರೆ, ಮೈಸೂರು, ಮಂಡ್ಯ, ಗದಗ, ಧಾರವಾಡ ಸೇರಿ ರಾಜ್ಯದ 12 ಜಿಲ್ಲೆಗಳಲ್ಲಿ ರೈತರು ಪ್ರಮುಖ ಬೆಳೆಯಾಗಿ ಭತ್ತ ಬೆಳೆಯುತ್ತಿದ್ದಾರೆ. ಕೇಂದ್ರ ಸರ್ಕಾರ ಗುಣಮಟ್ಟದ ಭತ್ತಕ್ಕೆ ಪ್ರತಿ ಕ್ವಿಂಟಲ್​ಗೆ 1886 ರೂ. ಬೆಂಬಲ ಬೆಲೆ ನಿಗದಿಪಡಿಸಿದರೂ ಸರ್ಕಾರದ ಎಡವಟ್ಟು ನಿರ್ಧಾರಗಳಿಂದ ರೈತನಿಗೆ ನಿರೀಕ್ಷಿತ ಫಲ ಸಿಗುತ್ತಿಲ್ಲ.
ಸರ್ಕಾರ ಭತ್ತ ಬೆಳೆದ ರೈತರ ನೋಂದಣಿ ಆರಂಭಿಸಿ, ಖರೀದಿ ಪ್ರಾರಂಭಿಸುವ ವೇಳೆಗೆ ಸಣ್ಣ ಮತ್ತು ಮಧ್ಯಮ ರೈತರು ಬೆಳೆಯನ್ನು ಮುಕ್ತ ಮಾರುಕಟ್ಟೆಯಲ್ಲಿ ಕೈಗೆ ಸಿಕ್ಕ ದರಕ್ಕೆ ಮಾರಾಟ ಮಾಡಿ ನಷ್ಟ ಅನುಭವಿಸಿದ್ದಾರೆ. ಈ ಮೊದಲು ಸರ್ಕಾರವೇ ಖರೀದಿ ಕೇಂದ್ರ ಆರಂಭಿಸಿ ಖರೀದಿಸುತ್ತಿತ್ತು. ಆದರೆ, ಈಗ ರೈತರ ಹೆಸರ ನೋಂದಣಿ ಮಾಡಿಕೊಂಡು ಎಸ್​ಎಂಎಸ್ ಮೂಲಕ ಸಮೀಪದ ಅಕ್ಕಿ ಗಿರಣಿಗೆ ಕೊಡಲು ಹೇಳುತ್ತಾರೆ. ಇದರಿಂದ ರೈತರು ಅನೇಕ ಸಮಸ್ಯೆ ಎದುರಿಸುವಂತಾಗಿದೆ. ಆರ್.ಟಿ.ಸಿ.ಯಲ್ಲಿ ಭತ್ತ ಬಿತ್ತನೆ ದಾಖಲಾಗಿರಬೇಕು. ಆಗ ಮಾತ್ರ ರೈತ ಭತ್ತವನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಸಾಧ್ಯ. ಪ್ರಸಕ್ತ ಸಾಲಿನ ಆರ್.ಟಿ.ಸಿ.ಯಲ್ಲಿ ಭತ್ತ ನಮೂದಾಗಿರದೇ ಇದ್ದರೆ ಮಾರಾಟಕ್ಕೆ ಅವಕಾಶವಿಲ್ಲ.
ಹಣ ಕೈಸೇರಲು 2-3 ತಿಂಗಳು ಬೇಕು:ಭತ್ತ ಮಾರಾಟ ಮಾಡಿದರೆ ತಕ್ಷಣಕ್ಕೆ ಹಣ ರೈತನ ಕೈ ಸೇರುವುದಿಲ್ಲ. ಕೆಲವು ಗಿರಣಿ ಮಾಲೀಕರು 2-3 ತಿಂಗಳು ರೈತರನ್ನು ಸತಾಯಿಸುತ್ತಾರೆ. ಸಾಲ ಮಾಡಿ ಭತ್ತ ಬೆಳೆದ ರೈತ ಸಾಲದ ಬಾಧೆ ಅನುಭವಿಸುತ್ತಾನೆ.
ಗಿರಣಿಗಳಿಗೆ ಬಂಪರ್!
ಸರ್ಕಾರ ಅಕ್ಕಿ ಗಿರಣಿ ಮೂಲಕ ಭತ್ತ ಖರೀದಿ ಮಾಡುತ್ತಿರುವುದರಿಂದ ಕೆಲವು ಗಿರಣಿ ಮಾಲೀಕರು ಲಾಭ ಮಾಡಿಕೊಳ್ಳುತ್ತಾರೆ. ರೈತರ ಮಾಲನ್ನು ಪಡೆದು ಬಿಲ್ ಹಾಕಿದ ಬಳಿಕ 2-3 ತಿಂಗಳ ತರುವಾಯ ಹಣ ಪಾವತಿ ಮಾಡುತ್ತಾರೆ. ಇದರಿಂದ ತಮಗಿಂತ ಗಿರಣಿಗಳ ಮಾಲೀಕರಿಗೇ ಹೆಚ್ಚು ಲಾಭವಾಗುತ್ತದೆ ಎಂದು ರೈತರು ಹೇಳುತ್ತಾರೆ.ಎಪಿಎಂಸಿಗಳಲ್ಲಿ ಭತ್ತವನ್ನು ಅಡಮಾನ ಇಟ್ಟುಕೊಂಡು ಬಡ್ಡಿ ರಹಿತ ಸಾಲ ಕೊಡಬೇಕು. ಗೋದಾಮಿಗೆ ಒಂದು ತಿಂಗಳವರೆಗೆ ಬಾಡಿಗೆ ವಿಧಿಸಬಾರದು. ರೈತ ಗಿರಣಿಗೆ ಮಾಲು ಬಿಟ್ಟ ಕೂಡಲೇ ಕ್ಯಾಷ್ ಆಂಡ್ ಕ್ಯಾರಿ ವ್ಯವಸ್ಥೆ ಮಾಡಬೇಕು ಎಂಬುದು ರೈತರ ಪ್ರಮುಖ ಒತ್ತಾಯಗಳು.
