ಬೆಂಗಳೂರು:ಕರೊನಾ ಹಾವಳಿ ನಡುವೆಯೇ ಜನರನ್ನು ಆತಂಕಕ್ಕೀಡು ಮಾಡಿರುವ ಮತ್ತೊಂದು ರೋಗವೆಂದರೆ ಕಪ್ಪು ಶಿಲೀಂಧ್ರ. ವೈದ್ಯಕೀಯ ಭಾಷೆಯಲ್ಲಿ ಮ್ಯೂಕರ್ ಮೈಕೋಸಿಸ್ ಎಂದು ಕರೆಯಲಾಗುವ ಈ ರೋಗ ಪತ್ತೆಗೆ ನಡೆಸುವ ಪರೀಕ್ಷೆ ದುಬಾರಿಯಾಗಿದ್ದು, ಸರ್ಕಾರ ಅದನ್ನೀಗ ಅರ್ಧಕ್ಕರ್ಧ ಕಡಿತಗೊಳಿಸಿ ಹೊಸ ದರವನ್ನು ನಿಗದಿಪಡಿಸಿದೆ.
ಈ ರೋಗದ ಇರುವಿಕೆಯನ್ನು ಪತ್ತೆ ಹಚ್ಚಿ ಖಚಿತಪಡಿಸಿಕೊಳ್ಳಲು ಸಿಟಿ ಹಾಗೂ ಎಂಆರ್​ಐ ಸ್ಕ್ಯಾನ್​ಗಳ ಸಂಯೋಜನೆಯ ಪರೀಕ್ಷೆ ಅಗತ್ಯವಾಗಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಇದಕ್ಕೆ ಸುಮಾರು 25ರಿಂದ 28 ಸಾವಿರ ರೂಪಾಯಿ ವಿಧಿಸುತ್ತಿದ್ದಾರೆ. ಹೀಗಾಗಿ ಈ ದರವನ್ನು ಖಾಸಗಿ ಆಸ್ಪತ್ರೆಗಳಿಗೆ ಅನ್ವಯಿಸುವಂತೆ ಸರ್ಕಾರವು 12 ಸಾವಿರ ರೂಪಾಯಿಗೆ ನಿಗದಿಪಡಿಸಿದೆ. ಇದು ಬಿಪಿಎಲ್ ಕಾರ್ಡು ಹೊಂದಿರುವವರು ಸೇರಿದಂತೆ ಎಲ್ಲರಿಗೂ ಒಂದೇ ಸಮನಾಗಿ ಅನ್ವಯಿಸಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಉಳಿದಂತೆ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ, ಸರ್ಕಾರದಿಂದ ನಡೆಸುವ ಸಂಸ್ಥೆಗಳಲ್ಲಿ, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕಪ್ಪು ಶಿಲೀಂಧ್ರ ರೋಗಪತ್ತೆಯನ್ನು ಉಚಿತವಾಗಿ ನಡೆಸುವಂತೆ ಸರ್ಕಾರ ಸೂಚಿಸಿದೆ.

ಅಲ್ಲದೆ ಈ ರೋಗ ಪತ್ತೆಗಾಗಿ ಪ್ರತ್ಯೇಕವಾಗಿ ನಡೆಸುವ ಸಿಟಿ ಅಥವಾ ಎಂಆರ್​ಐ ಸ್ಕ್ಯಾನ್​ಗೂ ದರನಿಗದಿಪಡಿಸಿರುವ ಸರ್ಕಾರ, ಎಪಿಎಲ್​ ಹಾಗೂ ಬಿಪಿಎಲ್​ ಕಾರ್ಡುದಾರರಿಗೆ ಈ ಕೆಳಗಿನ ದರವನ್ನು ನಿಗದಿ ಮಾಡಿದೆ.

ತಮ್ಮನ ಮದ್ವೆಗಾಗಿ 2 ದಿನ ರಜೆ ತೆಗೆದುಕೊಳ್ಳಲಿಕ್ಕೂ ಪತ್ರ ಬರೆದು ಕೋರಿಕೊಂಡ ಗ್ರಾಮ ಪಂಚಾಯತ್ ಸದಸ್ಯ!

ಈ ರೋಗ ಮಕ್ಕಳಲ್ಲಿ ಕಂಡುಬಂದಿರುವುದು ಇದೇ ಮೊದಲು!; ಇದರಲ್ಲಿ ಶೇ. 60ರಷ್ಟಿದೆ ಸಾವಿನ ಸಾಧ್ಯತೆ!

ಪ್ಯಾನ್​​ ಕಾರ್ಡ್​ಗೆ ಆಧಾರ್ ನಂಬರ್​​ ಲಿಂಕ್​ ಮಾಡಿಲ್ಲವೇ? ಹಾಗಿದ್ದರೆ ನಿಮಗಿದು ಬಹುಶಃ ಕಡೇ ಅವಕಾಶ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + five =
Remember me
