ಬೆಂಗಳೂರು:ಸರ್ಕಾರಿ ನೌಕರರು ಆಡಳಿತ ವ್ಯವಸ್ಥೆಯ ಒಂದು ಭಾಗ. ಇದನ್ನು ಅರಿತುಕೊಂಡು ಸರ್ಕಾರ ನಮ್ಮ ಬೇಡಿಕೆಗೆ ಪೂರಕವಾಗಿ ಪರಿಗಣಿಸಿದೆ. 7ನೇ ವೇತನ ಆಯೋಗ ಜಾರಿಗೆ ಮಧ್ಯಂತರ ವರದಿಗೆ 30 ದಿನ ಕಾಲಾವಕಾಶ ಕೇಳಿತ್ತು ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಸುದ್ದಿಗೋಷ್ಠಿ ನಡೆಸಿ ಹೇಳಿದ್ದಾರೆ.
ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದನೆ ನೀಡಿರುವುದರಿಂದ ಮುಷ್ಕರವನ್ನು ಹಿಂತೆಗೆದುಕೊಳ್ಳುತ್ತಿದ್ದೇವೆ. ಗೈರಾಗಿರುವ ಎಲ್ಲಾ ನೌಕರರು ತಮ್ಮ ತಮ್ಮ ಕರ್ತವ್ಯ ಸ್ಥಳಕ್ಕೆ ಹಾಜರಾಗಬೇಕು ಎಂದರು.
ಇದನ್ನೂ ಓದಿ:ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿ ಮಾಡಿಲ್ಲ ಅಂದ್ರೆ ನಾವು ಮಾಡ್ತೀವಿ; ಮಾಜಿ ಸಿಎಂ ಸಿದ್ದರಾಮಯ್ಯ
ಸರ್ಕಾರ ಈ ಹಿಂದೆ ಮಧ್ಯಂತರ ಪರಿಹಾರ ಕೊಟ್ಟಿತ್ತು. ಅದರಂತೆ ಈ ಬಾರಿಯೂ ಪರಿಹಾರ ಭತ್ಯೆ ನೀಡಲು ಒಪ್ಪಿದೆ. ತಾತ್ಕಾಲಿಕ ಭತ್ಯೆ ನೀಡಲು ಸರ್ಕಾರ ನಿರ್ಧಾರ ಮಾಡಿದ್ದು, ಎನ್​ಪಿಎಸ್​​, ಒಪಿಎಸ್​ ಮಾಡಬೇಕು ಎಂದು ನಮ್ಮ ಬೇಡಿಕೆ ಇದೆ. ಬಿಜೆಪಿ ಸರ್ಕಾರ ಯಾವುದೇ ರಾಜ್ಯದಲ್ಲಿ ಎನ್​ಪಿಎಸ್​​, ಓಪಿಎಸ್ ಮಾಡಿಲ್ಲ. ಆದರೆ ಈ ಬಗ್ಗೆ ಸಿಎಂ ನಮ್ಮ ಸಂಘಟನೆ ಒತ್ತಾಯಕ್ಕೆ ಮಣಿದು ಬೇರೆ ರಾಜ್ಯದ ಅಧ್ಯಯನಕ್ಕೆ ಮುಂದಾಗಿದ್ದಾರೆ ಎಂದು ಹೇಳಿದರು.
ರಾಜ್ಯ ಸರ್ಕಾರ ನೌಕರರಿಗೆ ಉಚಿತ ಆರೋಗ್ಯ ವ್ಯವಸ್ಥೆ ಜಾರಿಗೆ ಮುಖ್ಯಮಂತ್ರಿ ಬೊಮ್ಮಾಯಿ ತೀರ್ಮಾನಿಸಿದ್ದಾರೆ. ಇದರಿಂದ 40 ಲಕ್ಷ ಕುಟುಂಬಗಳಿಗೆ ಲಾಭ ಆಗಲಿದೆ. ಇಂದಿನ ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆ ಆಗಿದೆ. ಸದ್ಯ ಸರ್ಕಾರ ಕೊಟ್ಟ ನಿರ್ಧಾರ ಸಮಾಧಾನ ತಂದಿದೆ. ತೃಪ್ತಿ ತಂದಿದೆಯಾ ಕೇಳಿದರೆ ಇಲ್ಲಾ, ಮುಂದೆ ಹೋರಾಟ ಇದ್ದೇ ಇದೆ. ಸದ್ಯ ಸರ್ಕಾರದ ಇತಿಮಿತಿ ಗಮನಿಸಿ ನಾವು ತೀರ್ಮಾನ ಒಪ್ಪಿದ್ದೇವೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + one =
Remember me
