ಧಾರವಾಡ:ಲಾಕ್​ಡೌನ್​ನಿಂದಾಗಿ ಬೆಂಗಳೂರಿನಲ್ಲಿ ಸಿಲುಕಿದ್ದ ಮೂಕ ಮತ್ತು ಕಿವುಡ ದಂಪತಿಗೆ ಅಂತೂ ಬೆಂಗಳೂರಿನಿಂದ ತವರಿಗೆ ಮರಳುವ ಭಾಗ್ಯ ದೊರೆತಿದೆ.
ತಾಲೂಕಿನ ಲಕಮಾಪೂರ ಗ್ರಾಮದ ದೀಪಕ್ ಹಾಗೂ ಬಸವ್ವ ಗಬ್ಬೂರ ದಂಪತಿ, ‘ಧಾರವಾಡಕ್ಕೆ ಕರೆಸಿಕೊಳ್ಳಿ’ ಎಂದು ಕೈ ಮತ್ತು ಬಾಯಿ ಸನ್ನೆ ಮೂಲಕ ವಿಡಿಯೋ ಮಾಡಿ ಪಾಲಕರಿಗೆ ಮನವಿ ಮಾಡಿದ್ದರು. ಲಾಕ್​ಡೌನ್ ಸಮಯದಲ್ಲಿ ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಕರೆಸಿಕೊಳ್ಳಲು ದಂಪತಿಯ ಪಾಲಕರು ಮಾಡಿದ್ದ ಎಲ್ಲ ಪ್ರಯತ್ನಗಳೂ ವಿಫಲವಾಗಿದ್ದವು.
ಬೆಂಗಳೂರಿನ ಹೊಂಗಸಂದ್ರದ ಸಮರ್ಥನಂ ಅಂಗವಿಕಲ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ದೀಪಕ್ ವಿವಾಹ ಬಸವ್ವ ಜೊತೆ ಕಳೆದ ವರ್ಷ ನಡೆದಿತ್ತು. ಇಬ್ಬರೂ ಬೆಂಗಳೂರಿನಲ್ಲಿ ನೆಲೆಸಿದ್ದರು. ಬಸವ್ವ ಗರ್ಭಿಣಿಯಾಗಿದ್ದು, ಆಕೆಗೆ ಬೆಂಗಳೂರಿನಲ್ಲಿ ಹೆರಿಗೆಯಾದರೆ ಆರೈಕೆ ಮಾಡಲು ಪತಿ ಹೊರತುಪಡಿಸಿ ಸಂಬಂಧಿಕರಾರೂ ಇಲ್ಲ ಎಂದು ಅಳಲು ತೋಡಿಕೊಂಡಿದ್ದರು. ತವರಿಗೆ ವಾಪಸ್ಸಾಗಬೇಕೆಂದರೆ ದಂಪತಿಗೆ ಮಾತು ಬರಲ್ಲ. ಕಿವಿ ಕೇಳುವುದಿಲ್ಲ. ಇತ್ತ ಪಾಲಕರು ಜಿಲ್ಲಾಡಳಿತಕ್ಕೆ ಮನವಿ ಮಾಡಿ, ಇಬ್ಬರನ್ನೂ ಕರೆತರುವಂತೆ ಕೋರಿದ್ದರು.
ಈ ಕುರಿತು ವಿಜಯವಾಣಿ ಏ.29ರಂದು ವರದಿ ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿರುವ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಟಾಸ್ಕ್ ಪೋರ್ಸ್ ಮತ್ತು ಪ್ರಧಾನ ಕಾರ್ಯದರ್ಶಿ, ದೀಪಕ್ ಹಾಗೂ ಬಸವ್ವ ದಂಪತಿಯನ್ನು ಗುರುವಾರ ರಾತ್ರಿ ಬೆಂಗಳೂರಿನಿಂದ ಕಳುಹಿಸಿ ಕೊಟ್ಟಿದ್ದು ಶುಕ್ರವಾರ ಧಾರವಾಡ ತಲುಪಲಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
