ಬೆಂಗಳೂರು:ಕರೊನಾ-ಲಾಕ್​ಡೌನ್​ನಿಂದ ತತ್ತರಿಸಿದ್ದ ಸಾರಿಗೆ ಕ್ಷೇತ್ರ ಸರ್ಕಾರದಿಂದ ಬಯಸಿದ್ದ ತೆರಿಗೆ ರಿಯಾಯಿತಿ ಬೇಡಿಕೆಗೆ ಕೊನೆಗೂ ಮನ್ನಣೆ ಸಿಕ್ಕಿಲ್ಲ. ಲಾಕ್​ಡೌನ್ ಆರಂಭದ ಎರಡು ತಿಂಗಳ ತೆರಿಗೆಯಷ್ಟನ್ನೇ ಮನ್ನಾ ಮಾಡಿ ಸರ್ಕಾರ ಕೈ ತೊಳೆದುಕೊಂಡಿದೆ. ಸಾರಿಗೆ ಕ್ಷೇತ್ರವು ಆರು ತಿಂಗಳ ತೆರಿಗೆ ವಿನಾಯಿತಿ ನೀಡಬೇಕು, ಜತೆಗೆ ಮುಂದಿನ ಮೂರು ತಿಂಗಳು ತೆರಿಗೆ ರಿಯಾಯಿತಿ ನೀಡಬೇಕೆಂದು ಬೇಡಿಕೆ ಸಲ್ಲಿಸಿತ್ತು.
ಏಳು ರಾಜ್ಯಗಳಲ್ಲಿ ಸಾರಿಗೆ ಕ್ಷೇತ್ರಕ್ಕೆ ಉತ್ತೇಜನ ನೀಡಲು ತೆರಿಗೆ ವಿನಾಯಿತಿ ನೀಡಿವೆ. ಕರ್ನಾಟಕದಲ್ಲಿ ಮಾತ್ರ ನೀಡಲು ಆಸಕ್ತಿ ತೋರಿಸಿಲ್ಲ ಎಂದು ಈ ಕ್ಷೇತ್ರದ ಹಲವು ಸಂಘಟನೆಯವರು ಹೋರಾಟವನ್ನೂ ನಡೆಸಿದ್ದರು. ಈ ವೇಳೆ ಅವರನ್ನು ಮನವೊಲಿಸಿ ಬೇಡಿಕೆ ಈಡೇರಿಸುವ ಬಗ್ಗೆ ಸರ್ಕಾರದಿಂದ ಭರವಸೆಗಳು ಬಂದಿದ್ದವು.
ಕಳೆದ ಏಳೆಂಟು ತಿಂಗಳಿಂದ ವಾಹನಗಳು ನಿಂತಿವೆ. ಸರ್ಕಾರ ತಮ್ಮ ಬೇಡಿಕೆ ಈಡೇರಿಸಬಹುದು ಎಂಬ ಆಶಾಭಾವನೆಯಲ್ಲೇ ಅಲ್ಲಲ್ಲಿ ವಾಹನಗಳನ್ನು ರಸ್ತೆಗಿಳಿಸುತ್ತಿದ್ದಾರೆ. ತಾರಾ ಹೋಟೆಲ್​ಗಳ, ಅಂತಾರಾಷ್ಟ್ರೀಯ ಪ್ರವಾಸಿಗರು ಮತ್ತು ನಿರೀಕ್ಷಿತ ಪ್ರಮಾಣದಲ್ಲಿ ಪ್ರವಾಸೋದ್ಯಮ ಶುರುವಾಗದ ಕಾರಣ ಟ್ಯಾಕ್ಸಿಗಳಿಗೆ ಗ್ರಾಹಕರಿಲ್ಲ. ವಾಹನಗಳನ್ನು ಹಾಗೆ ನಿಲ್ಲಿಸಿದರೂ ಹಾಳಾಗಿ ಹೋಗುತ್ತದೆ, ಸೇವೆ ಆರಂಭಿಸಿದರೆ ತೆರಿಗೆ ಹೊರೆ ತಡೆದುಕೊಳ್ಳಲಾಗದ ಸನ್ನಿವೇಶದಿಂದ ಮಾಲೀಕರು ಪರದಾಡುವಂತಾಗಿದೆ. ಸರ್ಕಾರ ತೆರಿಗೆ ವಿನಾಯಿತಿ ಜತೆಗೆ ಈ ಕ್ಷೇತ್ರಕ್ಕೆ ಪರಿಹಾರ ಕೊಡಬೇಕೆಂಬುದು ಸಂಘಟನೆಗಳ ಆಗ್ರಹವಾಗಿದೆ.
ವಾಹನಗಳು ಓಡಿದಷ್ಟು ಇಂಧನ ಮೇಲಿನ ತೆರಿಗೆಯಿಂದ ಸರ್ಕಾರದ ಬೊಕ್ಕಸಕ್ಕೆ ಹಣ ಬರುತ್ತದೆ. ಈ ಸಂಗತಿಯನ್ನಾದರೂ ಸಚಿವರು ಮತ್ತು ಅಧಿಕಾರಿಗಳು ಗಮನಿಸಬೇಕಿದೆ. ಆಟೋಮೊಬೈಲ್ ಕ್ಷೇತ್ರ ಸೇರಿ ಬಿಡಿಭಾಗದ ಉದ್ಯಮ ಚೇತರಿಸಿಕೊಳ್ಳಬೇಕೆಂದರೆ ಈ ವಾಹನಗಳು ರಸ್ತೆಗಿಳಿಯಬೇಕಾಗುತ್ತದೆ ಎಂದು ಸಂಘಟನೆ ಪ್ರಮುಖರು ಅಭಿಪ್ರಾಯಪಟ್ಟಿದ್ದಾರೆ.
Best essay writing services 2023
ತೆರಿಗೆ ನಿರೀಕ್ಷೆಯಲ್ಲಿ:ಸ್ಟೇಜ್ ಕ್ಯಾರಿಯೇಜ್, ಒಪ್ಪಂದ ವಾಹನ, ಶಾಲಾವಾಹನ, ಪ್ರೖೆವೇಟ್ ಸರ್ವೀಸ್ ವೆಹಿಕಲ್, ಮೋಟಾರು ಕ್ಯಾಬ್, ಮ್ಯಾಕ್ಸಿ ಕ್ಯಾಬ್, ಇತರ ಟ್ಯಾಕ್ಸಿ ಸೇರಿ ಸರಿ ಸುಮಾರು 4.8 ಲಕ್ಷ ವಾಹನ ಮಾಲಿಕರು ತೆರಿಗೆ ವಿನಾಯಿತಿ ನಿರೀಕ್ಷೆಯಲ್ಲಿದ್ದಾರೆ.
ಸರ್ಕಾರದಿಂದ ನೆರವು ಸಿಗುವ ಭರವಸೆಯ ಮೇಲೆ ಉದ್ಯಮ ನಿಂತಿದೆ. ದಸರಾ ಹಬ್ಬದ ಸಂದರ್ಭದಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಅವರಿಂದ ಸಿಹಿ ಸುದ್ದಿಗಾಗಿ ಕಾಯುತ್ತಿದ್ದೇವೆ.
|ಕೆ.ರಾಧಾಕೃಷ್ಣ ಹೊಳ್ಳ,ಅಧ್ಯಕ್ಷರು, ಕರ್ನಾಟಕ ರಾಜ್ಯ ಟ್ರಾವೆಲ್ಸ್​ ಮಾಲೀಕರ ಸಂಘ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − ten =
Remember me
