ಬೆಂಗಳೂರು:ಕರೊನಾ ಪರೀಕ್ಷಾ ವರದಿ ಬರುವ ಮುನ್ನವೇ ಕ್ವಾರಂಟೈನ್ ಮುಗಿಸಿ ಮನೆಗೆ ಹೋದ ರಾಗಿಗುಡ್ಡದ ತಾಯಿ ಮತ್ತು ಮಗನಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಅವರು ವಾಸವಿದ್ದ ಅಪಾರ್ಟ್​ವೆುಂಟ್ ಕಂಟೇನ್ಮೆಂಟ್ ಮಾಡಲಾಗಿದೆ.
ವಾರದ ಹಿಂದೆ ದೆಹಲಿ ಯಿಂದ ಬೆಂಗಳೂರಿಗೆ ಆಗಮಿ ಸಿದ್ದ ತಾಯಿ ಮತ್ತು ಮಗನನ್ನು ಬಿಸಿಎಂ ಹಾಸ್ಟೆಲ್​ನಲ್ಲಿ 7 ದಿನಗಳ ಕ್ವಾರಂಟೈನ್ ಮಾಡಲಾಗಿತ್ತು. ಇಬ್ಬರ ಗಂಟಲು ದ್ರವ ಸಂಗ್ರಹಿಸಲಾಗಿದ್ದು, ವರದಿ ಬರುವುದು ತಡವಾಗಿತ್ತು. ಜೆ.ಪಿ. ನಗರದ ರಾಗಿಗುಡ್ಡ ನಿವಾಸಿಗಳಾಗಿರುವ ಅವರು, ಮನೆಗೆ ತೆರಳಿದ ಎರಡು ದಿನದ ನಂತರ ಪಾಸಿಟಿವ್ ವರದಿ ಬಂದಿದೆ.
ನೂತನ ಮಾರ್ಗಸೂಚಿಯೇ ಕಂಟಕ: ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ನೂತನ ಮಾರ್ಗಸೂಚಿ ಅನ್ವಯ, ಮಹಾರಾಷ್ಟ್ರ ಹೊರತುಪಡಿಸಿ ಉಳಿದ ಎಲ್ಲ ರಾಜ್ಯಗಳು ಹಾಗೂ ವಿದೇಶಗಳಿಂದ ಬಂದ ಪ್ರಯಾಣಿಕರುನ್ನು ಹೋಂ ಕ್ವಾರಂಟೈನ್ ಮಾಡಬೇಕು. ಮಹಾರಾಷ್ಟ್ರದಿಂದ ಬಂದ ಪ್ರಯಾಣಿಕರಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಅವರನ್ನು 7 ದಿನ ಸಾಂಸ್ಥಿಕ ಕ್ವಾರಂಟೈನ್​ನಲ್ಲಿರಿಸಿ, ಕರೊನಾ ಪರೀಕ್ಷೆಗೆ ಒಳಪಡಿಸಬೇಕು. ಒಂದೆಡೆ, ಪರೀಕ್ಷಾ ವರದಿ ಬರುವುದು ವಿಳಂಬವಾಗುತ್ತಿದೆ. ಇನ್ನೊಂದೆಡೆ, ಕ್ವಾರಂಟೈನ್ ಅವಧಿ ಮುಗಿಯುತ್ತಲೇ ಜನರನ್ನು ಮನೆಗೆ ಕಳುಹಿಸಬೇಕಿದೆ. ಆದರೆ, ಜನರು ಮನೆಗೆ ತೆರಳಿದ ಬಳಿಕ ಬರುತ್ತಿರುವ ವರದಿಗಳಲ್ಲಿ ಕೆಲವು ಪಾಸಿಟಿವ್ ಆಗಿವೆ.
ಗೊಂದಲ ನಿವಾರಣೆಗೆ ಮೊರೆ
ರಾಜ್ಯದಲ್ಲಿ ಹೆಚ್ಚು ಸೋಂಕಿತರಿರುವ ಜಿಲ್ಲೆಗಳಿಂದ ಸ್ವಾಬ್​ಗಳನ್ನು ಬೆಂಗಳೂರಿನ ಕರೊನಾ ಪರೀಕ್ಷಾ ಕೇಂದ್ರಗಳಿಗೆ ಕಳಿಸಲಾಗುತ್ತಿದೆ. ಹೀಗಾಗಿ ಪರೀಕ್ಷಾ ವರದಿಗಳು ವಿಳಂಬವಾಗುತ್ತಿದ್ದು, ಕ್ವಾರಂಟೈನ್ ಮಾಡುವವರನ್ನು ಮನೆಗೆ ಕಳಿಸುವ ಕುರಿತು ಗೊಂದಲ ಉಂಟಾಗುತ್ತಿದೆ. ಈ ವಿಚಾರವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಲಾಗಿದ್ದು, ಪರಿಹಾರ ಸೂಚಿಸಲಿದ್ದಾರೆ. ಶುಕ್ರವಾರದಿಂದ (ಜೂ.5) 24 ಗಂಟೆಯೊಳಗೆ ಸೋಂಕು ವರದಿಗಳು ಬರುವ ಸಾಧ್ಯತೆ ಇದ್ದು, ಗೊಂದಲ ನಿವಾರಣೆಯಾಗಲಿದೆ ಎಂದು ಬಿಬಿಎಂಪಿ ಆಯುಕ್ತ ಅನಿಲ್​ಕುಮಾರ್ ತಿಳಿಸಿದ್ದಾರೆ.
ಬ್ಯಾಂಕ್ ಸೀಲ್​ಡೌನ್
ಮಲ್ಲೇಶ್ವರದ ಪಂಜಾಬ್ ನ್ಯಾಷನಲ್ ಬ್ಯಾಂಕ್​ನ ಹೌಸ್ಕೀಪಿಂಗ್ ಕೆಲಸ ಮಾಡುವ ಮಹಿಳೆಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಬ್ಯಾಂಕ್ ಸೀಲ್​ಡೌನ್ ಮಾಡಲಾಗಿದೆ. ಉದ್ಯೋಗಿಗಳನ್ನು ಕ್ವಾರಂಟೈನ್ ಮಾಡಲಾಗಿದ್ದು, ಕಾರ್ಯ ಸ್ಥಗಿತಗೊಂಡಿದೆ. ಹೀಗಾಗಿ, ಬ್ಯಾಂಕ್ ವ್ಯವಹಾರಕ್ಕಾಗಿ ಆಗಮಿಸಿದ ಸಾರ್ವಜನಿಕರು ಪರದಾಡಬೇಕಾಯಿತು.
ಬೇಡಮ್ಮ ಆನ್​ಲೈನ್ ಗುಮ್ಮ: ತಜ್ಞರು, ವೈದ್ಯರು, ನಟರ ಆಕ್ರೋಶ, ಇಲಾಖೆಯಲ್ಲೇ ಆಕ್ಷೇಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − 3 =
Remember me
