ಬೆಂಗಳೂರು:ಸರ್ಕಾರಿ ನೌಕರರು ಶಿಸ್ತುಬದ್ಧವಾಗಿ ಕಾರ್ಯನಿರ್ವಹಿಸಬೇಕೆಂದು ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ಹೇಳಿದ್ದಾರೆ. ನಗರದಲ್ಲಿ ಸೋಮವಾರ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂದ ನವೀಕೃತ ಕಟ್ಟಡ ಹಾಗೂ ಬಸವ ಸಭಾಂಗಣ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಧಿಕಾರಿಗಳಿಗೆ ಇಚ್ಛಾಶಕ್ತಿ ಇದ್ದರೆ ನಗರವನ್ನು ಉದ್ಯಾನಗರಿಯನ್ನಾಗಿ ನಿರ್ಮಾಣ ಮಾಡಬಹುದು. ಸೇವಾಮನೋಭಾವನೆ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಉತ್ತಮ ಅಧಿಕಾರಿಗಳು, ನೌಕರರರಿದ್ದಾರೆ. ನಿಷ್ಟಾವಂತರಾಗಿ ಬಾಳಿ, ಬಸವ ತತ್ವದಲ್ಲಿ ಸಾಗಿದಾಗ ಸಮಾಜ ಅಭಿವೃದ್ಧಿಯಾಗುತ್ತದೆ. ಬಿಬಿಎಂಪಿ ಸಮರ್ಪಕವಾಗಿ ಕಸ ವಿಲೇವಾರಿ ಮಾಡಬೇಕು. ರಸ್ತೆಗುಂಡಿಯಲ್ಲಿ ಬಿದ್ದು ಹಲವು ಮಂದಿ ಪ್ರಾಣ ಬಿಡುತ್ತಿದ್ದಾರೆ. ಹಾಗಾಗಿ, ಸೂಕ್ತವಾಗಿ ರಸ್ತೆ ಗುಂಡಿ ಮುಚ್ಚುವ ಕೆಲಸವಾಗಬೇಕು. ಸವಾರರು ಕಡ್ಡಾಯವಾಗಿ ಹೆಲ್ಮೆಟ್​ ಧರಿಸಿ ದ್ವಿಚಕ್ರವಾಹನ ಚಲಾಯಿಸಬೇಕು ಎಂದು ಸಲಹೆ ನೀಡಿದರು.
ಪೌರ ಕಾರ್ಮಿಕರಿಗೆ ಸಮರ್ಪಕವಾಗಿ ಸಮವಸ ಕೊಡದಿರುವುದು ಶೋಚನಿಯ ಸಂಗತಿ.ಇವರು ಸ್ವಚ್ಚತಾ ವಾರಿಯರ್​ರಾಗಿದ್ದು, ತಮ್ಮ ಆರೋಗ್ಯದ ಕಡೆ ಗಮನಹರಿಸದೆ ನಗರವನ್ನು ಸ್ವಚ್ಚತೆ ಮಾಡುತ್ತಿದ್ದಾರೆ. ತಂದೆ,ತಾಯಿ ಮತ್ತು ಹಳೆಯ ನೆನಪುಗಳು ಉನ್ನತ ಸ್ಥಾನಕ್ಕೆ ಹೋದರು ಮರೆಯಬಾರದು. ಆಸೆ ಪಡದೆ ನಿಸ್ವಾರ್ಥವಾಗಿ ಕೆಲಸ ಮಾಡಬೇಕು, ಗಿಡ, ಮರ ಪ್ರಕೃತಿಯಲ್ಲಿ ಬೆಳೆಯುತ್ತದೆ. ಹುಲಿ, ಸಿಂಹ ಪ್ರಾಣಿಗಳ ಬೇಟೆಯಾಡಿ ತಿನ್ನುತ್ತೇವೆ. ಅದರೆ, ಮನುಷ್ಯ ಪರಿಸರ ಹಾಳು ಮಾಡುತ್ತಿದ್ದಾನೆ ಎಂದು ಬಿ.ವೀರಪ್ಪ ತಿಳಿಸಿದರು. ಬಿಬಿಎಂಪಿ ವಿಶೇಷ ಆಯುಕ್ತ ಡಾ.ಅವಿನಾಶ್​ ಮೆನನ್​,ವಲಯ ಆಯುಕ್ತೆ ಸ್ನೇಹಲ್​, ಉಪ ಆಯುಕ್ತ ಮಂಜುನಾಥ ಸ್ವಾಮಿ, ಸಂದ ಅಧ್ಯ ಎ.ಅಮೃತ್​ರಾಜ್​,ಪದಾಧಿಕಾರಿರಾದ ಸಾಯಿಶಂಕರ್​, ಎ. ಜಿ.ಬಾಬಣ್ಣ, ಎಸ್​.ಜಿ.ಸುರೇಶ್​, ಕೆ.ಜಿ.ರವಿ ಮತ್ತಿತರರಿದ್ದರು.
ಗ್ರೇಟರ್​ ಬೆಂಗಳೂರು ಪ್ರಾಧಿಕಾರ ಅನುಷ್ಠಾನಕ್ಕೆ ಬಿಜೆಪಿ, ಜೆಡಿಎಸ್​ ವಿರೋಧ
ಜನಸ್ನೇಹಿ ಆಡಳಿತ:ಅಧಿಕಾರಿಗಳು, ನೌಕರರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸುಸಜ್ಜಿತ ಸಭಾಂಗಣ ನಿರ್ಮಾಣ ಮಾಡಿರುವುದು ಒಳ್ಳೆಯ ಬೆಳೆವಣಿಗೆ. ನಗರದಲ್ಲಿನ ಸಮಸ್ಯೆಗಳ ನಿವಾರಣೆಗೆ ನಮ್ಮ ಅಧಿಕಾರಿಗಳು, ನೌಕರರು ಹಗಲಿರುಳು ಶ್ರಮಿಸುತ್ತಿದ್ದಾರೆ. ಸಾರ್ವಜನಿಕರಿಗೆ ಜನಸ್ನೇಹಿ ಆಡಳಿತ ನೀಡುವುದು ನಮ್ಮ ಗುರಿಯಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್​ ಗಿರಿನಾಥ್​ ಹೇಳಿದರು.
ಬೆಂಗಳೂರು ನಗರದ ಅಭಿವೃದ್ಧಿಗೆ ಸರ್ಕಾರಿ ನೌಕರರು ಕೈಜೋಡಿಸಬೇಕು. ಸಾರ್ವಜನಿಕರ ಸಹಕಾರದಿಂದ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಹಾಗಾಗಿ, ಜನರು,ನೌಕರರು ಪರಸ್ಪರ ಸಾಮರಸ್ಯದಿಂದ ಸಮಸ್ಯೆಗಳ ನಿವಾರಣೆಗೆ ಆದ್ಯತೆ ನೀಡಬೇಕು.-ಆರ್​.ದೇವದಾಸ್​. ಹೈಕೋರ್ಟ್​ ನ್ಯಾಯಮೂರ್ತಿ.
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:4 × 1 =
Remember me
