ದಾವಣಗೆರೆ: ರಾಜ್ಯದಲ್ಲಿ ಬೇಡಿಕೆಗೆ ಅನುಸಾರ ಹಂತಹಂತವಾಗಿ ರಾತ್ರಿ ಬಸ್ ಸಂಚಾರಕ್ಕೆ ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ದೂರದ ಪ್ರಯಾಣ ಮಾಡುವವರಿಗೆ ಇಂದರಿಂದ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಇದುವರೆಗೆ ಇದ್ದ ಸಮಯದ ನಿರ್ಬಂಧ ತೆಗೆದು ಹಾಕಲಾಗುವುದು ಎಂದರು. ಹವಾನಿಯಂತ್ರಿತ ಬಸ್ಸುಗಳ ಸಂಚಾರಕ್ಕೆ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಿಕೊಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಈಗಾಗಲೇ ವಿಮಾನಯಾನ ಆರಂಭವಾಗಿದ್ದು ಅದರಲ್ಲಿ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯೇ ಇರುತ್ತದೆ. ಅದೇ ಮಾನದಂಡದ ಆಧಾರದ ಮೇಲೆ 24-25 ಡಿ.ಸೆ. ಉಷ್ಣಾಂಶ ಕಾಯ್ದುಕೊಂಡು ರಾಜ್ಯದಲ್ಲಿ ಎಸಿ ಬಸ್​ಗಳ ಸಂಚಾರ ಆರಂಭಿಸುವ ಚಿಂತನೆ ನಡೆದಿದೆ ಎಂದರು. ರಾಜ್ಯದ ಆಟೋ, ಟ್ಯಾಕ್ಸಿ, ಕ್ಯಾಬ್ ಚಾಲಕರಿಗೆ ತಲಾ 5 ಸಾವಿರ ರೂ. ನೆರವು ನೀಡಲು ಸರ್ಕಾರ ನಿರ್ಧರಿಸಿದೆ. ಸಾರಿಗೆ ಇಲಾಖೆಯಿಂದ ‘ಸೇವಾಸಿಂಧು’ ಎಂಬ ಆಪ್ ಆರಂಭಿಸಲಾಗಿದೆ. ಅದರಲ್ಲಿ 1.28 ಲಕ್ಷ ಚಾಲಕರು ನೋಂದಣಿ ಮಾಡಿಸಿದ್ದಾರೆ. ರಾಜ್ಯದಲ್ಲಿ 6 ಲಕ್ಷಕ್ಕಿಂತ ಹೆಚ್ಚು ಆಟೋ ಮತ್ತು ಕ್ಯಾಬ್ ಚಾಲಕರಿದ್ದಾರೆ. ಅವರು ಆಪ್ ಮೂಲಕ ಅರ್ಜಿ ಸಲ್ಲಿಸಬೇಕು. ಈಗಾಗಲೇ ನೋಂದಾಯಿಸಿರುವ 1.28 ಲಕ್ಷ ಚಾಲಕರಿಗೆ ನಾಳೆಯಿಂದಲೇ ಅವರ ಖಾತೆಗಳಿಗೆ ಹಣ ಪಾವತಿಸಲಾಗುವುದು ಎಂದರು.
ಇದನ್ನೂ ಓದಿಹೊರರಾಜ್ಯಗಳಿಗೆ ರೈಲು ಸಂಚಾರ ಜೂ. 1ರಿಂದ ಆರಂಭ
ವೇತನ ಖಚಿತ: ಲಾಕ್​ಡೌನ್ ಅವಧಿಯಲ್ಲಿ ಕೆಎಸ್​ಆರ್​ಟಿಸಿ ಸಿಬ್ಬಂದಿ 2 ತಿಂಗಳು ವಿಶ್ರಾಂತಿಯಲ್ಲಿದ್ದರು. ತಮಗೆ ವೇತನ ಸಿಗುವುದೋ ಇಲ್ಲವೋ ಎಂಬ ಆತಂಕ ಅವರಿಗಿತ್ತು. ಸರ್ಕಾರ 460 ಕೋಟಿ ರೂ. ಬಿಡುಗಡೆ ಮಾಡಿದೆ. ಏಪ್ರಿಲ್ ತಿಂಗಳ ವೇತನ ನೀಡಿದ್ದೇವೆ, ಮೇ ತಿಂಗಳ ಸಂಬಳವನ್ನೂ ನೀಡಲಾಗುವುದು ಎಂದು ಸಚಿವರು ಹೇಳಿದರು.
ಬಸ್ ಮೇಲೆ ನಿಮಗೇಕೆ ಸಿಟ್ಟು?
