ಚಿತ್ರದುರ್ಗ:ಮೋದಿಕೇರ್ ವ್ಯವಹಾರದಲ್ಲಿ ತೊಡಗಿದ್ದ 8 ಜನ ಶಿಕ್ಷಕರ ಸಸ್ಪೆಂಡ್ ಆಗಿದ್ದಾರೆ. ಇವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಯ ಶಿಕ್ಷಕರಾಗಿದ್ದು ಇವರನ್ನು ಅಮಾತುಗೊಳಿಸಿ ಚಿತ್ರದುರ್ಗದ ಡಿಡಿಪಿಐ ರವಿಶಂಕರ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.
ಶಿಕ್ಷಕರಾದ ರವಿಕುಮಾರ್, ಶ್ರೀನಿವಾಸ್, ಸಿದ್ದಮ್ಮ, ಇಂದ್ರಾಣಿ, ಮಂಜುಳಾ ಸೇರಿ ಎಂಟು ಮಂದಿ ಶಿಕ್ಷಕರ ವಿರುದ್ಧ ಕೆ.ಮಲ್ಲಿಕಾರ್ಜುನ್ ಎಂಬುವವರು ದೂರು ನೀಡಿದ್ದರು. ಶಿಕ್ಷಣ ಇಲಾಖೆ ಆಯುಕ್ತರ ಸೂಚನೆ ಮೇರೆಗೆ 16 ಶಿಕ್ಷಕರ ವಿಚಾರಣೆ ನಡೆಸಲಾಗಿದೆ.
ಶಿಕ್ಷಕರ ಚೈನ್ ಲಿಂಕ್ ಮೂಲಕ ಮೋದಿ ಕೇರ್ ವ್ಯವಹಾರ ನಡೆಸಿದ್ದು ವಿಚಾರಣೆಯಲ್ಲಿ ಸಾಬೀತಾಗಿದೆ. ದೂರು, ವಿಚಾರಣೆ ಆಧರಿಸಿ ಭಾಗಿಯಾಗಿದ್ದ 8ಜನ ಶಿಕ್ಷಕರು ಸಸ್ಪೆಂಡ್ ಮಾಡಲಾಗಿದೆ.
ನಿಯಮದ ಪ್ರಕಾರ ಸರ್ಕಾರಿ ಶಿಕ್ಷಕರು ಅಧಿಕಾರ ವ್ಯಾಪ್ತಿಯ ಪ್ರದೇಶವನ್ನು ಬಿಟ್ಟು ಹೋಗುವುದು, ಖಾಸಗಿಯಾಗಿ ವಿದೇಶ ಪ್ರಯಾಣ ಮಾಡುವುದು, ವಂತಿಗೆ-ಉಡುಗೊರೆಗಳನ್ನು ಪಡೆಯುವುದು, ಖಾಸಗಿ ವ್ಯಾಪಾರ ನಡೆಸುವುದು, ಕಛೇರಿಯ ಕರ್ತವ್ಯದ ಆಚೆಗೆ ಖಾಸಗಿ ಕೆಲಸ ಮಾಡುವುದು, ಮುಂತಾದ ಕೆಲಸಗಳನ್ನು ಮಾಡಬಾರದು. ಈ ಶಿಕ್ಷಕರು ಸರ್ಕಾರಿ ವೃತ್ತಿಯಲ್ಲಿ ಇರುವಾಗಲೇ ಖಾಸಗಿಯಾಗಿ ವ್ಯಾಪಾರ-ಹೂಡಿಕೆಗಳಲ್ಲಿ ಇರುವುದರಿಂದ ಅವರನ್ನು ವಜಾ ಮಾಡಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 3 =
Remember me