ರೈತರ ಬೇಡಿಕೆ ಏನು?
ಗಿರಣಿಯಲ್ಲಿ ರೈತರ ಗಿರಕಿ
ಗಿರಣಿಗೆ ಭತ್ತ ತರಲು ಗೋಣಿ ಚೀಲಕ್ಕಾಗಿ ರೈತರು 15-20 ರೂ. ತೆರಬೇಕು. ಸರ್ಕಾರ ರೈತರಿಗೆ 6 ರೂ. ಮಾತ್ರ ಕೊಡುತ್ತದೆ. ಭತ್ತ ತಂದ ಮೇಲೆ ತೇವಾಂಶದ ಹೆಸರಿನಲ್ಲಿ ತೂಕದಲ್ಲಿ ಮೋಸ ಮಾಡುತ್ತಾರೆ. ತೇವಾಂಶದ ನೆಪದಲ್ಲಿ ಒಂದೊಂದು ಮಿಲ್​ನವರು ಒಂದೊಂದು ರೀತಿ ಭತ್ತದ ತೂಕದಲ್ಲಿ ಕಡಿತ ಮಾಡುತ್ತಾರೆ. ಕೆಲವರು ಕ್ವಿಂಟಲ್​ಗೆ 2/3 ಕೆಜಿವರೆಗೆ ಕಡಿತ ಮಾಡಿದ ಉದಾಹರಣೆಗಳೂ ಇವೆ ಎನ್ನುತ್ತಾರೆ ರೈತರು. ಕೆಲವು ಗಿರಣಿ ಮಾಲೀಕರು ಭತ್ತ ಗುಣಮಟ್ಟದ್ದಲ್ಲ ಎಂದು ವಾಪಸ್ ಕಳುಹಿಸುತ್ತಾರೆ. ಆಗ ಸಾಗಣೆ ಹೊರೆ ರೈತನ ಮೇಲೆ ಬೀಳುತ್ತದೆ. ರೈತರು ಸಾಕಷ್ಟು ಪ್ರಮಾಣದಲ್ಲಿ ಜ್ಯೋತಿ ಭತ್ತವನ್ನು ಬೆಳೆದಿದ್ದಾರೆ. ಆದರೆ, ಸರ್ಕಾರ ಜ್ಯೋತಿ ಭತ್ತ ಖರೀದಿ ಮಾಡುತ್ತಿಲ್ಲ. ಇದರಿಂದ ಮಾರುಕಟ್ಟೆಯಲ್ಲಿ ಈ ತಳಿ ಭತ್ತದ ಬೆಳೆ ಪಾತಾಳಕ್ಕೆ ಕುಸಿದಿದೆ ಎಂಬುದು ರೈತರ ಅಳಲು.
ತೂಕದಲ್ಲಿ ಮೋಸ?
ಭತ್ತದ ತೇವಾಂಶ ಕರಾರುವಕ್ಕಾಗಿ ತಿಳಿಯುವುದಿಲ್ಲ. ನಿಯಮದಂತೆ ಭತ್ತ ಒಣಗಿಸುವ ಪರಿಸ್ಥಿತಿ ಕೂಡ ರೈತನಿಗೆ ಇರುವುದಿಲ್ಲ. ಕಾರಣ ಭತ್ತ ಗಿರಣಿಗೆ ತಂದಾಗ ತೇವಾಂಶದ ಹೆಸರಿನಲ್ಲಿ, ತೂಕದಲ್ಲಿ ಮೋಸವಾಗುತ್ತದೆ ಎಂಬುದು ರೈತರ ದೂರು. ತೇವಾಂಶ, ಜಳ್ಳು, ಚೀಲದ ತೂಕ ಸೇರಿ ಕೆಲವು ಗಿರಣಿ ಮಾಲೀಕರು ಮನಸ್ಸಿಗೆ ಬಂದಂತೆ ತೂಕ ಕಡಿತ ಮಾಡುತ್ತಾರೆ. ದಲ್ಲಾಳಿಗಳಾದರೆ ಗೋಣಿ ಚೀಲ ಒದಗಿಸುತ್ತಾರೆ. ತಮ್ಮ ಹಮಾಲಿಗಳನ್ನೇ ಕಳಿಸಿ ಲೋಡ್ ಮತ್ತು ಅನ್​ಲೋಡ್ ಮಾಡಿಸುತ್ತಾರೆ. ಜತೆಗೆ ಸಾಗಣೆ ಜವಾಬ್ದಾರಿ ಹೊರುತ್ತಾರೆ. ಆದರೆ, ಸರ್ಕಾರಿ ವ್ಯವಸ್ಥೆಯಲ್ಲಿ ಗಿರಣಿಗಳಲ್ಲಿ ಅನ್​ಲೋಡ್ ಹೊರತುಪಡಿಸಿ ಎಲ್ಲ ಹೊಣೆಯನ್ನೂ ರೈತನೇ ಹೊರಬೇಕಾಗಿದೆ ಎಂಬುದು ಬಹುತೇಕ ರೈತರ ಅಳಲು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − one =
Remember me