ಬೈಕ್​ನಲ್ಲಿ ಇಬ್ಬರು, ಮೂವರು ಸವಾರಿ ಮಾಡುತ್ತಾರೆ. ವಿಮಾನ ಗಳಲ್ಲಿ ಎಲ್ಲ ಸೀಟುಗಳೂ ಭರ್ತಿಯಾಗೇ ಇರುತ್ತವೆ. ಅದನ್ನು ನೀವು ಕೇಳುವುದಿಲ್ಲ. ಎಲ್ಲಿಯೂ ಪರಸ್ಪರ ಅಂತರ ಕಾಪಾಡುತ್ತಿಲ್ಲ. ಬಸ್​ಗಳ ಮೇಲೆ ಏಕೆ ನಿಮಗೆ ಸಿಟ್ಟು ಎಂದು ಸವದಿ ಮಾಧ್ಯಮದವರಿಗೆ ಪ್ರಶ್ನಿಸಿದರು. ಜೂ.1ರ ನಂತರ ಬಸ್​ನ ಎಲ್ಲ ಸೀಟುಗಳಲ್ಲೂ ಪ್ರಯಾಣಿ ಸಲು ಅನುಮತಿ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಅಲ್ಲಿಂದ ಒಪ್ಪಿಗೆ ದೊರೆತರೆ ನಿರ್ಧರಿಸಲಾಗುವುದು ಎಂದರು.
ಇದನ್ನೂ ಓದಿ5 ವರ್ಷಗಳಿಂದ ಸಾಮ್ರಾಜ್ಯ ಸ್ಥಾಪಿಸಿಕೊಂಡಿದ್ದ ಹುಲಿ
ಜೂ. 1ರಿಂದ ಮೆಟ್ರೋ ರೈಲು ಸೇವೆ?
ಬೆಂಗಳೂರು: ನಾಲ್ಕನೇ ಹಂತದ ಲಾಕ್​ಡೌನ್ ಅವಧಿ ಮೇ 31ಕ್ಕೆ ಅಂತ್ಯವಾಗಲಿದ್ದು, ಜೂ. 1ರಿಂದ ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆ ಸಹಜ ಸ್ಥಿತಿಗೆ ಬರುವ ಸಾಧ್ಯತೆಗಳಿವೆ. ಸದ್ಯ ಬಿಎಂಟಿಸಿ-ಕೆಎಸ್ಸಾರ್ಟಿಸಿ ಬಸ್ ಸೇವೆ ಆರಂಭಿಸಲಾಗಿದೆ. ಮೆಟ್ರೋ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡದ್ದರಿಂದ ಈವರೆಗೆ ಆರಂಭಿಸಿಲ್ಲ. ಅದರೀಗ ಮೇ 31ಕ್ಕೆ ಲಾಕ್​ಡೌನ್ ಅವಧಿ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಮೆಟ್ರೋ ಆರಂಭಿಸಲು ಅನುಮತಿ ನೀಡುವ ಸಾಧ್ಯತೆಗಳಿವೆ.
ಹೊರರಾಜ್ಯಗಳಿಗೂ ರೈಲು
ಬೆಂಗಳೂರು: ಜೂ. 1ರಿಂದ ಹೊರರಾಜ್ಯಗಳಿಗೆ ರೈಲು ಸೇವೆ ಆರಂಭವಾಗುತ್ತಿದೆ. ಜೂ.1ರಿಂದ ಬೆಂಗಳೂರು- ಹುಬ್ಬಳ್ಳಿ, ಯಶವಂತಪುರ- ಶಿವಮೊಗ್ಗ, ವಾಸ್ಕೋಡಾ ಗಾಮ/ಹುಬ್ಬಳಿ- ಹಜರತ್ ನಿಜಾಮುದ್ದೀನ್, ಬೆಂಗಳೂರು- ದಾನಪುರ, ಮುಂಬೈ ಕಂಟೋನ್ಮೆಂಟ್- ಬೆಂಗಳೂರು, ಮುಂಬೈ ಕಂಟೋನ್ಮೆಂಟ್-ಗದಗ ವಿಶೇಷ ರೈಲು ಸಂಚರಿಸಲಿವೆ. ಜೂ.2ರಿಂದ ಶಿವಮೊಗ್ಗ-ಯಶವಂತಪುರ, ಯಶವಂತಪುರ- ಹಜರತ್ ನಿಜಾಮುದ್ದೀನ್, ಬೆಂಗಳೂರು-ಮುಂಬೈ ಕಂಟೋನ್ಮೆಂಟ್, ಹೌರಾ-ಯಶವಂತಪುರ, ಗದಗ-ಮುಂಬೈ ಕಂಟೋನ್ಮೆಂಟ್ ನಡುವೆ ವಿಶೇಷ ರೈಲು ನಿತ್ಯ ಸಂಚರಿಸಲಿವೆ. ಜೂ.3ರಿಂದ ಹಜರಾತ್ ನಿಜಾಮುದ್ದೀನ್- ವಾಸ್ಕೋಡಾ ಗಾಮ/ಹುಬ್ಬಳ್ಳಿ ಹಾಗೂ ದಾನಪುರ-ಕೆಎಸ್​ಆರ್ ಬೆಂಗಳೂರು ವಿಶೇಷ ರೈಲುಗಳು ಪ್ರಯಾಣಿಸಲಿವೆ.
ವಿಯೆಟ್ನಾಂನಲ್ಲಿ ಒಂಬತ್ತನೇ ಶತಮಾನದ ಶಿವಲಿಂಗ ಪತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
